PUC Result 2025: ದ್ವಿತೀಯ ಪಿಯುಸಿ ಫಲಿತಾಂಶ: ತೂಬಗೆರೆ ಸರ್ಕಾರಿ ಪಿಯು ಕಾಲೇಜಿನ ಶೇಕಡಾ 56% ರಷ್ಟು ವಿದ್ಯಾರ್ಥಿಗಳು ತೇರ್ಗಡೆ
ಸ್ಥಳೀಯ ಸುದ್ದಿ


ದ್ವಿತೀಯ ಪಿಯುಸಿ ಫಲಿತಾಂಶ: ತೂಬಗೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಶೇಕಡಾ 56% ರಷ್ಟು ವಿದ್ಯಾರ್ಥಿಗಳು ತೇರ್ಗಡೆ
ದೊಡ್ಡಬಳ್ಳಾಪುರ: ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ರಾಜ್ಯಾದ್ಯಂತ ಪ್ರಕಟಗೊಂಡಿದ್ದು ತಾಲೂಕಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ. ಗ್ರಾಮಾಂತರ ಪ್ರದೇಶದಲ್ಲಿರುವ ಸರ್ಕಾರಿ ಕಾಲೇಜಿನಲ್ಲಿ ಕಲೆ, ವಿಜ್ಞಾನ ಮತ್ತು ವಾಣಿಜ್ಯ ವಿಭಾಗಗಳಿದ್ದು, ಹಲವು ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ ಧರ್ಮರಾಜು ಎನ್ -539 ಅಂಕಗಳೊಂದಿಗೆ ಅತ್ಯುನ್ನತ ಶ್ರೇಣಿಯೊಂದಿಗೆ ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿದ್ದು ಇತಿಹಾಸ ವಿಷಯದಲ್ಲಿ 100 ಅಂಕಗಳನ್ನು ಪಡೆದಿದ್ದಾರೆ. ಚಂದ್ರಶೇಖರ್ ಎಸ್-510 ಅಂಕಗಳನ್ನು ಪಡೆದು ಅತ್ಯುನ್ನತ ಶ್ರೇಣಿ ಪಡೆದುಕೊಂಡಿದ್ದಾರೆ. ನೇತ್ರಾವತಿ -488, ಮೋಹನ್ ಎನ್ -455, ರಮ್ಯ -454, ಮೌನಿಕ-422, ನವ್ಯ -406,ವೇದಾವತಿ ಆರ್ -401 ವಿಜ್ಞಾನ ವಿಭಾಗದಲ್ಲಿ ಕು ||ಲಾವಣ್ಯ -485, ಅಂಕಗಳು,ಕಲಾ ವಿಭಾಗದಲ್ಲಿ ಕು|| ಅಂಕಿತ ಜಿ-462, ಬೇಬಿ ಬಿ.ಆರ್ -445, ಹಂಸವೇಣಿ -436,ರಶ್ಮಿ-428, ಬಿಂದುಶ್ರೀ ಎನ್. ಎಸ್-408, ಲಕ್ಶ್ಮೀಷ-400 ಅಂಕಗಳನ್ನು ಪಡೆದು ಪ್ರಥಮ ದರ್ಜೆಯಲ್ಲಿ ತೇರ್ಗಡೆಗೊಂಡು ಕಾಲೇಜಿಗೆ ಕೀರ್ತಿ ತಂದಿರುತ್ತಾರೆ.
ಒಟ್ಟಾರೆ ಅತ್ಯುನ್ನತ ಶ್ರೇಣಿ -02, ಪ್ರಥಮ ದರ್ಜೆ -17, ದ್ವಿತೀಯ ದರ್ಜೆ -12,ತೃತೀಯ ದರ್ಜೆ -3 ವಿದ್ಯಾರ್ಥಿಗಳು ಉತ್ತೀರ್ಣರಾಗಿರುತ್ತಾರೆ. ಉತ್ತಮ ಫಲಿತಾಂಶ ಪಡೆದ ವಿದ್ಯಾರ್ಥಿಗಳನ್ನು ಕಾಲೇಜಿನ ಪ್ರಾಂಶುಪಾಲರು, ಉಪನ್ಯಾಸಕವೃಂದ ದವರು ಮತ್ತು ಕಾಲೇಜು ಅಭಿವೃದ್ಧಿ ಸಮಿತಿಯ ಪದಾಧಿಕಾರಿಗಳು ಶುಭ ಹಾರೈಕೆಗಳೊಂದಿಗೆ ಅಭಿನಂದಿಸಿದ್ದಾರೆ.