ಆರ್‌ಸಿಬಿಗೆ ಕಿರೀಟ: ಕರುನಾಡಿನಲ್ಲಿ ಹಬ್ಬದ ವಾತಾವರಣ, ಬಸವನಪುರದಲ್ಲಿ ಕುಣಿದು ಸಂಭ್ರಮಿಸಿದ ಅಭಿಮಾನಿಗಳು

ಜಿಲ್ಲಾ ಸುದ್ದಿ

ಧರ್ಮ ಬಸವನಪುರ

6/4/20251 min read

ಕೆ.ಆರ್.ಪುರ: 18 ವರ್ಷಗಳ ವನವಾಸಕ್ಕೆ ಕೊನೆಗೂ ಮುಕ್ತಿ ಕಂಡು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡವು ಟ್ರೋಫಿ ಎತ್ತಿಹಿಡಿಯಲಿ ಎಂದು ಹಂಬಲಿಸುತ್ತಿದ್ದ, ಈ ಸಲ ಕಪ್‌ ನಮ್ಮದೇ ಎಂದು ಹುರಿದುಂಬಿಸುತ್ತಲೇ ಇದ್ದ ಆರ್‌ಸಿಬಿ ಅಭಿಮಾನಿಗಳ ಕನಸು ನನಸಾಗುದೆ.ಈ ಸಂತೋಷ ಮುಗಿಲು ಮುಟ್ಟಿತು.

ದೂರದ ಅಹಮದಾಬಾದ್‌ನಲ್ಲಿ ಆರ್‌ಸಿಬಿ ಐಪಿಎಲ್‌ ಫೈನಲ್‌ ಪಂದ್ಯವನ್ನು ಗೆಲ್ಲುತ್ತಿದ್ದಂತೆ ಇತ್ತ ಬಸವನಪುರದಲ್ಲಿ ಅಭಿಮಾನಿಗಳ ಸಂಭ್ರಮದ ಕಟ್ಟೆಯೊಡೆಯಿತು. ರಸ್ತೆ ಉದ್ದಕ್ಕೂ 'ಆರ್‌ಸಿಬಿ, ಆರ್‌ಸಿಬಿ' ಘೋಷಣೆ ತುಂಬಿತು.ಸಿಹಿ ಹಂಚಿ ಸಿಡಿ ಮದ್ದುಗಳನ್ನು ಸಿಡಿಸಿ ಸಂಭ್ರಮ ಆಚರಿಸಿದರು.

ಐದಾರು ಅಭಿಮಾನಿಗಳು ರಸ್ತೆಗಳಿಯುತ್ತಿದ್ದಂತೆಯೇ, ಅವರ ಹಿಂದೆ ಮತ್ತೊಬ್ಬರೆಂಬಂತೆ ಜನ ರಸ್ತೆಗೆ ಇಳಿಯುತ್ತಲೇ ಹೋದರು. ಬೈಕ್ ಎಕ್ಸಲೇಟರ್ ಗಳನ್ನ ಜೋರಾಗಿ ಸದ್ದು ಮಾಡುತ್ತಾ ದಾರಿಯಲ್ಲಿ ಬರುವ ವಾಹನ ಸವಾರರಿಗೆ ಶುಭಾಶಯ ಸಲ್ಲಿಸಿ ಸಂಭ್ರಸಿದರು.

ಅಭಿಮಾನಿಗಳು ಶರ್ಟ್ ಗಳನ್ನ ಬಿಚ್ಚಿ ಕಾರುಗಳ ಮೇಲೆ ಆರ್ ಸಿಬಿ ಬಾವುಟವನ್ನು ಹಾರಿಸಿ ಆರ್‌ಸಿಬಿ....ಆರ್‌ಸಿಬಿ...ಆರ್‌ಸಿಬಿ 'ಕೊಹ್ಲಿ..ಕೊಹ್ಲಿ..' ಎಂದು ಕೂಗುತ್ತಿದ್ದ ದೃಶ್ಯಗಳು ಕಂಡುಬಂದವು ಎಂದು ಜೈಕಾರ ಹಾಕಿದರು. ರಸ್ತೆಯಲ್ಲಿ ಬರುವ ಎಲ್ಲಾರ‌ ಬಾಯಲ್ಲೂ ಆರ್‌ಸಿಬಿ ಘೋಷಣೆ ಕೂಗಿಸಿ ಅದ್ದೂರಿಯಾಗಿ ವಿಜಯೋತ್ಸವ ಮಾಡಿದರು.