4.5 ಲಕ್ಷ ಬೆಲೆ ಬಾಳುವ ಹೈ ಮಾಸ್ಟ್​ ವಿದ್ಯುತ್​ ಕಂಬಕ್ಕೆ ರೂಪಿಣಿ ಮಂಜುನಾಥ್​ರಿಂದ ಚಾಲನೆ

ಸ್ಥಳೀಯ ಸುದ್ದಿ

ರಾಘವೇಂದ್ರ ಹೆಚ್.ಎ

10/14/20251 min read

ದೊಡ್ಡಬಳ್ಳಾಪುರ: ನಗರದ ಸೋಮೇಶ್ವರ ಬಡಾವಣೆ ಮತ್ತು ಕಚೇರಿ ಪಾಳ್ಯ ವಾರ್ಡ್​ ಮಧ್ಯದಲ್ಲಿರುವ ಸ್ಮಾಶಾನದ ಬಳಿ ಅ.13ರಂದು ಸೋಮವಾರ ಹೈ ಮಾಸ್ಟ್​ ವಿದ್ಯುತ್​ ಕಂಬಕ್ಕೆ ನಿರ್ಮಿಸಿ ಚಾಲನೆ ನೀಡಲಾಯಿತು.

ಈ ಕುರಿತು ಕಚೇರಿ ಪಾಳ್ಯ ವಾರ್ಡ್​ನ ಕಾಂಗ್ರೆಸ್​ ಮುಖಂಡರಾದ ಟಿ.ಮಂಜುನಾಥ್​ ರವರು ಪ್ರಜಾಭಾರತ್​ ವೆಬ್​ ಪೋರ್ಟಲ್​ನೊಂದಿಗೆ ಮಾತನಾಡಿ, ನಗರದ ಕಚೇರಿಪಾಳ್ಯ ಮತ್ತು ದೊಡ್ಡಮ್ಮ ಗುಡಿ ಮುಖ್ಯರಸ್ತೆಯಲ್ಲಿರುವ ಸ್ಮಶಾನದ ಬಳಿ ಸಾರ್ವಜನಿಕರ ಹಲವು ದಿನಗಳ ಬೇಡಿಕೆಯಂತೆ ಮತ್ತು ಅವರ ಅನುಕೂಲಕ್ಕಾಗಿ ಇಂದು ನಗರಸಭೆ ನಗರಸಭೆ ನಿಧಿಯ ಶೇ.24.10ರಡಿಯಲ್ಲಿ ನಗರಸಭಾ ಸದಸ್ಯರಾದ ರೂಪಿಣಿ ಮಂಜುನಾಥ್​ ರವರಿಗೆ ಹಂಚಿಕೆಯಾಗಿದ್ದ ಅನುದಾನದಲ್ಲಿ ಸುಮಾರು 4.5 ಲಕ್ಷ ಬೆಲೆ ಬಾಳುವ 8 ಲೈಟ್​ಗಳನ್ನೊಳಗೊಂಡ ಹೈಮಾಸ್ಟ್​ ವಿದ್ಯುತ್​ ಕಂಬವನ್ನು ನಿರ್ಮಾಣ ಮಾಡಲಾಯಿತು. ಇದರೊಂದಿಗೆ ನಿತ್ಯ ಸಂಜೆವೇಳೆ ಈ ಸ್ಮಶಾನದ ಮಾರ್ಗದಲ್ಲಿ ಸಂಚರಿಸುವ ಸಾರ್ವಜನಿಕರಿಗೆ ಅನುಕೂಲವಾಗಲಿದೆ ಎಂದು ಅವರು ಹೇಳಿದರು.

ಈ ವೇಳೆ ಕಚೇರಿಪಾಳ್ಯ ನಗರಸಭಾ ಸದಸದ್ಯರಾದ ರೂಪಿಣಿ ಮಂಜುನಾಥ್​, ಸೋಮೇಶ್ವರ ಬಡಾವಣೆ ವಾರ್ಡ್​ ಸದಸ್ಯರಾದ ವಡ್ಡರಹಳ್ಳಿ ರವಿ, ನಗರಸಭೆ ಇಂಜಿನಿಯರ್​ ರಾಮೇಗೌಡ ಸೇರಿದಂತೆ ಇತರರು ಇದ್ದರು.

ಪ್ರಜಾ ಭಾರತ್ ನ್ಯೂಸ್ ವೆಬ್ ಪೋರ್ಟಲ್ ವಾಟ್ಸಪ್ ಗ್ರೂಪ್ ಸೇರಲು 👇👇Follow this link to join my WhatsApp group https://chat.whatsapp.com/Fj6L4Eak7N994zl2QHSpHK