RTE : LKG ಮಕ್ಕಳ ಪೋಷಕರಿಗೆ ಸಿಹಿಸುದ್ದಿ, ನಾಳೆಯಿಂದ ಶಾಲಾವಾರು ಸೀಟ್ ಲಭ್ಯ ಪಟ್ಟಿ ಬಿಡುಗಡೆ
ರಾಜ್ಯ


ತಮ್ಮ ಮಕ್ಕಳನ್ನು ಖಾಸಗಿ ಶಾಲೆ, ಅನುದಾನಿತ ಶಾಲೆಗಳಲ್ಲಿ ಸೇರಿಸಲು ಉತ್ಸುಕರಾಗಿರುವ ಪೋಷಕರಿಗೆ ಸಿಹಿಸುದ್ದಿಯೊಂದು ಸಿಕ್ಕಿದೆ, ಶಾಲೆಗಳ ಆಯ್ಕೆ, ದಾಖಲೆಗಳ ಬಗ್ಗೆ ಪೋಷಕರಿಗಿರುವ ಗೊಂದಲಗಳಿಗೆ ಸ್ಪಷ್ಟ ಮಾಹಿತಿ ಇಲ್ಲಿದೆ.
2025-26ನೇ ಸಾಲಿನಲ್ಲಿ ಶಿಕ್ಷಣ ಹಕ್ಕು ಕಾಯಿದೆ-2009 ರ ಅಡಿ ಅಲ್ಪ ಸಂಖ್ಯಾತವಲ್ಲದ ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳಲ್ಲಿ LKG ಮತ್ತು 1ನೇ ತರಗತಿಯಿಂದ 8ನೇ ತರಗತಿವರೆಗೆ, ಪ್ರವೇಶ ಪ್ರಕ್ರಿಯೆಗೆ ಸಂಬಂಧ, ಇದೀಗ ತಾತ್ಕಾಲಿಕ ಮಾರ್ಗಸೂಚಿ, ವೇಳಾಪಟ್ಟಿ ಸಹಿತ ನೋಟಿಫಿಕೇಶನ್ ಶಿಕ್ಷಣ ಇಲಾಖೆ ಬಿಡುಗಡೆ ಮಾಡಿದೆ.
ವಿದ್ಯಾರ್ಥಿ ನಿವಾಸದ ನೆರೆಹೊರೆ ಶಾಲೆಗಳ ಅಂತಿಮ ಪಟ್ಟಿ LKG ಹಾಗೂ 1ನೇ ತರಗತಿಗೆ ಅನುದಾನರಹಿತ ಶಾಲೆಗಳಲ್ಲಿ ಶಾಲಾವಾರು ಶೇಕಡ.25ರ ಪ್ರಮಾಣದಲ್ಲಿ ಲಭ್ಯವಿರುವ ಸೀಟುಗಳು ಹಾಗೂ ಅನುದಾನಿತ ಶಾಲೆಗಳಲ್ಲಿ ಕನಿಷ್ಠ ಲಭ್ಯವಿರುವ ಶಾಲಾವಾರು ಸೀಟುಗಳ ಸಂಖ್ಯೆಯನ್ನು ಜಿಲ್ಲೆಯ ಅಧಿಕೃತ ವೆಬ್‌ಸೈಟ್‌ನಲ್ಲಿ ಅಥವಾ ಕಚೇರಿಯ ನೋಟಿಸ್ ಬೋರ್ಡ್‌ನಲ್ಲಿ ದಿನಾಂಕ ಏಪ್ರಿಲ್ 8 ರಂದು ಪ್ರಕಟಿಸಲಾಗುವುದು.


ಅನುದಾನಿತ ಶಾಲೆಗಳು ಸೇರಿದಂತೆ RTE ಅಡಿ ದಾಖಲಾತಿ ಕೋರಿ ಪೋಷಕರು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೆಳಗಿನಂತೆ ದಿನಾಂಕಗಳನ್ನು ನಿಗದಿ ಮಾಡಲಾಗಿದೆ.


ಶಾಲಾ ದಾಖಲಾತಿಗೆ ವಯೋಮಿತಿ:
ಶಿಕ್ಷಣಹಕ್ಕುಕಾಯ್ದೆಯಡಿಪ್ರಾರಂಭಿಕತರಗತಿಗಳಿಗೆಮಕ್ಕಳಪ್ರವೇಶಕ್ಕೂವಯಸ್ಸುನಿಗದಿಪಡಿಸಲಾಗಿದೆ. LKGಗೆಪ್ರವೇಶಪಡೆಯುವಮಕ್ಕಳಿಗೆಕನಿಷ್ಠ 4 ವರ್ಷಆಗಿರಬೇಕು, 1 ನೇತರಗತಿಗೆಪ್ರವೇಶಪಡೆಯುವಮಕ್ಕಳಿಗೆಕನಿಷ್ಠ 5 ವರ್ಷ 5 ತಿಂಗಳುಹಾಗೂಗರಿಷ್ಠ 7 ವರ್ಷನಿಗದಿಪಡಿಸಲಾಗಿದೆ.