ಮದ್ಯ ಪ್ರಿಯರಿಗೆ ಶಾಕ್​, ಇಂದಿನಿಂದ ಬೆಲೆ ಏರಿಕೆ

ರಾಜ್ಯ

ರಾಘವೇಂದ್ರ ಹೆಚ್.ಎ

5/15/20251 min read

ಇಂದಿನಿಂದ ರಾಜ್ಯದಲ್ಲಿ ಮಧ್ಯದ ಬೆಲೆ ಏರಿಕೆ ಪರಿಷ್ಕೃತ ಬೆಲೆ ಜಾರಿಯಾಗಲಿದೆ. ಭಾರತೀಯ ಮದ್ಯಗಳ (ಐಎಂಎಲ್) ಮತ್ತು ಬಿಯರ್ ಮೇಲಿನ ಹೆಚ್ಚುವರಿ ಅಬಕಾರಿ ಸುಂಕವನ್ನು (ಎಇಡಿ) ಹೆಚ್ಚಿಸಿ ರಾಜ್ಯ ಸರ್ಕಾರ ಮಂಗಳವಾರ ಅಂತಿಮ ಅಧಿಸೂಚನೆ ಹೊರಡಿಸಿದೆ. ಪರಿಷ್ಕೃತ ದರವು ಗುರುವಾರದಿಂದ (ಮೇ 15) ಜಾರಿಗೆ ಬರಲಿದೆ.

ಮದ್ಯದ ಮೇಲಿನ ಸುಂಕ ಪರಿಷ್ಕರಣೆ ಮತ್ತೆ ತೆರಿಗೆ ಸ್ಟ್ರಾಬ್‌ಗಳ ಬದಲಾವಣೆಗಾಗಿ ಹಣಕಾಸು ಇಲಾಖೆಯು, ಕರ್ನಾಟಕ ಅಬಕಾರಿ (ಅಬಕಾರಿ ಸುಂಕ ಮತ್ತು ಶುಲ್ಕ) (ಎರಡನೇ ತಿದ್ದುಪಡಿ) ನಿಯಮಗಳು-2025ರ ಗಜೆಟ್ ಅಧಿಸೂಚನೆ ಹೊರಡಿಸಿದೆ. ಐಎಂಎಲ್‌ನ ತೆರಿಗೆ ಫ್ಲ್ಯಾಬ್‌ಗಳನ್ನು ಪೂರ್ಣ ಪ್ರಮಾಣದಲ್ಲಿ ಬದಲಾವಣೆ ಮಾಡಲಾಗಿದೆ.

'ಎಇಡಿ ಹೆಚ್ಚಳದಿಂದ ಅಗ್ಗದ ದರದಲ್ಲಿ ಸಿಗುತ್ತಿದ್ದ ಬ್ರಾಂಡಿ, ವಿಸ್ಕಿ, ಜಿನ್, ರಮ್‌ನ ಬೆಲೆ ರಾಜ್ಯದಲ್ಲಿ ಇನ್ನು ಮುಂದೆ ಮತ್ತಷ್ಟು ದುಬಾರಿಯಾಗಲಿದೆ. 180 ಎಂಎಲ್‌ನ ಬಾಟಲಿ ಮತ್ತು ಸ್ಯಾಷೆಗಳ ಬೆಲೆಯಲ್ಲಿ ಗರಿಷ್ಠ 15 ಏರಿಕೆ ಆಗಲಿದೆ' ಎಂದು ಅಬಕಾರಿ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.

ಈಗ ಜಾರಿಯಲ್ಲಿರುವ ನಿಯಮಗಳ ಪ್ರಕಾರ ಐಎಂಎಲ್‌ಗಳಲ್ಲಿ ಒಟ್ಟು 18 ತೆರಿಗೆ ಫ್ಲ್ಯಾಬ್‌ಗಳಿವೆ. ಈ ಫ್ಲ್ಯಾಬ್‌ಗಳನ್ನು 16ಕ್ಕೆ ಇಳಿಸಲಾಗಿದೆ. ಮೊದಲ ನಾಲ್ಕು ಫ್ಲ್ಯಾಬ್‌ಗಳನ್ನು ಗರಿಷ್ಠ ಬೆಲೆಯನ್ನು ಪರಿಷ್ಕರಿಸಲಾಗಿದೆ.

ಎಇಡಿ ಏರಿಕೆಯೊಂದಿಗೆ ಪ್ರೀಮಿಯಂ ಅಥವಾ ಇತರೆ ಬಿಯರ್ ಬ್ರಾಂಡ್‌ಗಳ ಬೆಲೆಯು ಉತ್ಪಾದನಾ ವೆಚ್ಚವನ್ನು ಅವಲಂಬಿಸಿ ಪ್ರತಿ ಬಾಟಲಿಗೆ ಸರಾಸರಿ 5ರಿಂದ 15 ಏರಿಕೆ ಆಗಲಿದೆ. ಅಗ್ಗದ ಬಿಯರ್‌ಗಳ ಬೆಲೆ ಗಣನೀಯ ಪ್ರಮಾಣದಲ್ಲಿ ಕಡಿಮೆ ಆಗಲಿದ್ದು, 25 ರವರೆಗೆ ಕಡಿಮೆ ಆಗಲಿದೆ ಎಂದು ಅಬಕಾರಿ ಇಲಾಖೆ ಮೂಲಗಳು ತಿಳಿಸಿವೆ.