Ration: ಆಹಾರ ಸಚಿವರ ಕ್ಷೇತ್ರದಲ್ಲಿ ಅಕ್ಕಿ ಸಮೇತ ಚೀಲಗಳ ಮಾರಾಟ ಆರೋಪ
ಸ್ಥಳೀಯ ಸುದ್ದಿ


ಆಹಾರ ಸಚಿವ ಕೆ.ಹೆಚ್ ಮುನಿಯಪ್ಪ ಅವರು ಉಸ್ತುವಾರಿ ಸಚಿವರಾಗಿರುವ ಜಿಲ್ಲೆಯಲ್ಲೇ ಅಕ್ಕಿ, ಚೀಲಗಳ ಮಾರಾಟದ ಆರೋಪ ಕೇಳಿಬಂದಿದೆ. ದೊಡ್ಡಬಳ್ಳಾಪುರ ನಗರದ ಟಿಎಪಿಎಂಸಿಎಸ್ ಆವರಣದಲ್ಲಿರುವ ಪಡಿತರ ವಿತರಣಾ ಕೇಂದ್ರದಲ್ಲಿ ಈ ಆರೋಪ ಕೇಳಿಬಂದಿದೆ.
ರಾಜ್ಯ ಸರ್ಕಾರ ಅನ್ನಭಾಗ್ಯ ಯೋಜನೆಯಡಿ ರಾಜ್ಯದ ಜನರ ಹಸಿವು ನೀಗಿಸುವ ಕೆಲಸಕ್ಕೆ ಮುಂದಾಗಿದ್ದರೇ ಇಲ್ಲಿನ ಪಡಿತರ ವಿತರಣಾ ಕೇಂದ್ರದಲ್ಲಿ ಹಣಕ್ಕಾಗಿ ಅಕ್ಕಿ ಸಮೇತ ಚೀಲಗಳನ್ನು ಮಾರಾಟ ಮಾಡಲಾಗುತ್ತಿದೆ ಜೊತೆಗೆ ಅಕ್ಕಿ ತೂಕದಲ್ಲಿ ವ್ಯತ್ಯಾಸ ಮಾಡಲಾಗುತ್ತಿದೆ ಎನ್ನುವ ಆರೋಪವನ್ನು ಗ್ರಾಹಕರು ಮಾಡಿದ್ದಾರೆ.
ಇದಕ್ಕೆ ಸಂಬಂಧಿಸಿದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ವೈರಲ್ ಆಗುತ್ತಿದೆ. ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಅಧಿಕಾರಿಗಳಿಗೆ ಆಗ್ರಹಿಸಿದ್ದಾರೆ.