Ramanavami : ಗೋಹತ್ಯೆ ನಿಷೇಧ ಕಾನೂನನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಕ್ರಮ ಕೈಗೊಳ್ಳಲು ಮನವಿ.

ಸ್ಥಳೀಯ ಸುದ್ದಿ

ಧರ್ಮ ಬಸವನಪುರ

4/7/20251 min read

ಬೆಂಗಳೂರು: ಶ್ರೀ ರಾಮ ನವಮಿ ಅಂಗವಾಗಿ ವರ್ತೂರಿನ ಗಾಂಧಿ ವೃತ್ತದ ಶ್ರೀ ಆಂಜನೇಯಸ್ವಾಮಿ ದೇವಾಲಯದಲ್ಲಿ ಶ್ರೀ ರಾಮ ನವಮಿಯನ್ನು ಭಾನುವಾರ ವಿವಿಧ ಧಾರ್ಮಿಕ ಕೈಂಕರ್ಯಗಳೊಂದಿಗೆ ಅತ್ಯಂತ ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು. ದೇವಾಲದಲ್ಲಿ ಮುಂಜಾನೆಯಿಂದಲೇ ಶ್ರೀ ರಾಮನಿಗೆ ಅಭಿಷೇಕ, ವಿಶೇಷ ಪೂಜೆ ನಡೆಯಿತು.

ವರ್ತೂರು ಬಿಜೆಪಿ ಮುಖಂಡರು ದೇವರಿಗೆ ವಿಶೇಷ ಪೂಜೆ ಸಲ್ಲಿಸಿ,ದೇವಸ್ಥಾನಕ್ಕೆ ಬಂದ ಭಕ್ತರಿಗೆ ಮಜ್ಜಿಗೆ, ಪಾನಕ ಹಾಗೂ ಹೆಸರುಬೇಳೆ ಪ್ರಸಾದ ವಿತರಿಸಿದರು. ನಂತರ ಬಿಜೆಪಿ ನಗರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹೇಂದ್ರ ಮೋದಿಯವರು ಮಾತನಾಡಿ, ನಾಡಿನ ಎಲ್ಲಾರಿಗೂ ಶ್ರೀ ರಾಮ ನವಮಿಯ ಶುಭಾಶಯ ತಿಳಿಸಿದರು.

ಹಬ್ಬದ ನಿಮಿತ್ತವಾಗಿ ಬಿಬಿಎಂಪಿಯವರು ಮಾಂಸ ಮಾರಾಟ ನಿಷೇಧ ಮಾಡಿರುವುದು ಸ್ವಾಗತಿಸಿದರು. ಆದರೂ ನಮ್ಮ ಗ್ರಾಮದಲ್ಲಿ ಕೆಲವು ಕಡೆ ಮಾಂಸ ಮಾರಾಟ ಮಾಡಿರುವುದು ಕಂಡು ಬಂದಿದ್ದು ನಾವು ಮತ್ತು ನಮ್ಮ ಮುಖಂಡರು ಕೂಡಲೇ ಅಧಿಕಾರಿಗಳಿಗೆ ಮಾಹಿತಿ ನೀಡಿ ಅಂಗಡಿಗಳನ್ನ ಮುಚ್ಚಿಸುವ ಕಾರ್ಯ ಮಾಡಲಾಯಿತು ಅವರ ವಿರುದ್ದ ಬಿಬಿಎಂ ಅಧಿಕಾರಿಗಳು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.

ಇನ್ನು, ಕರ್ನಾಟಕದಲ್ಲಿ ಗೋಹತ್ಯೆ ನಿಷೇಧವಿದ್ದರು ಅಕ್ರಮವಾಗಿ ಗೋಹತ್ಯೆ ನಡೆಯುತ್ತಿದೆ. ಎಲ್ಲಾ ಗ್ರಾಮಗಳಲ್ಲೂ ಗೋ ಮಾಂಸ ಮಾರಾಟ ಮಾಡುತ್ತಿದ್ದಾರೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಗೋಹತ್ಯೆ ನಿಷೇಧ ಕಾನೂನಿನ ಬಗ್ಗೆ ಅವರಿಗೆ ಅರಿವು ಮೂಡಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು. ಸನಾತನ ಧರ್ಮದಲ್ಲಿ ಗೋಮಾತೆಗೆ ಎರಡನೇ ತಾಯಿಯ ಪೂಜನೀಯ ಸ್ಥಾನಮಾನ ನೀಡಲಾಗಿದೆ. ಗೋ ಮಾತೆಯನ್ನು ನಾವು ಪೂಜಿಸುತ್ತೇವೆ. ಸರ್ಕಾರಕ್ಕೆ ಅಷ್ಟೇ ಅಲ್ಲ, ನಾವು ಸಮಾಜದಲ್ಲಿ ಸಹ ಕಳಕಳಿ ಮೂಡಿಸಬೇಕಾಗಿದೆ ಎಂದು ಹೇಳಿದರು.

ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಗೋಹತ್ಯೆ ಕಾನೂನು ಬಗ್ಗೆ ಕ್ರಮ ಕೈಗೊಂಡಿತ್ತು,ಈಗಿರುವ ಕಾಂಗ್ರೆಸ್ ಸರ್ಕಾರವು ಸಹ ಇದನ್ನು ಮುಂದುವರೆಸಿಕೊಂಡು ಹೋಗುವಂತೆ ಮನವಿ ಮಾಡುತ್ತೇನೆ ಎಂದರು.

ಈ ವೇಳೆ ಗ್ರಾಮದ ಮುಖಂಡರಾದ ಉಮೇಶ್,ಕೃಷ್ಣ, ಅರುಣ್ ಗೌಡ,ವಿನಯ್ ಕುಮಾರ್ ಇದ್ದರು.

ಇತ್ತೀಚಿನ ಸುದ್ದಿ