ಬಾಂಗ್ಲಾ ವಲಸಿಗರ ವಿರುದ್ಧ ಜನ ಜಾಗೃತಿ ಅಭಿಯಾನ. ಅಕ್ರಮ ವಲಸಿಗರ ಗಡೀಪಾರಿಗೆ ಒತ್ತಾಯ

ಸ್ಥಳೀಯ ಸುದ್ದಿರಾಜಕೀಯ

ಧರ್ಮ ಬಸವನಪುರ.

7/14/20251 min read

ಮಹದೇವಪುರ: ಮಹದೇವಪುರ ಬಿಜೆಪಿ ಮಂಡಲದಿಂದ ಒಟ್ಟು 5 ತಂಡದಿಂದ ಕ್ಷೇತ್ರದಲ್ಲಿ ಅಕ್ರಮ ಬಾಂಗ್ಲಾ ವಲಸಿಗರ ಕುರಿತು ಸರ್ವೆ ಮಾಡಲಾಗಿದ್ದು, ಏಜೆಂಟ್ ಮೂಲಕ ನಕಲಿ ಆಧಾರ್ ಕಾರ್ಡ್ ಮತ್ತು ವೋಟರ್ ಐಡಿ ಪಡೆದು ಅಕ್ರಮವಾಗಿ ಬಾಂಗ್ಲಾ ವಲಸಿಗರು ವಾಸ್ತವ್ಯ ಹೂಡಿರುವುದು ಪತ್ತೆ ಆಗಿದೆ.

ಮಹದೇವಪುರ ಕ್ಷೇತ್ರದ ರಾಮಗೊಂಡನಹಳ್ಳಿ ಸರ್ಕಾರಿ ಶಾಲಾ ಮೈದಾನದಲ್ಲಿ ನಡೆದ ಮಹದೇವಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಅಕ್ರಮವಾಗಿ ನೆಲೆಸುತ್ತಿರುವ ಬಾಂಗ್ಲಾದೇಶದ ವಲಸಿಗರನ್ನು ಗುರುತಿಸಿ, ಮರಳಿ ಅವರ ದೇಶಕ್ಕೆ ಕಳುಹಿಸುವ ಕುರಿತಂತೆ ಅಕ್ರಮ ಬಾಂಗ್ಲಾದೇಶಿ ವಲಸಿಗರ ವಿರುದ್ಧ ಜನ ಜಾಗೃತಿ ಅಭಿಯಾನ ಕಾರ್ಯಕ್ರಮ ಮಾಡಲಾಯಿತು.

ಕಾರ್ಯಕ್ರಮ ನೇತ್ರತ್ವ ವಹಿಸಿದ್ದ ಮಾಜಿ ಸಚಿವ ಅರವಿಂದ ಲಿಂಬಾವಳಿಯವರು ದೇಶದ ಇತರೆ ರಾಜ್ಯಗಳು ಅಕ್ರಮ ಬಾಂಗ್ಲಾದೇಶಿಗರನ್ನು ಹೊರ ಹಾಕುವಂತೆ, ಕರ್ನಾಟಕದಲ್ಲಿಯೂ ಸಹ ಈ ಕಾರ್ಯ ಶೀಘ್ರವಾಗಿ ಆಗಬೇಕಾದೆ ಎಂದು ತಿಳಿಸಿದರು.

ಅಕ್ರಮ ಬಾಂಗ್ಲಾ ನೆಲಸಿಗರ ವಾಪಸ್ ಕಳುಹಿಸುವುದರಲ್ಲಿ ರಾಜಕೀಯ ಬೇಡ, ಇಂತಹವರಿಗೆ ಅವಕಾಶ ಕೊಟ್ಟರೆ ಕರ್ನಾಟಕವೂ ಪಶ್ಚಿಮ ಬಂಗಾಳದಂತೆ ಆಗುತ್ತದೆ ಎಂದು ಹೇಳಿದರು.

