Ramanavami : ಶ್ರೀ ರಾಮನವಮಿ ಪ್ರಯುಕ್ತ 70 ಜೋಡೆತ್ತುಗಳ ಮೆರವಣಿಗೆ. ನಗರದಲ್ಲಿ ಗ್ರಾಮೀಣ ಸೊಗಡು ಸಂಭ್ರಮ.

ಸ್ಥಳೀಯ ಸುದ್ದಿ

ಧರ್ಮ ಬಸವನಪುರ

4/8/20251 min read

ಶ್ರೀ ರಾಮನವಮಿ ಪ್ರಯುಕ್ತ 70 ಜೋಡೆತ್ತುಗಳ ಮೆರವಣಿಗೆ.ನಗರದಲ್ಲಿ ಗ್ರಾಮೀಣ ಸೊಗಡು ಸಂಭ್ರಮ.

ಮಹದೇವ ಪುರ: ಕ್ಷೇತ್ರದ ಗುಂಜೂರು ಗ್ರಾಮದಲ್ಲಿ ಶ್ರೀ ಕೋದಂಡರಾಮಸ್ವಾಮಿ ಬ್ರಹ್ಮ ರಥೋತ್ಸವ ಅಂಗವಾಗಿ ಊರಿನ ರಾಜ ಬೀದಿಗಳಲ್ಲಿ 70 ಜೋಡೇತುಗಳ ಮೆರವಣಿಗೆ ಮಾಡಲಾಯಿತು.ಮೆರವಣಿಗೆಗೆ ಗ್ರಾಮದಲ್ಲದೆ ಬೇರೆ ಗ್ರಾಮಗಳಿಂದ ಆನೇಕಲ್, ಹೊಸಕೋಟೆ,ನೆಲಮಂಗಲ, ಸರ್ಜಾಪುರ,ಚಂದಾಪುರ,ಅತ್ತಿಬೆಲೆ,ಚಿಕ್ಕತಿರುಪತಿ,ಚನ್ನಸಂದ್ರ, ವರ್ತೂರು, ಮುಗಳೂರು ಸೇರಿದಂತೆ ಸುತ್ತಮುತ್ತಲಿನ ಊರುಗಳಿಂದ ಮೆರವಣಿಗೆ ಬಂದ ಜೋಡು ಎತ್ತು ಗಳು ಬಂದಿದ್ದವು.

ಊರಿನ ಗ್ರಾಮಸ್ಥರಿಂದ ಉತ್ಸವಕ್ಕೆ ಬಂದಿದ್ದ ಪ್ರತಿಯೊಂದು ಜೋಡಿ ಎತ್ತುಗಳಿಗೆ ಬೆಳ್ಳಿ ಖಡ್ಗಗಳನ್ನು ನೀಡಿ ಪ್ರೋತ್ಸಾಹಿಸಿದರು. ಬೆಂಗಳೂರು ನಗರದ ಸುತ್ತಮುತ್ತಲೂ ಎಲ್ಲಿಯೂ ಈ ರೀತಿಯ ಜಾನುವಾರು ಜಾತ್ರೆ ಮತ್ತು ಜೋಡು ಎತ್ತುಗಳ ಮೆರವಣಿಗೆ ನಡೆಯುವುದಿಲ್ಲ, ಇದು ಎರಡನೇ ಬಾರಿ ಜೊಡು ಎತ್ತುಗಳ ಮೆರವಣಿಗೆಯನ್ನ ಗುಂಜುರು ಗ್ರಾಮಸ್ಥರು ಆಯೋಜನೆ ಮಾಡಿ ನೆರೆದಿದ್ದವರಿಗೆ ಮನರಂಜನೆ ನಿಡಿದ್ದಾರೆ.

ಮೆರವಣಿಗೆಯಲ್ಲಿ ಎತ್ತುಗಳ ಮೂಲತಳಿ, ದೇಹದಾರ್ಢ್ಯತೆ, ಚುರುಕುತನ, ಅವುಗಳ ಚರ್ಮ ಸ್ಪರ್ಶಿಸುವ ಮೂಲಕ ವಯಸ್ಸು,  ತಿಳಿಸುವ ಮೂಲಕ ಜೋಡು ಎತ್ತುಗಳ ಮೆರವಣಿಗೆ ಮೂಲಕ ನಗರದಲ್ಲಿ ಗ್ರಾಮಿಣ ಸೊಗಡು ನೆನಪಿಸಿದ್ದು ಎಲ್ಲರ ಮನಸ್ಸಿಗೆ ಸಂತಸ ತಂದಿತು.

ಇತ್ತೀಚಿನ ಸುದ್ದಿ