ಎಚ್ ಡಿ ಕುಮಾರಸ್ವಾಮಿ ಹುಟ್ಟು ಹಬ್ಬದ ಪ್ರಯುಕ್ತ ಮಹಿಳೆಯರಿಗೆ ಸೀರೆ ವಿತರಣೆ.
ಸ್ಥಳೀಯ ಸುದ್ದಿರಾಜಕೀಯ


ಕೆಆರ್ ಪುರ: ಜೆಡಿಎಸ್ ಪಕ್ಷ ರಾಜ್ಯಹಿತಕಾಯುವ ಖಾಳಜಿವುಳ್ಳ ಪಕ್ಷವಾಗಿದ್ದು, ಪಕ್ಷಕ್ಕಾಗಿ ದುಡಿದವರಿಗೆ ಜೆಡಿಎಸ್ ನಲ್ಲಿ ಉತ್ತಮ ಸ್ಥಾನ ಲಭಿಸಲಿದೆ ಎಂದು ಜೆಡಿಎಸ್ ಬೆಂಗಳೂರು ನಗರ ಅಧ್ಯಕ್ಷ ರಮೇಶ್ ಗೌಡ ಅವರು ತಿಳಿಸಿದರು.
ಕ್ಷೇತ್ರದ ವಿಜಿನಾಪುರದಲ್ಲಿ ಹಮ್ಮಿಕೊಂಡಿದ್ದ ಜೆಡಿಎಸ್ ಪಕ್ಷ ಸೇರ್ಪಡೆ ಹಾಗೂ ಕೇಂದ್ರ ಸಚಿವ ಕುಮಾರ ಸ್ವಾಮಿ ಅವರ ಹುಟ್ಟು ಹಬ್ಬ ಆಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಬೆಂಗಳೂರಿನಲ್ಲಿ ಜೆಡಿಎಸ್ ಪಕ್ಷ ಹಿಂದುಳಿದಿತ್ತು ಆದರೆ ಇದೀಗ ಹೊಸ ಅಧ್ಯಕ್ಷರುಗಳ ನೇಮಕದೊಂದಿಗೆ ಪುಟಿದೆದ್ದಿದೆ, ಪಕ್ಷ ಸಂಘಟನೆ ಕಾರ್ಯ ಸರ್ಮಪಕವಾಗಿ ಸಾಗಿದ್ದು ಚುನಾವಣಾ ಫಲಿತಾಂಶದಲ್ಲಿ ಬದಲಾವಣೆ ಪರ್ವ ಬೀರಲಿದೆ ಎಂದು ಹೇಳಿದರು.
ಕುಮಾರಸ್ವಾಮಿಯವರು ರೈತರಿಗಾಗಿ ಹಲವು ಯೋಜನೆಗಳನ್ನು ಜಾರಿಗೆ ತಂದು ಮನೆ ಮಾತಾಗಿದ್ದವರು, ಅವರ ಆಳ್ವಿಕೆಎಲ್ಲರಿವೂ ಮಾರ್ಗದರ್ಶನವಾಗಿದೆ ಎಂದು ಹೇಳಿದರು.
ಕೆಆರ್ ಪುರ ಕ್ಷೇತ್ರ ಜೆಡಿಎಸ್ ಅಧ್ಯಕ್ಷ ಲಕ್ಷ್ಮಣ್ ಮಾತನಾಡಿ, ಇಂದು ಡಿ. 16 ರಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಹುಟ್ಟು ಹಬ್ಬವಿದ್ದು ಅವರ ಹುಟ್ಟು ಹಬ್ಬವನ್ನು ವಿಜಿನಾಪುರ ಬಡ ಮಹಿಳೆಯರಿಗೆ ಸೀರೆ ವಿತರಿಸುವ ಮೂಲಕ ಆಚರಿಸಿದ್ದೇವೆ ಎಂದರು. ಈ ಭಾಗದಲ್ಲಿ ಪಕ್ಷ ಸಂಘಟನೆ ಮಾಡಲು ವಿಜಿನಾಪುರದ ತೌಸಿಫ್ ಮುಂದೆ ಬಂದಿದ್ದಾರೆ ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಜೆಡಿಎಸ್ ಪಕ್ಷವನ್ನ ಮತ್ತಷ್ಟು ಸಂಘಟನೆ ಮಾಡಲಾಗುತ್ತದೆ ಎಂದರು.
ವಿಜಿನಾಪುರದ ತೌಸಿಫ್ ಹಾಗೂ ಅವರ 250 ಕ್ಕೂ ಹೆಚ್ಚು ಸಂಘಡಿಗರು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದು ಪಕ್ಷ ಸಂಘಟನೆಯತ್ತ ಹೆಚ್ಚು ಗಮನ ನೀಡಲಿ ಎಂದು ಆಶಿಸಿದರು.
ಮಾಜಿ ಪ್ರಧಾನಿ ದೇವೇಗೌಡರು, ಕೇಂದ್ರ ಸಚಿವ ಕುಮಾರಸ್ವಾಮಿ, ನಿಖೀಲ್ ಕುಮಾರಸ್ವಾಮಿ ಅವರು ಅಶೀರ್ವಾದಿಂದ ಬೆಂಗಳೂರಿನಲ್ಲಿ ಜೆಡಿಎಸ್ ಪಕ್ಷವನ್ನು ಘಟ್ಟಿಗೊಳಿಸುವ ಪಣ ತೊಟ್ಟಿದ್ದೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಹಿರಿಯ ಮುಖಂಡ ಬಾಲಣ್ಣ, ಸರ್ವ ನಗರ ಅಧ್ಯಕ್ಷ ಶಿವಕುಮಾರ್, ಮಹದೇವಪುರ ಅಧ್ಯಕ್ಷ ಓಬಳೇಶ್, ಮುಖಂಡರಾದ ಆರ್. ನಾಗರಾಜ್, ಯಾಸಿನ್, ರೆಡ್ಡಿ, ಶಿವಕುಮಾರ್ ಮತ್ತಿತರರಿದ್ದರು.