ಸೊರಬ: ಮದುವೆಗೆ ಮುನ್ನವೇ ಗರ್ಭಿಣಿಯಾದ ಮಗಳ ಕೊ*ಲೆಗೆ ಯತ್ನಿಸಿದ ಅಪ್ಪ.ಆರೋಪಿ ಪೊಲೀಸ್ ವಶಕ್ಕೆ

ಜಿಲ್ಲಾ ಸುದ್ದಿಕ್ರೈಮ್

ಧರ್ಮ ಬಸವನಪುರ.

6/29/20251 min read

ಸೊರಬ (ಶಿವಮೊಗ್ಗ): ಮದುವೆಗೆ ಮುನ್ನವೇ ಗರ್ಭಿಣಿಯಾಗಿದ್ದ 21 ವರ್ಷದ ಪುತ್ರಿಯನ್ನು ಮರ್ಯಾದೆಗೆ ಅಂಜಿ ತಂದೆಯೇ ಕೊಲೆ ಮಾಡಲು ಯತ್ನಿಸಿದ ಘಟನೆ ಶಿವಮೊಗ್ಗ ಜಿಲ್ಲೆಯ ಸೊರಬದಲ್ಲಿ ನಡೆದಿದೆ.

ಪುತ್ರಿ ಗರ್ಭವತಿಯಾಗಿರುವಂತ ವಿಚಾರ ತಿಳಿದಂತ ತಂದೆ ಧರ್ಮಪ್ಪ ನಾಯಕ್ ಸಿಟ್ಟುಗೊಂಡಿದ್ದರು. ಹೀಗಾಗಿ ಮರ್ಯಾದೆಗೆ ಅಂಜಿ ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತೇನೆ ಬಾ ಎಂಬುದಾಗಿ ತಂದೆ-ತಾಯಿ ಜೊತೆಗೂಡಿ ಸೊರಬದ ಉಳವಿ ಸಮೀಪದ ಕಾನಹಳ್ಳಿ ಬಳಿಯ ಕಣ್ಣೂರಿಗೆ ಕರೆದುಕೊಂಡು ಬಂದಿದ್ದಾರೆ.

ಕಣ್ಣೂರಿನ ಕಾಡಿನಲ್ಲಿ ಧರ್ಮಪ್ಪ ನಾಯಕ್ ತನ್ನ ಪುತ್ರಿಯ ಕುತ್ತಿಗೆಗೆ ಹಗ್ಗದಿಂದ ಬಿಗಿದು ನನ್ನ ಮರ್ಯಾದೆ ಹಾಳು ಮಾಡಿದೆ ಎಂಬುದಾಗಿ ಉಸಿರುಗಟ್ಟಿಸಿ ಸಾಯಿಸೋದಕ್ಕೆ ಯತ್ನಿಸುತ್ತಾರೆ. ಮಗಳನ್ನು ಸಾಯಿಸಬೇಡಿ ಅಂತ ಆಕೆಯ ಹೆಂಡತಿ ಕಾಲಿಗೆ ಬಿದ್ದು ಕೇಳಿಕೊಂಡರು ಧರ್ಮಪ್ಪ ನಾಯಕ್ ಬಿಟ್ಟಿಲ್ಲ.

