ಕ್ಷೇತ್ರದ ಅಭಿವೃದ್ಧಿಗೆ ಅನುದಾನ ಕೊಡಿ : ಮಂಜುಳಾ ಅರವಿಂದ ಲಿಂಬಾವಳಿ.

ಸ್ಥಳೀಯ ಸುದ್ದಿ

ಧರ್ಮ ಬಸವನಪುರ.

9/25/20251 min read

ಮಹದೇವಪುರ: ಕಾಂಗ್ರೆಸ್ ಸರ್ಕಾರ ನೀಡುತ್ತಿರುವ ಅನುದಾನದಲ್ಲಿ ಕ್ಷೇತ್ರಕ್ಕೆ ಮೂಲಭೂತ ಸೌಕರ್ಯ ಒದಗಿಸಲು ಸಾಧ್ಯವಾಗುತ್ತಿಲ್ಲ. ಅಧಿಕ ಪ್ರಮಾಣದ ತೆರಿಗೆ ಕಟ್ಟುವ ನಮ್ಮ ಮಹದೇವಪುರ ಕ್ಷೇತ್ರಕ್ಕೆ ಹೆಚ್ಚು ಅನುದಾನ ನೀಡಬೇಕೆಂದು ಶಾಸಕ ಮಂಜುಳಾ ಅರವಿಂದ ಲಿಂಬಾವಳಿ ಆಗ್ರಹಿಸಿದರು.

ಆವಲಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿ ಯ ಚೀಮಸಂದ್ರದಲ್ಲಿ ಹಮ್ಮಿಕೊಂಡಿದ ಗ್ರಾಮ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ಮಹದೇವಪುರ ಕ್ಷೇತ್ರ ಬಹಳ ದೊಡ್ಡದಾಗಿದೆ. ಕಳೆದ ಹದಿನೈದು ವರ್ಷಗಳಿಂದ ಕ್ಷೇತ್ರದ ಅಭಿವೃದ್ಧಿ ಸಾಕಷ್ಟು ಅನುದಾನಗಳನ್ನ ತಂದು ಹಾಕಿದರು ಸಾಕಗುತ್ತಿಲ್ಲ.ಐಟಿಬಿಟಿ ಕಂಪನಿಯಗಳು ಇರುವ ನಮ್ಮ ಕ್ಷೇತ್ರ ಅತೀ ವೇಗವಾಗಿ ಬೆಳೆಯುತ್ತಿದೆ. ಪ್ರತಿವರ್ಷ ನೂರಾರು ಕೋಟಿ ರೂಪಾಯಿ ತಂದು ಅಭಿವೃದ್ಧಿ ಮಾಡಬೇಕು ಆದರೆ ಕಾಂಗ್ರೆಸ್ ಸರ್ಕಾರ ಅನುದಾನಗಳನ್ನ ಕೊಡುತ್ತಿಲ್ಲ ಎಂದು ದೂರಿದರು.ಸಿಗುತ್ತಿರುವ ಅನುದಾನದಲ್ಲಿ ಮೂಲಭೂತ ಸೌಕರ್ಯ ಒದಗಿಸಲು ಪ್ರಮಾಣಿಕವಾಗಿ ಮಾಡುತ್ತಿದ್ದೇವೆ ಎಂದರು.

ಇದೇ ವೇಳೆ ಹಲವಾರು ಗ್ರಾಮಗಳಲ್ಲಿ ಜಲಜೀವನ್ ಕಾಮಗಾರಿಯು ನೆನೆಗುದ್ದಿಗೆ ಬಿದ್ದಿರುವುದಕ್ಕೆ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು.ಅಭಿವೃದ್ಧಿ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ಒತ್ತುವರಿಯಾಗಿರುವ ಸರ್ಕಾರಿ ಜಮೀನನ್ನು ತೆರವುಗೊಳಿಸಿ ಸಂರಕ್ಷಣೆ ಮಾಡಬೇಕೆಂದು ಅಧಿಕಾರಿಗಳಿಗೆ ತಿಳಿಸಿದರು

ಮಾಜಿ ಸಚಿವ ಅರವಿಂದ ಲಿಂಬಾವಳಿ ಸಾವಿರಾರು ಕೋಟಿ ರೂ. ಅನುದಾನ ತಂದು ಕ್ಷೇತ್ರದ ಗ್ರಾಮಾಂತರ ಭಾಗಗಳಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ಆದರೆ, ಕೆಲ ಕಾಮಗಾರಿಗಳು ಅರ್ಧಕ್ಕೆ ನಿಂತಿದ್ದು, ಶೀಘ್ರ ಪೂರ್ಣಗೊಳಿಸಬೇಕಾಗಿದೆ ಆದಷ್ಟು ಬೇಗ ಎಲ್ಲವನ್ನೂ ಸರಿಪಡಿಸಲಾಗುತ್ತೆ ಎಂದರು. 

ಸಾರ್ವಜನಿಕರು ಸ್ಮಶಾನಕ್ಕೆ ಜಾಗವನ್ನ ಕೇಳಿದರು. ಕೆಲವು ಗ್ರಾಮಗಳಲ್ಲಿ ಇಪ್ಪತ್ತು ವರ್ಷಗಳಿಂದ ವಾಸವಾಗಿದ್ದರು ಹಕ್ಕು ಪತ್ರಗಳಿಲ್ಲದೇ ಇರುವುದನ್ನ ಶಾಸಕರ ಗಮನಕ್ಕೆ ತಂದರು.ರಾಜಕಾಲುವೆಗಳನ್ನ ಒತ್ತುವರಿ ಮಾಡಿಕೊಂಡಿರುವ ಬಗ್ಗೆ ಮಾಹಿತಿಯನ್ನ ನೀಡಿದರು ಸಾರ್ವಜನಿಕ ದೂರುಗಳಿಗೆ ಸ್ಪಂದಿಸಿ ಕೂಡಲೇ ಕ್ರಮ ಕೈಗೊಳ್ಳವುದಾಗಿ ಭರವಸೆ ನೀಡಿದರು.

ಬೆಂಗಳೂರು ಪೂರ್ವ ತಾಪಂ ಕಾರ್ ನಿರ್ವಾಹಕ ಅಧಿಕಾರಿ ವಸಂತ್‌ಕುಮಾ‌ರ್, ಗ್ರಾಪಂ ಅಧ್ಯಕ್ಷ ಶಿಲ್ಪಾ ನಾಗರಾಜ್, ಉಪಾಧ್ಯಕ್ಷ ರವಿ, ಸ ಸದಸ್ಯರಾದ ನಂಜಪ್ಪ, ಅರುಣ್, ವಿರೇನಹಳ್ಳಿ ಕೃಷ್ಣ ಪಿಡಿಒ ನವೀತಾ ತೇಜುಗೌಡ, ಕಾರ್ಯದರ್ಶಿ ಅಂಬರೀಶ್ ಮತ್ತಿತರರಿದ್ದರು.