ಕರ್ನಾಟಕದ ಅಯ್ಯಪ್ಪ ಭಕ್ತರಿಗೆ ಕೇರಳದಲ್ಲಿ ನಿರ್ಬಂಧ! ರಸ್ತೆ ತಡೆದು ಮಾಲಾಧಾರಿಗಳಿಂದ ಪ್ರತಿಭಟನೆ

ಸ್ಥಳೀಯ ಸುದ್ದಿದೇಶ/ವಿದೇಶ

ಧರ್ಮ ಬಸವನಪುರ.

1/13/20261 min read

ಕೇರಳ: ಶಬರಿಮಲೆನಲ್ಲಿ ನಾಳೆ ಮಕರ ಸಂಕ್ರಾಂತಿಗೆ ಜ್ಯೋತಿ ದರ್ಶನಕ್ಕೆ ತೆರಳುತ್ತಿದ್ದ ಕರ್ನಾಟಕದ ಸಾವಿರಾರು ಭಕ್ತರಿಗೆ ಕೇರಳ ಪೊಲೀಸರು ತಡೆ ನೀಡಿದ್ದಾರೆ. ಶಬರಿಮಲೆಗೂ 60 ಕಿಲೋ ಮೀಟರ್ ದೂರದ ಪ್ರದೇಶದಲ್ಲಿ ದಾರಿ ಮಧ್ಯೆ ಭಕ್ತರ ವಾಹನಗಳಿಗೆ ತಡೆ ನೀಡಿ, ಕೇರಳದ ಬಸ್‌ಗಳಲ್ಲಿ ತೆರಳುವಂತೆ ಸೂಚನೆ ನೀಡಿದ್ದಾರೆ.

ಕರ್ನಾಟಕದ ಅಯ್ಯಪ್ಪ ಭಕ್ತ ವಾಹನಗಳನ್ನು ಶಬರಿಮಲೆಯಿಂದ 60 ಕಿಮೀ ದೂರದಲ್ಲೇ ಅಂದರೆ ಎರುಮಲೈಯಲ್ಲಿ ಕೇರಳ ಪೊಲಿಸರು ತಡೆಯುತ್ತಿದ್ದು, ವಾಹನಗಳನ್ನು ಇಲ್ಲೇ ನಿಲ್ಲಿಸಿ ಶಬರಿಮಲೆಗೆ ಕೇರಳ ಬಸ್ನಲ್ಲೇ ತೆರಳುವಂತೆ ತಾಕೀತು ಮಾಡಿದ್ದಾರೆ. ಚಿಕ್ಕಮಗಳೂರು, ಬಾಗಲಕೋಟೆ, ಶಿವಮೊಗ್ಗ, ಸೇರಿದಂತೆ ವಿವಿಧ ಜಿಲ್ಲೆಯಿಂದ ತೆರಳಿದ ಅಯ್ಯಪ್ಪ ಮಾಲಾಧಾರಿಗಳು ಕಂಗಾಲಾಗಿದ್ದು, ಟಿಪಿ ಕಟ್ಟಿ ಬಂದರೂ ಸಹ ನಮ್ಮ ವಾಹನಗಳನ್ನು ತಡೆದಿದ್ದಾರೆ ಎಂದು ಆರೋಪಿಸಿದ್ದಾರೆ. ಇನ್ನು ಕೇರಳ ಪೊಲೀಸರ ವಿರುದ್ಧ ಅಯ್ಯಪ್ಪ ಭಕ್ತರು ರಸ್ತೆಯಲ್ಲೇ ಪ್ರತಿಭಟನೆ ನಡೆಸಿದ್ದು, ಕೇರಳ ಪೊಲೀಸರ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

ಮಾಲಾದಾರಿಗಳಿಗೆ ಎರುಮಲೈಯಿಂದ ಮುಂದೆ ಹೋಗಲು ಬಿಡುತ್ತಿಲ್ಲ ಎಂದು ಅಯ್ಯಪ್ಪಸ್ವಾಮಿ ಭಕ್ತರು ಆರೋಪಿಸಿದ್ದಾರೆ. ಕೇರಳದ ಪೊಲೀಸರು ಕೇರಳ ಹಾಗೂ ಇತರೆ ವಾಹನಗಳಿಗೆ ಮಾತ್ರ ಒಳಗೆ ಬಿಡುತ್ತಿದ್ದಾರೆ. ಕರ್ನಾಟಕದ ನೋಂದಣಿ ಇರುವ ವಾಹನಗಳಿಗೆ ಪ್ರವೇಶ ನಿರ್ಬಂಧಿಸಿದ್ದಾರೆ ಎಂದು ಆರೋಪ ಕೇಳಿಬಂದಿದ್ದು, ಶಿವಮೊಗ್ಗದ ಭದ್ರಾವತಿ ಸೇರಿದಂತೆ ಕರ್ನಾಟಕದ ಹಲವು ಅಯ್ಯಪ್ಪ ಮಾಲಾಧಾರಿಗಳು ಪ್ರತಿಭಟನೆ ನಡೆಸಿದ್ದಾರೆ.

ಕೇರಳ ಪೊಲೀಸರ ಕ್ರಮಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಕರ್ನಾಟಕದ ಅಯ್ಯಪ್ಪ ಮಾಲಾಧಾರಿಗಳು ಏರುಮಲೈನಲ್ಲಿ ರಸ್ತೆಯಲ್ಲೇ ಕುಳಿತು ಪ್ರತಿಭಟನೆ ನಡೆಸಿದ್ದಾರೆ. ರಸ್ತೆಯನ್ನ ತಡೆದು ರಸ್ತೆ ಮಧ್ಯೆದಲ್ಲೇ ಕುಳಿತು ಮಾಲಾಧಾರಿಗಳು ಭಜನೆ ಮಾಡಿದ್ದಾರೆ.