Ballary : ಹಾವು ಕಚ್ಚಿ ಮಲಗಿದ್ದಲ್ಲೇ ವಿದ್ಯಾರ್ಥಿನಿ ಸಾವು
ಜಿಲ್ಲಾ ಸುದ್ದಿ


ಬಳ್ಳಾರಿ: ನಾಗರ ಹಾವು ಕಚ್ಚಿ ಬಾಲಕಿ ಸಾವನ್ನಪ್ಪಿರುವ ಘಟನೆ ಬಳ್ಳಾರಿ ತಾಲೂಕಿನ ಹೊಸ ಮೋಕಾ ಗ್ರಾಮದಲ್ಲಿ ನಡೆದಿದೆ.
ಹೊಸ ಮೋಕಾ ಗ್ರಾಮದ ಲಕ್ಷ್ಮಣ ಹಾಗೂ ಶೇಕಮ್ಮ ಎನ್ನುವ ದಂಪತಿಯ ಮಗಳು ಶ್ರಾವಣಿ ಮೃತ ಬಾಲಕಿ, ಮೋಕ ಸರ್ಕಾರಿ ಶಾಲೆಯಲ್ಲಿ 10ನೇ ತರಗತಿ ಓದುತ್ತಿದ್ದಳು. ರಾತ್ರಿ ವೇಳೆ ಮನೆಯೊಳಗೆ ಬಂದಿದ್ದ ನಾಗರ ಹಾವು ಬಾಲಕಿಗೆ ಮೂರು ಬಾರಿ ಕಚ್ಚಿದೆ. ಕೈ ಮತ್ತು ಕಾಲಿಗೆ ಹಾವು ಕಡಿದರೂ ಎಚ್ಚರವಾಗದೇ ಮಲಗಿದ್ದ ಬಾಲಕಿ ಬೆಳಕಾಗುವಷ್ಟರಲ್ಲಿ ಸಾವನ್ನಪ್ಪಿದ್ದಾಳೆ. ಮುಂಜಾನೆ ಮನೆ ಮಂದಿ ಎದ್ದಾಗ ಬಾಲಕಿ ಮೃತಪಟ್ಟಿರುವುದು ತಿಳಿದುಬಂದಿದೆ.
ಬಾಲಕಿಯನ್ನು ಕಚ್ಚಿದ್ದ ಹಾವು ಬೆಳಗ್ಗೆಯಾದರೂ ಮನೆಯಲ್ಲೇ ಇದ್ದೂದನ್ನ ಕಂಡ ಮನೆಯವರು ಹಾವನ್ನ ಹೊಡೆದು ಸಾಯಿಸಿದ್ದಾರೆ. ಮಗಳನ್ನು ಕಳೆದುಕೊಂಡು ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ.