Ramanavami : ಶ್ರದ್ಧಾ ಭಕ್ತಿಯಿಂದ ರಾಮನಾಮ ಸ್ಮರಣೆ: ಭಕ್ತಾದಿಗಳಿಗೆ ಅನ್ನ ಸಂತರ್ಪಣೆ
ಸ್ಥಳೀಯ ಸುದ್ದಿ


ಶ್ರದ್ಧಾ ಭಕ್ತಿಯಿಂದ ರಾಮನಾಮ ಸ್ಮರಣೆ: ಭಕ್ತಾದಿಗಳಿಗೆ ಅನ್ನ ಸಂತರ್ಪಣೆ.
ಕೆ.ಆರ್.ಪುರ: ಶ್ರಿರಾಮನವಮಿಯ ಅಂಗವಾಗಿ ಕುರುಡು ಸೊಣ್ಣೆನಹಳ್ಳಿಯ ಶ್ರೀ ವೀರಾಂಜನೇಯ ಸ್ವಾಮಿಗೆ ಶ್ರೀರಾಮನವಮಿಯ ಹಿನ್ನೆಲೆಯಲ್ಲಿ ದೇವರಿಗೆ ವಿಶೇಷ ಅಲಂಕಾರ ಮಾಡಲಾಯಿತು.
ವೀರಾಂಜನೇಯ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ ಮೇಡಹಳ್ಳಿ ಜಗ್ಗಿ ಅವರ ಕುಟುಂಬದವರು ಅನ್ನ ಸಂತರ್ಪಣೆ,ಮಜ್ಜಿಗೆ, ಕೋಸಂಬರಿ ಮತ್ತು ಪಾನಕ ವಿತರಿಸಿ ಮಾಡಿದರು.ನೂರಾರು ಭಕ್ತರು ಶ್ರದ್ಧೆಯಿಂದ ರಾಮ ಮತ್ತು ಹನುಮಂತನ ದರ್ಶನ ಮಾಡಿ ಪ್ರಸಾದವನ್ನ ಸ್ವೀಕರಿಸಿದರು.
ರಾಮನವಮಿಯ ಅಂಗವಾಗಿ ದೇವಾಲಯವನ್ನು ತಳಿರು ತೋರಣ, ವಿದ್ಯುತ್ ದೀಪಗಳಿಂದ ಅಲಂಕರಿಲಾಗಿತ್ತು. ಪಟ್ಟಣ ಹಾಗೂ ದೇವಾಲಯದ ರಸ್ತೆಯಲ್ಲಿ ಕೇಸರಿ ಧ್ಚಜ ಹಾಗೂ ಬಂಟಿಂಗ್ಸ್ ರಾರಾಜಿಸುತ್ತಿದ್ದವು