Ramanavami: ಜನ ಸಹಯೋಗ ಸಂಘಟನೆ ವತಿಯಿಂದ 7ನೇ ವರ್ಷದ ಶ್ರೀರಾಮ ನವಮಿ ರಥಯಾತ್ರೆ. ಎಲ್ಲೆಲ್ಲೂ ಜೈ ಶ್ರೀರಾಮ್ ಘೋಷಣೆ.
ಸ್ಥಳೀಯ ಸುದ್ದಿ


ಮಹದೇವಪುರ: ಶ್ರೀ ರಾಮನವಮಿ ಅಂಗವಾಗಿ ಹೂಡಿ ಗ್ರಾಮದಲ್ಲಿ ಜನ ಸಹಯೋಗ ಸಂಘಟನೆ ಕಾರ್ಯಕರ್ತರು ಶ್ರೀ ರಾಮನ ಮೂರ್ತಿಯನ್ನು ತೆರದ ವಾಹನದಲ್ಲಿಟ್ಟುಕೊಂಡು ಶ್ರೀ ರಾಮನಿಗೆ ಜೈ ಕಾರ ಹಾಕುತ್ತಾ ಸಾವಿರಾರು ಯುವಕರು ಬೈಕ್ ರ್ಯಾಲಿ ಕೈಗೊಳ್ಳುವ ಮೂಲಕ 7ನೇ ವರ್ಷದ ಅದ್ದೂರಿಯಾಗಿ ಶ್ರೀ ರಾಮನ ರಥಯಾತ್ರೆ ಮಾಡಿದರು.
ಹೂಡಿ ಗ್ರಾಮ ದಿಂದ ಪ್ರಾರಂಭವಾದ ಶ್ರೀ ರಾಮನ ರಥವು ಐಟಿಪಿಲ್, ಹೋಪ್ ಫಾರಂ, ವರ್ತೂರು ಕೋಡಿ, ಕುಂದಲಹಳ್ಳಿ, ಮಾರತಹಳ್ಳಿ,ಎಸಿಎಸ್ ಲೇಔಟ್,ಟಿನ್ ಫ್ಯಾಕ್ಟರಿ,ಕೆ.ಆರ್.ಪುರ ,ಅಯ್ಯಪ್ಪ ನಗರ ಸೂಮಾರು 20 ಕಿ.ಮೀ.ಹೆಚ್ಚು ಸಂಚಾರ ಮಾಡಿತು.
ರಥಯಾತ್ರೆ ಪ್ರಾರಂಭ ಆಗುತ್ತಿದ್ದಂತೆ ಜೈ ಶ್ರೀರಾಮ ಘೋಷಣೆಗಳು ಮೊಳಗಿದವು, ಸಾವಿರಾರು ಭಕ್ತರು ಕೇಸರಿ ಶಾಲು, ಕೇಸರಿ ಪೇಟ ಧರಿಸಿ ರಥಯಾತ್ರೆಯಲ್ಲಿ ಭಾಗಿಯಾಗಿದ್ದರು. ಎಲ್ಲೆಲ್ಲೂ ಭಗವತ್ ಧ್ವಜ, ರಾಮನ ಧ್ವಜ ರಾರಾಜಿಸಿದವು. ಶ್ರೀ ರಾಮನ ರಥಯತ್ರೆಯಲ್ಲಿ ಸಾವಿರಾರು ರಾಮನ ಭಕ್ತರು ರ್ಯಾಲಿ ಯಲ್ಲಿ ಪಾಲ್ಗೊಂಡು ಶ್ರೀ ರಾಮನ ಕೃಪೆಗೆ ಪಾತ್ರರಾದರು
ಈ ಸಂದರ್ಭದಲ್ಲಿ ಕ್ಷೇತ್ರದ ಗ್ರಾಮಾಂತರ ಮಂಡಲ ಬಿಜೆಪಿ ಅಧ್ಯಕ್ಷ ಹೆಚ್.ಎಸ್. ಪಿಳ್ಳಪ್ಪ, ಜನ ಸಹಯೋಗ ಸಂಘಟನೆಯ ಅಧ್ಯಕ್ಷ ಬೀರ್ ಬಹದ್ದೂರು ಸಿಂಗ್, ಉಪಾಧ್ಯಕ್ಷ ಥಾನೇ ಕುಮಾರ್, ಖಜಾಂಚಿ ಪಂಕಜ್ ಥಾಕೂರ್, ಪದಾಧಿಕಾರಿಗಳು ಅಜಯ್ ಶರ್ಮ, ಮನೋಜ್ ಸಿಂಗ್, ಅಜಿತ್ ಸಿಂಗ್, ಸಂಜಯ್ ಸಿಂಗ್, ಅನೂಪ್ ಗುಪ್ತ, ಸುನೀಲ್ ಸಿಂಗ್ ಸೇರಿದಂತೆ ಹಲವಾರು ಭಾಗವಹಿಸಿದ್ದರು.