ಪ್ರೀತಿಸಿ ಮದುವೆಯಾದ ಹೆಂಡತಿಯನ್ನ ಚಾಕುವಿನಿಂದ ಇರಿದು ಕೊಲೆ ಮಾಡಿದ ಪತಿ.
ರಾಜ್ಯ


ಚಿಕ್ಕಮಗಳೂರು: ಪ್ರೀತಿಸಿ ಮದುವೆಯಾದ ಪತ್ನಿಯನ್ನೇ ಪತಿ ಮನಸೋ ಇಚ್ಛೆ ಇರಿದು ಹ*ತ್ಯೆಗೈದಿರುವ ಆಘಾತಕಾರಿ ಘಟನೆ ಚಿಕ್ಕಮಗಳೂರು ತಾಲೂಕಿನ ಕೈಮರಾ ಚೆಕ್ ಪೋಸ್ಟ್ ನಲ್ಲಿ ನಡೆದಿದೆ.
ಕೀರ್ತಿ (26) ಹ*ತ್ಯೆಯಾದ ದುರ್ದೈವಿ. ಪತಿ ಅವಿನಾಶ್ (32) ಪತ್ನಿಯನ್ನ ಕೊಂದ ಆರೋಪಿ. 4 ವರ್ಷದ ಹಿಂದೆ ಅವಿನಾಶ್ ಮತ್ತು ಕೀರ್ತೀ ಪ್ರೀತಿಸಿ ಮದುವೆಯಾಗಿದ್ದರು ಆದರೆ ಇತ್ತೀಚಿಗೆ ಇಬ್ಬರ ನಡುವೆ ಆಗಾಗ
ಜಗಳ ನಡೆಯುತಿತ್ತು ಅದರಂತೆ ಪತಿ ಪತ್ನಿ ನಡುವೆ ಗಲಾಟೆ ಆಗಿದ್ದ ಇದರಿಂದ ಕೋಪಗೊಂಡ ಪತಿ ಚಾಕುವಿನಿಂದ ಮನಸ್ಸೋ ಇಚ್ಛೆ 10 ಬಾರಿ ಚುಚ್ಚಿ ಸ್ಥಳದಿಂದ ಪರಾರಿಯಾಗಿದ್ದಾನೆ. ಗಂಭೀರ ಗಾಯಗೊಂಡ ಪತ್ನಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಘಟನೆ ಸಂಬಂಧ ಚಿಕ್ಕಮಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ನಾಪತ್ತೆಯಾಗಿರುವ ಆರೋಪಿಯ ಪತ್ತೆಗೆ ಬಲೆ ಬೀಸಿದ್ದಾರೆ.