Ramanavami: ಅದ್ದೂರಿ ಕೋದಂಡರಾಮಸ್ವಾಮಿ ಬ್ರಹ್ಮರಥೋತ್ಸವ

ಸ್ಥಳೀಯ ಸುದ್ದಿ

ರಾಘವೇಂದ್ರ ಹೆಚ್​.ಎ

4/7/20251 min read

ಅದ್ದೂರಿ ಕೋದಂಡರಾಮಸ್ವಾಮಿ ಬ್ರಹ್ಮರಥೋತ್ಸವ.

ಮಹದೇವಪುರ: ರಾಮನವಮಿ ಹಬ್ಬದ ಅಂಗವಾಗಿ ಕ್ಷೇತ್ರದ ಗುಂಜೂರು ಗ್ರಾಮದಲ್ಲಿ ಶ್ರೀ ಕೊದಂಡರಾಮಸ್ವಾಮಿ ದೇವಾಲಯದಲ್ಲಿ ರಾಮನವಮಿ ಮತ್ತು ಕೋದಂಡರಾಮ ಸ್ವಾಮಿಯ ಬ್ರಹ್ಮರಥೋತ್ಸವ ನೆರವೇರಿತು.

ವಿಶೇಷವಾಗಿ ನಿರ್ಮಿಸಿದ್ದ ಅಲಂಕೃತ ಬ್ರಹ್ಮರಥದಲ್ಲಿ ಸ್ವಾಮಿಯ ಉತ್ಸವ ಮೂರ್ತಿಯನ್ನು ಕುರಿಸಿ ರಥವನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ಎಳೆಯಲಾಯಿತು. ಭಕ್ತರು ಮೆರವಣಿಗೆ ಸಂದರ್ಭದಲ್ಲಿ ರಥಕ್ಕೆ ಈಡುಗಾಯಿಯೊಂದಿಗೆ ಜವನ, ಹೂ, ಬಾಳೆಹಣ್ಣನ್ನು ಎಸೆದು ಭಕ್ತಿ ಮೆರೆದರು

ಬ್ರಹ್ಮರಥೋತ್ಸವ ಮುಂಬಾಗ ಮೆರವಣಿಗೆ ಯಲ್ಲಿ ಡೊಲು ಕುಣಿತ. ನಾದಸ್ವರ ಮೇಳಿ, ಕೀಲುಕುದುರೆ, ವೀರ ಗಾಸೆ .ಬೃಹತ ಗಾತ್ರದ ಗಾರುಡಿ ಬೊಂಬೆಗಳ ನೃತ್ಯ.ವಿವಿಧ ಕಲಾತಂಡಗಳು ಮತ್ತು ಜೋಡೇತ್ತುಗಳು ರಥೋತ್ಸವಕ್ಕೆ ಮೆರುಗು ನೀಡಿದವು.

ಸುತ್ತಮುತ್ತಲಿನ ಗ್ರಾಮಗಳಾದ ಬಳಗೆರೆ, ವರ್ತೂರು, ಗುಂಜೂರು ಪಾಳ್ಯ, ದಿಣ್ಣೆ, ಕಾಚಮಾರನಹಳ್ಳಿ, ಮುಳ್ಳೂರು, ನೆರಗಾ, ತಿಪ್ಪಸಂದ್ರ, ಹೊಸಹಳ್ಳಿ ಸೇರಿದಂತೆ ಹಲವು ಗ್ರಾಮಗಳಿಂದ ಬಂದ ಸಾವಿರಾರ ಭಕ್ತರಿಗೆ ಅನ್ನ ಸಂತರ್ಪಣೆ ನೆರವೇರಿಸಲಾಯಿತು. ರಥೋತ್ಸವ ಸಾಗುವ ರಸ್ತೆಯ ಹಲವು ಕಡೆ ನೀರುಮಜಿಗೆ, ಪಾನಕ, ಕೋಸಂಬರಿ ನೀಡಲಾಯಿತು.

ರಾಮನವಮಿ ಪ್ರಯುಕ್ತ ಗ್ರಾಮದ ಎಲ್ಲಾ ದೇವಾಲಯಗಳಲ್ಲಿ ವಿಶೇಷ ಪೂಜೆ, ಅಲಂಕಾರಗಳನ್ನು ಮಾಡಲಾಗಿತ್ತು. ಭಕ್ತರು ಸರತಿ ಸಾಲಿನಲ್ಲಿ ನಿಂತು ಸ್ವಾಮಿಯ ದರ್ಶನ ಪಡೆದರು.

ಇತ್ತೀಚಿನ ಸುದ್ದಿ