ಪ್ರಧಾನಿ ಮೋದಿ ಜನ್ಮದಿನಕ್ಕೆ ಕ್ಷೇತ್ರದಲ್ಲಿ 250 ಕಡೆ ಸೇವಾ ಕಾರ್ಯಕ್ರಮ

ಸ್ಥಳೀಯ ಸುದ್ದಿ

ಧರ್ಮ ಬಸವನಪುರ.

9/16/20251 min read

ಮಹದೇವಪುರ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ 75ನೇ ಜನ್ಮದಿನದ ಪ್ರಯುಕ್ತ ಬುಧವಾರ ಮಾಜಿ ಸಚಿವ ಅರವಿಂದ ಲಿಂಬಾವಳಿ ಮತ್ತು ಶಾಸಕಿ ಮಂಜುಳಾ ಅರವಿಂದ ಲಿಂಬಾವಳಿ ನೇತೃತ್ವದಲ್ಲಿ ಮಹದೇವಪುರ ವಿಧಾನಸಭಾ ಕ್ಷೇತ್ರದ ನಗರ ಮಂಡಲ ಮತ್ತು ಗ್ರಾಮಾಂತರ ಮಂಡಲದ ವತಿಯಿಂದ ಮತಕ್ಷೇತ್ರದ ಸುಮಾರು 250ಕ್ಕೂ ಹೆಚ್ಚು ಕಡೆಗಳಲ್ಲಿ ಸೇವಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಮಾರತ್‌ ಹಳ್ಳಿಯ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕ್ಷೇತ್ರದ ಗ್ರಾಮಾಂತರ ಮಂಡಲ ಅಧ್ಯಕ್ಷ ಎಸ್.ಪಿಳಪ್ಪ ಮತ್ತು ನಗರ ಮಂಡಲ ಅಧ್ಯಕ್ಷ ಎನ್.ಆರ್.ಶ್ರೀಧರ್ ರೆಡ್ಡಿ ಅವರು ತಿಳಿಸಿದರು.

ಮಹದೇವಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮಾಂತರ ಮಂಡಲದ 56 ಶಕ್ತಿ ಕೇಂದ್ರಗಳು, ವಾರ್ಡ್‌ಗಳ ಮಹಿಳಾ ಮೋರ್ಚಾ, ಯುವಮೋರ್ಚಾ, ಎಸ್.ಸಿ ಮೋರ್ಚಾ, ಒಬಿಸಿ ಮೋರ್ಚಾ ಸೇರಿ 8 ಇತರರಿಂದ ಒಟ್ಟು 104 ಸ್ಥಳ ಜೋಡಣೆ ಮಾಡಲಾಗಿದೆ ಮತ್ತು ನಗರ ಮಂಡಲದ 69 ಶಕ್ತಿ ಕೇಂದ್ರಗಳು, 9 ವಾರ್ಡ್‌ಗಳ ಮಹಿಳಾ ಮೋರ್ಚಾ, ಯುವ ಮೋರ್ಚಾ, ಎಸ್.ಸಿ.ಮೋರ್ಚಾ, ಒಬಿಸಿ ಮೋರ್ಚಾ ಸೇರಿ ಪಕ್ಷದ ವತಿಯಿಂದ 111 ಸ್ಥಳಗಳಲ್ಲಿ ಸೇವಾಕಾರ್ಯ ಹಮ್ಮಿಕೊಳ್ಳಲಾಗಿದೆ ಎಂದು ಗ್ರಾಮಾಂತರ ಮಂಡಲ ಅಧ್ಯಕ್ಷ ಎಸ್.ಪಿಳಪ್ಪ ತಿಳಿಸಿದರು

ನಂತರ ಮಾತನಾಡಿದ ನಗರ ಮಂಡಲ ಅಧ್ಯಕ್ಷ ಎನ್.ಆರ್.ಶ್ರೀಧರ್ ರೆಡ್ಡಿ ಕ್ಷೇತ್ರದ ಎರಡೂ ಮಂಡಲದ 200 ಕ್ಕೂ ಹೆಚ್ಚು ಸ್ಥಳಗಳಲ್ಲಿ ಗ್ರಾಮಗಳಲ್ಲಿ ಸ್ವಚ್ಚತಾ ಅಭಿಯಾನ, ದೇವಾಲಯಗಳ ಸ್ವಚ್ಚತೆ, ಪೌರಕಾರ್ಮಿಕರಿಗೆ ಸಮವಸ್ತ್ರಹಾಗೂ ದಿನಸಿ ಕಿಟ್, ಅನಾಥ ಆಶ್ರಮಗಳಿಗೆ ಸಮವಸ್ತ್ರ ಹಾಗೂ ಹಣ್ಣು ಹಂಪಲು ವಿತರಣೆ, ಗೋ ಶಾಲೆಗಳಲ್ಲಿ ಸ್ವಚ್ಛತೆ, ಆಹಾರ ವಿತರಣೆ ಸೇರಿದಂತೆ ವಿವಿಧ ಸೇವಾ ಕಾರ್ಯಕ್ರಮಗಳನ್ನ ಏರ್ಪಾಡು ಮಾಡಲಾಗಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಹದೇವಪುರ ಬಿಜೆಪಿ ನಗರ ಮಂಡಲ ಅಧ್ಯಕ್ಷ ಎನ್.ಆರ್.ಶ್ರೀಧರ್ ರೆಡ್ಡಿ, ಗ್ರಾಮಾಂತರ ಮಂಡಲ ಅಧ್ಯಕ್ಷ ಎಚ್. ಎಸ್.ಪಿಳ್ಳಪ್ಪ, ಕಾರ್ಯದರ್ಶಿಗಳಾದ ಕೆವಿ ನಾಗರಾಜ್, ಬೈರತಿ ಕುಮಾರ್, ಮಂಜುನಾಥ್‌ ಇದ್ದರು.                                                                                                                                                                                                                              ಪ್ರಜಾ ಭಾರತ್ ನ್ಯೂಸ್ ವೆಬ್ ಪೋರ್ಟಲ್ ವಾಟ್ಸಪ್ ಗ್ರೂಪ್ ಸೇರಲು 👇👇Follow this link to join my WhatsApp group https://chat.whatsapp.com/Fj6L4Eak7N994zl2QHSpHK