ಕಳೆದು‌ ಒಂದು ತಿಂಗಳಿನಿಂದ ಮಹದೇವಪುರ ಕ್ಷೇತ್ರದಿಂದ ಈ ಅಭಿಯಾನ ಶುರು ಮಾಡಿದ್ದೇವೆ. ಪೊಲೀಸ್ ಇಲಾಖೆಗೆ ಏಕೆ ಗೊತ್ತಾಗಿಲ್ಲ? ಬಾಗಲೂರು, ಹೊಸೂರು ಬಂಡೆ, ಕಾಡು ಅಗ್ರಹಾರ, ಬಿದರಹಳ್ಳಿ, ಮಂಡೂರು, ಕಾಡುಗೋಡಿ, ಕನ್ನಮಂಗಲ, ಸೀಗೇಹಳ್ಳಿ, ಸಿದ್ದಾರ್ಥ ಲೇಔಟ್, ಪಣತ್ತೂರ್, ಪಟ್ಟಣೂರು ಅಗ್ರಹಾರದಲ್ಲಿ ಅಕ್ರಮ ವಾಸಿಗಳಿದ್ದಾರೆ. ನಾವು ಹೋಗುತ್ತೇವೆ ಅಂತ ಮನೆಗಳನ್ನ ಖಾಲಿ ಮಾಡಿ ಹೋಗಿರುವ ಶಂಕೆ ಇದೆ ಎಂದು ಹೇಳಿದ್ದಾರೆ.

2013ರಲ್ಲಿ‌ ತೂಬರಹಳ್ಳಿ ಕಸ ಸುಡುತ್ತಿದ್ದರು. ಅಕ್ರಮವಾಗಿ ಬಾಂಗ್ಲಾದೇಶದಿಂದ ಬಂದಿರುವ ಜನರನ್ನು ಸರ್ಕಾರ, ಸ್ಥಳೀಯರ ಸಹಾಯದಿಂದ ಖಾಲಿ ಮಾಡಿಸಿದ್ದೆವು. ಆದರೆ ಈಗ ಮಹದೇವಪುರ ಸೇರಿ ಬೆಂಗಳೂರಿನಲ್ಲಿ ದೊಡ್ಡ ಸಂಖ್ಯೆಯಲ್ಲಿ ಅಕ್ರಮ ವಲಸಿಗರು ಬಂದಿದ್ದಾರೆ ಎಂದಿದ್ದಾರೆ.

ಬೆಂಗಳೂರಿನಲ್ಲಿ ನೆಲೆಸಿರುವ ಬಹುತೇಕ ವಲಸಿಗರು ಮಧ್ಯವರ್ತಿಗಳ ಮೂಲಕ ನಕಲಿ ಆಧಾರ್ ಕಾರ್ಡ್ ಮತ್ತು ಮತದಾರರ ಗುರುತಿನ ಚೀಟಿ ಪಡೆದು ವಾಸ್ತವ್ಯ ಹೂಡಿರುವುದು ಪತ್ತೆಯಾಗಿದೆ. ನಗರದಲ್ಲಿ ಅಕ್ರಮ ಬಾಂಗ್ಲಾ ವಲಸಿಗರಿಗೆ ನಕಲಿ ಆಧಾರ್ ಕಾರ್ಡ್ ಮಾಡಿಕೊಡುವ ಏಜೆಂಟ್ಗಳು ಇದ್ದಾರೆ. ಮೊದಲು ಇಂತಹವರನ್ನು ಬಂಧಿಸಬೇಕಿದೆ ಎಂದು ಮಾಜಿ ಸಚಿವ ಅರವಿಂದ ಲಿಂಬಾವಳಿ ಆಗ್ರಹಿಸಿದರು. 

ನತಂರ ಮಾತನಾಡಿದ ಮಾಜಿ ಸಂಸದ ಪ್ರತಾಪ್ ಸಿಂಹ , ಅಕ್ರಮ ಬಾಂಗ್ಲಾ ವಲಸಿಗರ ಬಗ್ಗೆ ಜುಲೈ 28ರಂದು ದೆಹಲಿಗೆ ತೆರಳಿ ಕೇಂದ್ರದ ನಾಯಕರಿಗೆ ವರದಿ ಸಲ್ಲಿಸುತ್ತೇವೆ. ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಹೋರಾಟ ಮಾಡುತ್ತಿದ್ದೇವೆ. ಯಾವುದೇ ಹೋರಾಟ ಕೈಗೆತ್ತಿಕೊಂಡರೂ ತಾರ್ಕಿಕ ಅಂತ್ಯ ಕಾಣಿಸ್ತೇವೆ. ರೋಹಿಂಗ್ಯಾ ಮತ್ತು ಪಾಕಿಸ್ತಾನ ಮುಸ್ಲಿಮರು ಬರಲಿ ಅನ್ನೋದು ಕಾಂಗ್ರೆಸ್ ಮನಸ್ಥಿತಿಯಾಗಿದೆ ಎಂದು ವಾಗ್ದಾಳಿ ಮಾಡಿದ್ದಾರೆ.

