PUC Exam Result: ದ್ವಿತೀಯ ಪಿಯು ಮರು ಪರೀಕ್ಷೆ ದಿನಾಂಕ ಪ್ರಕಟ, ಸಂಪೂರ್ಣ ಮಾಹಿತಿ ಇಲ್ಲಿದೆ
ರಾಜ್ಯ


ಬೆಂಗಳೂರು: 2024-25ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ-1ರ ಫಲಿತಾಂಶವನ್ನು ಈಗಾಗಲೇ ಪ್ರಕಟಿಸಲಾಗಿದ್ದು, ಫಲಿತಾಂಶದ ಬಗ್ಗೆ ಅನುಮಾನವಿದ್ದರೂ ಉತ್ತರ ಪತ್ರಿಕೆಯ ಸ್ಕ್ಯಾನಿಂಗ್ ಪ್ರತಿ ಹಾಗೂ ಮರುಮೌಲ್ಯಮಾಪನ ಶುಲ್ಕವನ್ನು ಆನ್‌ಲೈನ್ ನಲ್ಲಿ ಮತ್ತು ಆಫ್‌ಲೈನ್ ನಲ್ಲಿ ಚಲನ್ ಮುಖಾಂತರ ಪಾವತಿಸಲು ಅವಕಾಶವಿರುತ್ತದೆ ಎಂದು ಇಲಾಖೆ ತಿಳಿಸಿದೆ.
ಉತ್ತರ ಪತ್ರಿಕೆಯ ಸ್ಕ್ಯಾನ್ ಪ್ರತಿಗಾಗಿ ಅರ್ಜಿ ಸಲ್ಲಿಸಲು ಏ.8 ರಿಂದ ಏ.13 ವರೆಗೆ ಅವಕಾಶವನ್ನು ಕಲ್ಪಿಸಲಾಗಿದೆ. ಉತ್ತರ ಪತ್ರಿಕೆಯ ಸ್ಕ್ಯಾನ್ ಪ್ರತಿ ಡೌನ್‌ಲೋಡ್ ಮಾಡಿಕೊಳ್ಳಲು ಏ.12 ರಿಂದ ಏ.16 ಕೊನೆ ದಿನವಾಗಿದೆ. ಇನ್ನು ಮರುಮೌಲ್ಯಮಾಪನಕ್ಕಾಗಿ ಹಾಗೂ ಮರುಎಣಿಕೆಗಾಗಿ ಅರ್ಜಿ ಸಲ್ಲಿಸಲು ಏ.12 ರಿಂದ ಏ.17ರ ವರೆಗೆ ಅವಕಾಶವಿದೆ. ಸ್ಕ್ಯಾನ್ ಪ್ರತಿ ಪಡೆಯಲು ಶುಲ್ಕ (ಪ್ರತಿ ವಿಷಯಕ್ಕೆ) ರೂ.530/- ಮರುಮೌಲ್ಯಮಾಪನದ ಶುಲ್ಕ (ಪ್ರತಿ ವಿಷಯಕ್ಕೆ) ರೂ. 1670/- ನಿಗಧಿ ಮಾಡಲಾಗಿದೆ.
ಅನುತ್ತೀರ್ಣರಾದವರು ದ್ವಿತೀಯ ಪಿಯು ಪರೀಕ್ಷೆ -2ಕ್ಕೆ ನೊಂದಾಯಿಸಿಕೊಳ್ಳುವ ವಿದ್ಯಾರ್ಥಿಗಳಿಗೆ ದಂಡ ರಹಿತ ದಿ: 08-04-2025 ರಿಂದ 15-04-2025 ಅವಕಾಶವಿದ್ದು, ದಂಡ ಸಹಿತ 16-04-2025 ರಿಂದ 17-4-2025 ಕೊನೆಯ ದಿನವಾಗಿದೆ ಎಂದು ಶಿಕ್ಷಣ ಇಲಾಖೆಯೂ ಪ್ರಕಟಣೆಯಲ್ಲಿ ತಿಳಿಸಿದೆ.