ಈ ಘಟನೆಯು ಸೊರಬ ತಾಲೂಕಿನ ಉಳವಿ ಗ್ರಾಮದಲ್ಲಿದೆ. ತಮ್ಮ ಮಗಳು ಗರ್ಭಿಣಿಯಾಗಿರುವ ವಿಷಯ ತಿಳಿದ ಧರ್ಮಾನಾಯ್ಕ ಎಂಬಾತನ ಮಗಳು ಮದುವೆಯಾಗದಿದ್ದರೂ ಮಗಳು ಗರ್ಭಿಣಿ ಆಗಿದ್ದಳು. ಮಗಳು ತುಂಬು ಗರ್ಭಿಣಿ ಆಗಿದ್ದರಿಂದ ಊರಿನವರಿಗೆ ಈ ವಿಚಾರ ತಿಳಿದು ಊರಿನಲ್ಲಿ ಮರ್ಯಾದೆ ಹಾಳಾಗಿತ್ತು. ಇನ್ನು ಊರಿನಲ್ಲಿ ತಲೆ ಎತ್ತಿಕೊಂಡು ಓಡಾಡಲಾಗದೇ ಜನರಿಂದ ತುಂಬಾ ಚುಚ್ಚು ಮಾತುಗಳನ್ನು ಕೇಳಿದ್ದಾನೆ. ಇದರಿಂದ ಮನನೊಂದಿದ್ದ ಧರ್ಮಾನಾಯ್ಕ ಇಂತಹ ಮಗಳು ಇದ್ದರೆಷ್ಟು, ಹೋದರೆಷ್ಟು ಎಷ್ಟು ಕೊಲೆ ಮಾಡಲು ತೀರ್ಮಾನಿಸಿದ್ದಾನೆ. ತನ್ನ ಯೋಜನೆಯಂತೆ ಪತ್ನಿ ಹಾಗೂ ಮಗಳನ್ನು ಆಸ್ಪತ್ರೆಗೆ ಕರೆದೊಯ್ಯುವ ನೆಪದಲ್ಲಿ ಕರೆದುಕೊಂಡು ಹೋಗಿದ್ದಾನೆ. ಆದರೆ, ಆಸ್ಪತ್ರೆ ಕಡೆಗೆ ಹೋಗುವ ಬದಲು, ಉಳವಿ ಸಮೀಪದ ಕಾನಹಳ್ಳಿ ಬಳಿಯ ಕಣ್ಣೂರು ಅರಣ್ಯ ಪ್ರದೇಶಕ್ಕೆ ಕರೆದೊಯ್ದಿದ್ದಾನೆ.

ಮರ್ಯಾದೆ ಹಾಳು ಮಾಡಿದಂತ ಪುತ್ರಿಯನ್ನು ಹಗ್ಗದಿಂದ ಬಿಗಿದು ಉಸಿರುಗಟ್ಟಿಸಿ ಸಾಯಿಸೋದಕ್ಕೆ ಯತ್ನಿಸಿದಂತ ಸಂದರ್ಭದಲ್ಲಿ ಯುವತಿ ಪ್ರಜ್ಞೆ ತಪ್ಪಿದ್ದಾಳೆ. ಆಕೆ ಸಾವನ್ನಪ್ಪಿದ್ದಾಳೆ ಎಂಬುದಾಗಿ ಭಾವಿಸಿದಂತ ತಂದೆ ಧರ್ಮಪ್ಪ ನಾಯಕ್ ಹಾಗೂ ಅವರ ಪತ್ನಿ ಸ್ಥಳದಿಂದ ತೆರಳುತ್ತಾರೆ. ಆದರೇ ಪ್ರಜ್ಞೆ ಬಂದಂತ ಯುವತಿ ದಾರಿಯಲ್ಲಿ ಸಹಾಯಕ್ಕಾಗಿ ಅಂಗಲಾಚುತ್ತಿದ್ದಾಗ ದಾರಿ ಹೋಕರೊಬ್ಬರು ಉಳವಿಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ಚಿಕಿತ್ಸೆಗಾಗಿ ದಾಖಲಿಸಿದ್ದಾರೆ. ಪ್ರಾಥಮಿಕ ಚಿಕಿತ್ಸೆಯ ಬಳಿಕ ಸೊರಬ ಸಾರ್ವಜನಿಕ ಆಸ್ಪತ್ರೆಗೆ ಕರೆದೊಯ್ಯಲಾಗದೆ. ಆ ನಂತ್ರ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಯುವತಿಯನ್ನು ದಾಖಲಿಸಲಾಗಿದೆ.

ಈ ಸಂಬಂಧ ಯುವತಿ ನೀಡಿದಂತ ಹೇಳಿಕೆಯನ್ನು ಆಧರಿಸಿ, ಧರ್ಮಪ್ಪ ನಾಯಕ್ ವಿರುದ್ಧ ಸೊರಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿದೆ. ಮರ್ಯಾದ ಹತ್ಯೆಗೆ ಯತ್ನಿಸಿದಂತ ಧರ್ಮಪ್ಪ ನಾಯಕ್ ಬಂಧಿಸಿರುವಂತ ಸೊರಬ ಠಾಣೆಯ ಪೊಲೀಸರು ಸ್ಥಳ ಮಹಜರು ನಡೆಸಿ, ತನಿಖೆಯನ್ನು ಮುಂದುವರೆಸಿದ್ದಾರೆ.