ಬಾಂಗ್ಲಾ, ಪಾಕ್ನಿಂದ ಹಿಂದೂಗಳನ್ನು ಓಡಿಸಿ ಈಗ ಇವರು ಬಂದಿದ್ದಾರೆ. ಇಂಥವರು ನಮ್ಮ ದೇಶ, ರಾಜ್ಯದಲ್ಲಿ ಇರಬಾರದು. ನೆರೆ ದೇಶದಲ್ಲಿರುವ ಮುಸ್ಲಿಮರು ಭಾರತಕ್ಕೆ ಬಂದರೆ ನಾವೆಲ್ಲಿಗೆ ಹೋಗ್ಬೇಕು? ವಿಶ್ವದ 57 ಮುಸ್ಲಿಂ ದೇಶಗಳು ಯಾಕೆ ವಲಸಿಗರಿಗೆ ಆಶ್ರಯ ನೀಡುತ್ತಿಲ್ಲ? ವಲಸಿಗ ಮುಸ್ಲಿಮರಿಗೆ ಭಾರತವೇ ಯಾಕೆ ಆಶ್ರಯ ನೀಡಬೇಕು. ವಲಸಿಗ ಮುಸ್ಲಿಮರು ಭಾರತದಲ್ಲಿ ನೆಲೆಸಿದರೆ ನಮ್ಮ ಜಾಗ ಕಬಳಿಸುತ್ತಾರೆ. ಮುಸ್ಲಿಮರು ಪುರುಸೊತ್ತಿಲ್ಲದೆ ಜನೋತ್ಪಾದನೆ ಮಾಡ್ತಾರೆ. ಹಿಂದೂಗಳಿಗೆ ಇರುವುದೊಂದೇ ದೇಶ, ನಮಗೆ ಯಾರೂ ಆಶ್ರಯ ಕೊಡಲ್ಲ. ಭಾರತವನ್ನು ಭಾರತವಾಗಿಯೇ ಉಳಿಸಿಕೊಳ್ಳಬೇಕು ಎಂದರು.

ಅಕ್ರಮ ಬಾಂಗ್ಲಾದವರು ಕಡಿಮೆ ಹಣಕ್ಕೆ ಸಿಗುತ್ತಾರೆ ಎಂದು ಕೆಲಸಕ್ಕೆ ಸೇರಿಸಕೊಳ್ಳಬೇಡಿ. ಅವರು ಬಂದಿರೋ ಉದ್ದೇಶವೇ ಬೇರೆ. ನಾವು ಎಚ್ಚೆತ್ತುಕೊಳ್ಳಬೇಕು. ಪ್ರಧಾನಿ ಮೋದಿಯವರನ್ನು ಎರಡು ಬಾರಿ ಬಹುಮತದ ಮೂಲಕ ಗೆಲ್ಲಿಸಿದ್ದೀರಿ. ಕಳೆದ ಬಾರಿ ನೀವು ಸ್ವಲ್ಪ ಸೋಂಬೇರಿ ಆಗಿದ್ದಕ್ಕೆ 242 ಸೀಟು ನೀಡಿದ್ದೀರಿ. ಮತ್ತೊಮ್ಮೆ ನೀವು ಎಚ್ಚೆತ್ತುಕೊಳ್ಳಬೇಕಿದೆ. ನಮ್ಮದು ಹಿಂದು ರಾಷ್ಟ್ರ. ನಮಗೆ ಬೇರೆ ಎಲ್ಲೂ ನೆಲೆ ಇಲ್ಲ. ಹೀಗಾಗಿ ನಾವು ನಮ್ಮ ದೇಶ ಉಳಿಸಬೇಕು. ಈ ಹೋರಾಟ ರಾಜಕೀಯ ಕಾರಣಕ್ಕೆ ಅಲ್ಲ. ನಮ್ಮ ಹಿಂದೂ ದೇಶದ ಉಳಿವಿಗಾಗಿ ಎಂದು ಹೇಳಿದರು.

