ಜೂ.27ಕ್ಕೆ ದೊಡ್ಡಬಳ್ಳಾಪುರದಲ್ಲಿ ವಿಜೃಂಭಣೆಯಿಂದ ನಾಡಪ್ರಭು ಕೆಂಪೇಗೌಡ ಜಯಂತಿ ಆಚರಣೆಗೆ ಸಿದ್ದತೆ
ಸ್ಥಳೀಯ ಸುದ್ದಿ


ದೊಡ್ಡಬಳ್ಳಾಪುರ: ಪ್ರತಿ ವರ್ಷದಂತೆ ಈ ವರ್ಷವು ತಾಲ್ಲೂಕಿನಲ್ಲಿ ನಾಡಪ್ರಭು ಕೆಂಪೇಗೌಡ ರ 516ನೇ ಜಯಂತೋತ್ಸವವನ್ನು ಅದ್ದೂರಿಯಾಗಿ ಆಚರಿಸಲು ತೀರ್ಮಾನಿಸಲಾಗಿದ್ದೂ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಕೆಂಪೇಗೌಡ ಜಯಂತ್ಯೋತ್ಸವ ಆಚರಣಾ ಸಮಿತಿ ತಾಲ್ಲೂಕು ಅಧ್ಯಕ್ಷ ಟಿ.ವಿ ಲಕ್ಷ್ಮೀನಾರಾಯಣ್ ಅವರು ತಿಳಿಸಿದರು.
ನಗರದ ಒಕ್ಕಲಿಗರ ಭವನದಲ್ಲಿ ಇಂದು ನಡೆದ ಪತ್ರಿಕಾಗೋಷ್ಟಿಯಲ್ಲಿ ಅವರು ಮಾತನಾಡಿದರು,
ಜೂನ್.27ರಂದು ಶುಕ್ರವಾರ ಬೆಳಗ್ಗೆ 11 ಗಂಟೆಗೆ ನೆಲದಾಂಜನೆಯ ಸ್ವಾಮಿ ದೇವಾಲಯದ ಆವರಣದಿಂದ ಹಳೆ ಬಸ್ ನಿಲ್ದಾಣದ ಮಾರ್ಗವಾಗಿ ತಾಲ್ಲೂಕು ಕಚೇರಿಯ ವರೆಗೆ ಬೆಳ್ಳಿ ರಥದಲ್ಲಿ ನಾಡಪ್ರಭು ಶ್ರೀಕೆಂಪೇಗೌಡ ರ ಪ್ರತಿಮೆಯನ್ನು ಮೆರವಣಿಗೆ ಮಾಡಲಾಗುವುದು. ಈ ವೇಳೆ ರಾಜ್ಯದ ಹೆಸರಾಂತ ಜಾನಪದ ಕಲಾವಿದರ ತಂಡಗಳು ಹಾಗೂ ಇನ್ನೂ ಅನೇಕ ವಾದ್ಯಗಳು ಈ ಮೆರವಣಿಗೆಯಲ್ಲಿ ಭಾಗಿಯಾಗಲಿದೆ ಎಂದರು.
ಈ ಸಮಾರಂಭದಲ್ಲಿ ತಾಲ್ಲೂಕಿನ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಮಾರಭ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿಕೊಂಡರು. ಇದೇ ವೇಳೆ ಪ್ರತಿ ವರ್ಷದಂತೆ ಪ್ರತಿಭಾ ಪುರಸ್ಕಾರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಅವರು ಹೇಳಿದರು.
ಈ ಪತ್ರಿಕಾಗೋಷ್ಠಿಯಲ್ಲಿ ನರಸಿಂಹ, ತಿ.ರಂಗರಾಜು, ಆನಂದಮೂರ್ತಿ, ಶಿವಣ್ಣ, ಮಂಡಿಬ್ಯಾಡರಹಳ್ಳಿ ಅಶ್ವತ್ಥನಾರಾಯಣ ಗೌಡ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಶಾಂತಮ್ಮ, ಹೆಚ್.ಎಂ ಶ್ರೀನಿವಾಸ್ ಗೌಡ, ಅಶ್ವತ್ಥಗೌಡ, ದೀಪು ಗೌಡ, ಸಿ.ನಾಗೇಶ್ ಗೌಡ, ಶಿವಕುಮಾರ್, ಅಶೋಕ್ ಕುಮಾರ್, ಲಕ್ಷ್ಮಮ್ಮ ಮತ್ತು ರತ್ನಮ್ಮ ಇತರರು ಇದ್ದರು.