PUC Result 2025: ಫಲಿತಾಂಶ ಪ್ರಕಟ, ಉಡುಪಿ ಜಿಲ್ಲೆ ಪ್ರಥಮ, ಬಾಲಕೀಯರೇ ಮೇಲುಗೈ
ರಾಜ್ಯ


2024-25ನೇ ಸಾಲಿನ ದ್ವಿತೀಯ ಪಿಯೂ ಪರೀಕ್ಷೆ ಫಲಿತಾಂಶವು ಇದೀಗ ಪ್ರಕಟಣೆಯಾಗಿದ್ದು ಇದರ ಸಂಪೂರ್ಣ ಫಲಿತಾಂಶ ಮಾಹಿತಿ ಇಲ್ಲಿದೆ.
ಮಾರ್ಚ್ 1, 2025 ರಿಂದ ಮಾ. 20 ವರೆಗೆ ರಾಜ್ಯಾದ್ಯಂತ ಒಟ್ಟು 1171 ಪರೀಕ್ಷಾ ಕೇಂದ್ರಗಳಲ್ಲಿ ದ್ವಿತೀಯ ಪಿಯು ಪರೀಕ್ಷೆ ನಡೆಯಿತು. ಈ ಪರೀಕ್ಷೆಯಲ್ಲಿ ಉಡುಪಿ ಅಗ್ರಸ್ಥಾನ ಸ್ಥಾನ ಪಡೆದುಕೊಂಡಿದ್ದರೆ, ದಕ್ಷಿಣ ಕನ್ನಡ ಮತ್ತು ಬೆಂಗಳೂರು ದಕ್ಷಿಣ ಜಿಲ್ಲೆಗಳು ಎರಡು ಮತ್ತು ಮೂರನೇ ಸ್ಥಾನವನ್ನು ಪಡೆದುಕೊಂಡಿದೆ. ಈ ಸಾಲಿನಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ 8ನೇ ಸ್ಥಾನ ಲಭಿಸಿದೆ.
ಈ ಬಾರಿಯೂ ಬಾಲಕೀಯರು ಮೇಲುಗೈ ಸಾಧಿಸಿದ್ದು ಈ ಪೈಕಿ ಬಾಲಕೀಯರು 2,69,212 (77.88%) ರಷ್ಟು , ಮತ್ತು 1,99,227 (68.20%) ವಿದ್ಯಾರ್ಥಿಗಳು ಪಾಸಾಗಿದ್ದಾರೆ.
ಈ ಪರೀಕ್ಷೆಯಲ್ಲಿ ಕಲಾ ವಿಭಾಗದಲ್ಲಿ 81,553 (53.29%) ಸಾವಿರ ವಿದ್ಯಾರ್ಥಿಗಳು, ವಾಣಿಜ್ಯ ವಿಭಾಗದಲ್ಲಿ 1,55,425 (76.07%) ವಿದ್ಯಾರ್ಥಿಗಳು, ವಿಜ್ನಾನ ವಿಭಾಗದಲ್ಲಿ 2,31,461 (82.54%) ವಿದ್ಯಾರ್ಥಿಗಳು ಸೇರಿ ಒಟ್ಟು 4,68,439 (73.45%) ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ.