ಲಿಂಬಾವಳಿ ರಾಜ್ಯ ಬಿಜೆಪಿಯ ಅತ್ಯಂತ ಚಾಣಾಕ್ಷ ಸಂಘಟಕ ಆಗಿದ್ದಾರೆ. ಅವರ ರೀತಿ ಅಚ್ಚುಕಟ್ಟಾಗಿ ಕಾರ್ಯಕ್ರಮ ರೂಪಿಸುವ ಇನ್ನೊಬ್ಬ ಬಿಜೆಪಿಯಲ್ಲಿ ಇಲ್ಲ. ಅವರು ಪೆನ್ನು, ಪಟ್ಟಿ ಇಲ್ಲದೇ ಏನು ಕಾರ್ಯಕ್ರಮ ರೂಪಿಸುವುದಿಲ್ಲ. ಒಂದಕ್ಕೊಂದು ಮಿಕ್ಸ್ ಆಗದ ಹಾಗೆ ಕಾರ್ಯಕ್ರಮ ಮಾಡುತ್ತಾರೆ. ಅವರು ಮಾಡುವ ಪ್ರತಿ ಕಾರ್ಯಕ್ರಮದಲ್ಲಿ ದೇಶ, ಧರ್ಮ ಎನ್ನುವ ಯೋಚನೆ ಇರುತ್ತದೆ. ರಾಜಕೀಯ ವಾಸನೆ ಇರೋದಿಲ್ಲ. ನಾವು ಯಾವುದೇ ಹೋರಾಟವನ್ನು ಕೇವಲ ಸೌಂಡ್ ಮಾಡುವ ಮಾಧ್ಯಮ ಬೈಟ್ ನೀಡಿ ಸುಮ್ನೆ ಆಗುವುದಿಲ್ಲ. ನೀಟಾಗಿ ಯೋಚಿಸಿ, ಆಳಕ್ಕೆ ಇಳಿದು ಹೋರಾಟ ಮಾಡುತ್ತೇವೆ ಎಂದು ಬಿಜೆಪಿ ತಂಡಕ್ಕೆ ಖಡಕ್ ಸಂದೇಶ ರವಾನಿಸಿದ್ದಾರೆ.

ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಅಕ್ರಮ ವಲಸಿಗರ ವಿರುದ್ಧ ಜನ ಜಾಗೃತಿ ಅಭಿಯಾನ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಅರವಿಂದ ಲಿಂಬಾವಳಿ, ಕೇಂದ್ರ ಮಾಜಿ ಸಚಿವ ಡಾ.ಜಿ.ಎಂ.ಸಿದ್ದೇಶ್ವರ, ಶಾಸಕರಾದ ಮಂಜುಳಾ ಅರವಿಂದ ಲಿಂಬಾವಳಿ, ರಮೇಶ್ ಜಾರಕಿಹೊಳಿ, ಹರೀಶ್, ಮಾಜಿ ಸಚಿವ ಕುಮಾರ್ ಬಂಗಾರಪ್ಪ, ಮಾಜಿ ಸಂಸದ ಬಿ.ವಿ.ನಾಯ್ಕ ಮತ್ತಿತರರಿದ್ದರು.

ಈ ಸಂದರ್ಭದಲ್ಲಿ ಬಿ.ವಿ.ನಾಯ್ಕ, ಜೆಡಿಎಸ್‌ ಮುಖಂಡ ಎನ್. ಆರ್.ಸಂತೋಷ, ನಗರ ಮಂಡಲದ ಅಧ್ಯಕ್ಷ ಎನ್.ಆರ್.ಶ್ರೀಧರ್ ರೆಡ್ಡಿ, ಗ್ರಾಮಾಂತರ ಮಂಡಲದ ಅಧ್ಯಕ್ಷ ಎಚ್.ಎಸ್.ಪಿಳ್ಳಪ್ಪ, ರಾಜ್ಯ ಪರಿಷತ್ ಸದಸ್ಯ ಎಲ್.ರಾಜೇಶ್, ಬೆಂಗಳೂರು ಕೇಂದ್ರ ಪ್ರಧಾನ ಕಾರ್ಯದರ್ಶಿ ಮಹೇಂದ್ರ ಮೋದಿ ಉಪಾಧ್ಯಕ್ಷ ಜಿ. ಜಯದೇವ, ಜೆಡಿಎಸ್ ಮುಖಂಡ ಎನ್.ಆರ್. ಸಂತೋಷ್ ಉಪಸ್ಥಿತರಿದ್ದರು.