PrajaBharat : ಕನ್ನಡ ಮಾಧ್ಯಮ ಲೋಕಕ್ಕೆ ಪ್ರಜಾ ಭಾರತ್​ ವೆಬ್​ ಪೋರ್ಟಲ್​ ಲೋಕಾರ್ಪಣೆ

ರಾಜ್ಯಸ್ಥಳೀಯ ಸುದ್ದಿರಾಜಕೀಯ

ರಾಘವೇಂದ್ರ ಹೆಚ್​​.ಎ

4/6/20251 min read

ಕನ್ನಡ ಮಾಧ್ಯಮ ಲೋಕಕ್ಕೆ ಇಂದಿನಿಂದ (ಏಪ್ರಿಲ್​.06) ಡಿಜಿಟಲ್​ ಅವತರಣಿಕೆಯ ಮೂಲಕ ನಮ್ಮ ಪ್ರಜಾ ಭಾರತ್​ ಎಂಬ ನೂತನ ನ್ಯೂಸ್​ ವೆಬ್​ ಪೋರ್ಟಲ್​ ಪಾದಾರ್ಪಣೆ ಮಾಡುತ್ತಿದೆ.

ಬರೆದು ಬದುಕುತ್ತ ಬಂದವರು ನಾವು. ಹಿಂದೆ ಟಿವಿ, ನಂತರ ಪತ್ರಿಕೆ, ಡಿಜಿಟಲ್ ಮಾಧ್ಯಮಗಳಲ್ಲಿ ಕೆಲಸ ಮಾಡಿ ಇದೀಗ ನಮ್ಮದೇ ವೆಬ್​ ಪೋರ್ಟಲ್​ ಮೂಲಕ ಲೇಖನಿ​ ಹಿಡಿದು ಬರಬೇಕು. ಮಾತಾಡಬೇಕು, ನಮ್ಮ ತಿಳಿವಿನ ಆಳ ಹರಡುತ್ತ ಸಾಗಬೇಕು ಎಂಬುದೇ ಪ್ರಜಾ ಭಾರತ್​​ ನ ಮುಖ್ಯ ಉದ್ದೇಶವಾಗಿದೆ.

ರಾಜ್ಯದ ಜನತೆಯ ಮನೆ ಮಾತಾಗಿರುವ “ಟಿವಿ9 ಕನ್ನಡ, ಉದಯಾ ಟಿವಿ, ಸಮಯ ನ್ಯೂಸ್​, ಈಟಿವಿ, ಸುದ್ದಿ ಟಿವಿ, ಟಿವಿ5 ಕನ್ನಡ, ಪವರ್​ ಟಿವಿ” ದೃಶ್ಯ ಮಾಧ್ಯಮಗಳೂ ಸೇರಿದಂತೆ ನಾಡಿನ ನೆಚ್ಚಿನ ದಿನಪತ್ರಿಕೆಗಳಾದ ಸಂಯುಕ್ತ ಕರ್ನಾಟಕ, ವಿಜಯವಾಣಿ ಪತ್ರಿಕೆಗಳಲ್ಲಿ ಕೆಲಕಾಲ ವರದಿಗಾರರಾಗಿ, ರಾ.ನಗರವಾಣಿ ದಿನಪತ್ರಿಕೆಯಲ್ಲಿ ಜಿಲ್ಲಾ ವರದಿಗಾರರಾಗಿ, ಬಳಿಕ ನ್ಯೂಸ್​ ಏಜೆನ್ಸಿ (UNI) ಯಲ್ಲಿ ಹಿರಿಯ ವರದಿಗಾರರಾಗಿ ಕೆಲಸ ಮಾಡಿ ಇದೀಗ ನಮ್ಮದೇ ಆದ ಪ್ರಜಾ ಭಾರತ್​ ವೇದಿಕೆ ಸೃಷ್ಟಿಸಿಕೊಂಡು ನಿಮ್ಮ ಮುಂದೆ ಬರುತ್ತಿದ್ದೇವೆ.

ಪ್ರಜಾ ಭಾರತ್​ ಒಂದು ಹೊಸ ವೇದಿಕೆ. ಇದನ್ನು ನಿಮ್ಮ ವೇದಿಕೆಯನ್ನಾಗಿಸುವುದು ನಮ್ಮಗುರಿ. ಪ್ರಜಾಭಾರತ್ ಬದಲಾದ ಕಾಲಘಟ್ಟದಲ್ಲಿ ನಮ್ಮೆಲ್ಲರ ಆತ್ಮಸಾಕ್ಷಿಗಳನ್ನು ಬಡಿದು ಏಳಿಸುವ ವೇದಿಕೆ. ಸತ್ಯಕ್ಕಾಗಿ ಹಂಬಲಿಸುವ ವೇದಿಕೆ. ಸದ್ಯದಲ್ಲೇ ಯೂಟ್ಯೂಬ್, ಫೇಸ್ ಬುಕ್, ಇನ್‌ಸ್ಟಾಗ್ರಾಂ, ಎಕ್ಸ್ ಹೀಗೆ ಎಲ್ಲ ಕಡೆಗಳಲ್ಲೂ ನಿಮ್ಮ ಈ ಪ್ರಜಾ ಭಾರತ್ ಇರುತ್ತದೆ. ಇದರ ಮೂಲಕವೇ ನಾವು ಮಾತನಾಡುತ್ತೇವೆ. ಮಾತಿನ ಧ್ವನಿ ಸೋಲದಂತೆ. ನಿಮ್ಮ ಎಲ್ಲ ಬಗೆಯ ಬೆಂಬಲವನ್ನೂ ಬೇಡುತ್ತೇವೆ. ಜತೆಗೆ, ನಿಂತುಕೊಳ್ಳಿ, ನಿಮಗೆ ನಿರಾಶೆಯಾಗದಂತೆ ಬದುಕುತ್ತೇವೆ.

ಇತ್ತೀಚಿನ ಸುದ್ದಿ