RTE School List: ಪೋಷಕರಿಗೆ ಸಿಹಿಸುದ್ದಿ, RTE ಶಾಲೆಗಳ ಪಟ್ಟಿ ಬಿಡುಗಡೆ
ಸ್ಥಳೀಯ ಸುದ್ದಿ


ದೊಡ್ಡಬಳ್ಳಾಪುರ: RTE ಶಿಕ್ಷಣ ಹಕ್ಕು ಕಾಯಿದೆ ಅನ್ವಯ ಖಾಸಗಿ, ಅನುದಾನಿತ ಶಾಲೆಗಳಲ್ಲಿ ಉಚಿತ ಶಿಕ್ಷಣ ಪ್ರವೇಶಾತಿಗೆ ಕಾಯುತ್ತಿರುವ ಪೋಷಕರಿಗೆ ಇಲಾಖೆ ವತಿಯಿಂದ ಶಾಲೆಗಳ ಪಟ್ಟಿ ಬಿಡುಗಡೆ ಮಾಡಲಾಗಿದೆ.
ಈ ಪಟ್ಟಿ ಅನ್ವಯ ಖಾಸಗಿ ಶಾಲೆಗೆ ಸೇರಿಸಲು ಉತ್ಸುಕರಾಗಿದ್ದ ದೊಡ್ಡಬಳ್ಳಾಪುರ ನಗರ ಜನತೆಗೆ ಸ್ವಲ್ಪ ನಿರಾಸೆಯಾದರೂ ನಗರದ ಎಲ್ಲಾ ಅನುದಾನಿತ ಶಾಲೆಗಳಲ್ಲಿ RTE ಅಡಿ ಮಕ್ಕಳನ್ನು ದಾಖಲಾತಿ ಮಾಡಿಸಲು ಅವಕಾಶವಿದೆ ಎಂದು ತಾಲೂಕು ಶಿಕ್ಷಣ ಅಧಿಕಾರಿಗಳ ಕಚೇರಿಯ ನೋಡಲ್ ಅಧಿಕಾರಿಗಳಾದ ಭೀಮ್ರಾಜ್ ಕೆ.ಎನ್ ಅವರು "ಪ್ರಜಾ ಭಾರತ್" ವೆಬ್ ಪೋರ್ಟಲ್ ಗೆ ಮಾಹಿತಿ ನೀಡಿದ್ದಾರೆ.
ಅನುದಾನಿತ ಶಾಲೆಗಳ ಪಟ್ಟಿ:
1.ಬಾಪೂಜಿ ಹಿರಿಯ ಪ್ರಾಥಮಿಕ ಶಾಲೆ.
2. ಶ್ರೀ ಅರವಿಂದ ಹಿರಿಯ ಪ್ರಾಥಮಿಕ ಶಾಲೆ.
3. ಮಂಗಳ ಹಿರಿಯ ಪ್ರಾಥಮಿಕ ಶಾಲೆ.
4. ಸ್ವಾಮಿ ವಿವೇಕಾನಂದ ಹಿರಿಯ ಪ್ರಾಥಮಿಕ ಶಾಲೆ.
5. ಚೇತನ ಹಿರಿಯ ಪ್ರಾಥಮಿಕ ಶಾಲೆ.
6. ಸೇಂಟ್ ಮೀರಾ ಕಿರಿಯ ಪ್ರಾಥಮಿಕ ಶಾಲೆ.
ಇನ್ನು, ನಗರವನ್ನು ಹೊರತುಪಡಿಸಿದಂತೆ ತಾಲೂಕಿನಾದ್ಯಂತ ಎರಡು ಖಾಸಗಿ ಶಾಲೆಗಳಲ್ಲಿ ಮಾತ್ರ RTE ಶಿಕ್ಷಣ ಹಕ್ಕು ಕಾಯಿದೆ ಅಡಿ ದಾಖಲಾತಿಗೆ ಅವಕಾಶವಿದೆ.
1. ಶ್ರೀಗುರುರಾಘವೇಂದ್ರ ಶಾಲೆ, KG ಲಕ್ಕಸಂದ್ರ,
2. G.K ನ್ಯಾಷನಲ್ ಪಬ್ಲಿಕ್ ಸ್ಕೂಲ್, ಗುಂಡಸಂದ್ರ
ಈ ಶಾಲೆಗಳಲ್ಲಿ ಮಾತ್ರ ಖಾಸಗಿ ಶಾಲೆಗಳ ಪಟ್ಟಿಯಲ್ಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

