ಪಾಟ್ನಾ ವಿಮಾನ ನಿಲ್ದಾಣದಲ್ಲಿ ಯುವ ಕ್ರಿಕೇಟಿಗ ವೈಭವ್ ಸೂರ್ಯವಂಶಿ ಭೇಟಿಯಾದ ಪ್ರಧಾನಿ ಮೋದಿ.

ದೇಶ/ವಿದೇಶ

ಧರ್ಮ ಬಸವನಪುರ.

5/30/20251 min read

ಪಾಟ್ನಾ: ಪ್ರಧಾನಿ ನರೇಂದ್ರ ಮೋದಿ ಅವರು ಪಾಟ್ನಾ ವಿಮಾನ ನಿಲ್ದಾಣದಲ್ಲಿ ಯುವ ಕ್ರಿಕೆಟರ್ 14 ವರ್ಷದ ವೈಭವ್ ಸೂರ್ಯವಂಶಿ ಮತ್ತು ಅವರ ಕುಟುಂಬವನ್ನು ಭೇಟಿಯಾದರು. ಈ ಯುವ ಆಟಗಾರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025ರ ಆವೃತ್ತಿಯಲ್ಲಿ ತಮ್ಮ ಅಸಾಧಾರಣ ಪ್ರದರ್ಶನದಿಂದ ದೇಶದ ಗಮನ ಸೆಳೆದಿದ್ದಾರೆ.

ಎರಡು ದಿನಗಳ ಬಿಹಾರ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿಯವರು ಶುಕ್ರವಾರ ವಿಮಾನ ನಿಲ್ದಾಣದಲ್ಲಿ ವೈಭವ್ ಅವರನ್ನು ಭೇಟಿ ಮಾಡಿದ್ದಾರೆ

ವೈಭವ್ ಪೋಷಕರ ಬಳಿಯೂ ಆತನ ಕ್ರಿಕೆಟ್ ಆಸಕ್ತಿ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಅವರೂ ಮಗನ ಬಗ್ಗೆ ವಿವರಣೆ ನೀಡಿದ್ದಾರೆ. ಮೋದಿ ಕೂಡಾ ಪಕ್ಕದ್ಮನೆ ಹುಡುಗನ ಮಾತನಾಡಿಸುವಂತೆ ಆತ್ಮೀಯವಾಗಿ ಮಾತನಾಡಿಸಿದ್ದಾರೆ. ಈ ವೇಳೆ ಮೋದಿ ಕಾಲಿಗೆ ವೈಭವ್ ನಮಸ್ಕರಿಸಿದ್ದು, ಮೋದಿ ಕೂಡಾ ಬೆನ್ನುತಟ್ಟಿ ಶುಭ ಹಾರೈಸಿದ್ದಾರೆ.

ಎಕ್ಸ್'ನಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ಮೋದಿ, 'ಪಾಟ್ನಾ ವಿಮಾನ ನಿಲ್ದಾಣದಲ್ಲಿ ಯುವ ಕ್ರಿಕೆಟಿಗ ವೈಭವ್ ಸೂರ್ಯವಂಶಿ ಹಾಗೂ ಅವರ ಕುಟುಂಬ ಸದಸ್ಯರನ್ನು ಭೇಟಿ ಮಾಡಿದೆ. ಅವರ ಕ್ರಿಕೆಟ್ ಸಾಧನೆ ಕುರಿತು ದೇಶವೇ ಮಾತನಾಡುತ್ತಿದೆ. ಅವರಿಗೆ ಒಳಿತಾಗಲಿ' ಎಂದು ಆರೈಸಿದ್ದಾರೆ.

ರಾಜಸ್ಥಾನ್ ರಾಯಲ್ಸ್ (RR) ಪರ ಆಡಿದ ಸೂರ್ಯವಂಶಿ, ಕೇವಲ ಏಳು ಪಂದ್ಯಗಳಲ್ಲಿ 252 ರನ್ ಗಳಿಸಿದ್ದಾರೆ. ಜೈಪುರದಲ್ಲಿ ಗುಜರಾತ್ ಟೈಟಾನ್ಸ್ (GT) ವಿರುದ್ಧ ನಡೆದ ಪಂದ್ಯದಲ್ಲಿ ಸ್ಫೋಟಕ ಶತಕ ಸಿಡಿಸುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದ್ದರು.