ನಿರ್ಮಾಪಕ ಡಿ.ಕೆ ದೇವೇಂದ್ರ ಮನೆಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಠಾಮಿಯ ಅಂಗವಾಗಿ ಪೂರಿ ಜಗನ್ನಾಥ ದರ್ಬರ್ ಸೆಟ್.
ಸ್ಥಳೀಯ ಸುದ್ದಿ


ಕೆ.ಆರ್.ಪುರ : ಶ್ರೀಕೃಷ್ಣ ಜನ್ಮಾಷ್ಟಮಿಯ ಅಂಗವಾಗಿ ಕೆ.ಆರ್.ಪುರ ಕ್ಷೇತ್ರದ ದೇವಸಂದ್ರದಲ್ಲಿ ನಿರ್ಮಾಪಕ ಡಿ.ಕೆ ದೇವೇಂದ್ರ ಅವರ ನಿವಾಸದಲ್ಲಿ ಪೂರಿಜಗನ್ನಾಥ ದೇವರ ಪ್ರತಿಮೆ ಪ್ರತಿಷ್ಠಾಪನೆ ಮಾಡಿ ಸಂಭ್ರಮದ ಜನ್ಮಾಷ್ಟಮಿ ಸಡಗರರ ನಡೆಯಿತು.
ಕಳೆದ 25 ವರ್ಷಗಳಿಂದ ವಿವಿಧ ರೀತಿಯಲ್ಲಿ ಶ್ರೀ ಕೃಷ್ಣನ ಜನ್ಮಾಷ್ಟಮಿ ಹಬ್ಬ ಆಚರಣೆ ಮಾಡುತ್ತಾ ಬರುತ್ತಿದ್ದಾರೆ. ಈ ಬಾರಿ ತಮ್ಮ ಮನೆಯ ಅಂಗಳದಲ್ಲಿ ಜಗತ್ ಪ್ರಸಿದ್ದ ದೇವಾಲಯಗಳಲ್ಲಿ ಒಂದಾದ ಒಡಿಶಾದ ಶ್ರೀ ಪೂರಿ ಜಗನ್ನಾಥ ದರ್ಬಾರ್ ಸೆಟ್ ನಿರ್ಮಾಣ ಮಾಡಿ ನೂರಾರು ಜನರಿಗೆ ಪೂರಿ ಜಗನ್ನಾಥ್ ದರ್ಶನ ಪಡೆಯುವಂತೆ ಕಲ್ಪಿಸಿದ್ದಾರೆ.
ನಂತರ ಮಾತನಾಡಿದ ನಿರ್ಮಾಪಕ ಡಿ.ಕೆ.ದೇವೆಂದ್ರ ಅವರು, ಶ್ರೀ ಕೃಷ್ಣ ಜನ್ಮಾಷ್ಠಾಮಿಯ ಶುಭಾಶಯ ಸಲ್ಲಿಸಲು ಮನೆಗೆ ಸಾವಿರಾರು ಬಂಧು-ಮಿತ್ರರು ಕಾಂಗ್ರೆಸ್ ಮುಖಂಡರು ಆಗಮಿಸುತ್ತಾರೆ ಅವರಿಗೆ ಶ್ರೀ ಪೂರಿ ಜಗನ್ನಾಥ ದರ್ಶನ ಕಲ್ಪಿಸುವ ಉದ್ದೇಶದಿಂದ ಜಗನ್ನಾಥ ದರ್ಬಾರ್ ನಿರ್ಮಾಣ ಮಾಡಲಾಗಿದೆ ಎಂದರು.
ಮನೆಯಲ್ಲಿ ವಿಶೇಷ ಪೂಜೆ ಹಾಗೂ ಮಕ್ಕಳಿಂದ ಭಜನಾ ಕಾರ್ಯಕ್ರಮ ನಡೆಸಲಾಯಿತು.ನೂರಾರು ಜನ ಮನೆಗೆ ಬಂದು ಪೂರಿ ಜಗನ್ನಾಥನ ದರ್ಶನ ಪಡೆದಿದ್ದು ಸಂತೋಷ ಕೊಟ್ಟಿದೆ ಎಂದರು.
ದೇವಸಂದ್ರ ಗ್ರಾಮದ ಪ್ರತಿಮನೆಯಲ್ಲೂ ಹಬ್ಬದ ಸಂಭ್ರಮ ಮನೆ ಮಾಡಿದ್ದು, ಪ್ರತಿ ಮನೆಯಲ್ಲೂ ಗೋಪೂಜೆಗೆ ಅದ್ಯತೆ ನೀಡಲಾಗುತ್ತದೆ. ಮನೆ ದೇವರಾದ ಕೃಷ್ಣ ಈ ಸಮುದಾಯದ ಆರಾಧ್ಯದೈವವಾಗಿದ್ದಾನೆ. ಗ್ರಾಮದಲ್ಲಿ ನೆಲೆಸಿರುವ ವೇಣುಗೋಪಾಲ ಸ್ವಾಮಿಗೆ ವಿಶೇಷ ಪೂಜೆ ಮಾಡಿ ವಿವಿಧ ಬಗೆಯ ಹೂಗಳಿಂದ ಅಲಂಕರ ಮಾಡಲಾಯಿತು ಎಂದು ಹೇಳಿದರು.
ಇಂದು ರಾತ್ರಿ ಜನ್ಮಾಷ್ಟಮಿ ಅಂಗವಾಗಿ ದೇವಸಂದ್ರದಲ್ಲಿರುವ ಗ್ರಾಮದೇವತೆಗಳ ಪಲ್ಲಕ್ಕಿ ಉತ್ಸವ ಅದ್ದೂರಿಯಾಗಿ ನಡೆಯುತ್ತದೆ. ಜತೆಗೆ ಯಾದವ ಸಮುದಾಯದ ಕುಟುಂಬ ದಿಂದ ಸಾವಿರಾರು ಮಂದಿಗೆ ಅನ್ನದಾನದ ವ್ಯವಸ್ಥೆಯನ್ನು ಮಾಡಲಾಯಿತು ಎಂದರು.
ವೇಣುಗೋಪಾಲ ದೇವಲಯಕ್ಕೆ ಭೇಟಿ ನೀಡಿದ ಡಿ.ಕೆ.ದೇವೆಂದ್ರ ಪ್ರೇಮಾವತಿ,ಅನನ್ಯ,ಕೋವಿದ ವಿಶೇಷ ಪೂಜೆ ಸಲ್ಲಿಸಿದರು.