ಶಾಸಕ ಭೈರತಿ ಬಸವರಾಜ್ ಹುಟ್ಟುಹಬ್ಬ‌ ಅಂಗವಾಗಿ ವಿಷೇಶ ಪೂಜೆ ಹಾಗೂ ಅನ್ನದಾನ.

ಸ್ಥಳೀಯ ಸುದ್ದಿ

ಧರ್ಮ ಬಸವನಪುರ.

2/4/20261 min read

ಕೆ.ಆರ್ ಪುರ: ಶಾಸಕ ಬೈರತಿ ಬಸವರಾಜ ಅವರ ಹುಟ್ಟುಹಬ್ಬದ ಅಂಗವಾಗಿ ದೂರವಾಣಿ ನಗರ ವಾರ್ಡನ ಜಿಬಿಎ ಆಕಾಂಕ್ಷಿ ಪ್ರದೀಪ್ ಗೌಡ ಅವರ ನೇತೃತ್ವದಲ್ಲಿ ರಾಮಮೂರ್ತಿ ಆಂಜನೇಯ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ,ಅನ್ನದಾನ ಮಾಡಲಾಯಿತು.

ದೂರವಾಣಿ ನಗರ ವಾರ್ಡನ ಜಿಬಿಎ ಆಕಾಂಕ್ಷಿ ಪ್ರದೀಪ್ ಗೌಡ ಅವರು ಪ್ರತಿನಿತ್ಯ ಕ್ಷೇತ್ರದ ಜನತೆಯ ಅಭಿವೃದ್ಧಿಗೆ ದುಡಿಯುವ ನಮ್ಮ ಶಾಸಕ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಅವರ ಹೆಸರಿನಲ್ಲಿ ಅನ್ನದಾನ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ತಿಳಿಸಿದರು.

ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಶಾಸಕರ ಹುಟ್ಟುಹಬ್ಬದ ಪ್ರಯುಕ್ತ ವಿಶೇಷ ಪೂಜೆ ಸಲ್ಲಿಸಿ, ಅವರ ಹೆಸರಿನಲ್ಲಿ ಅರ್ಚನೆ ಮಾಡಿ ಅವರಿಗೆ ಆಯಸ್ಸು ಆರೋಗ್ಯ ನೀಡಿ ಮತ್ತಷ್ಟು ರಾಜಕೀಯದಲ್ಲಿ ಉನ್ನತಿ ಸಾಧಿಸಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡಲಾಗಿದೆ ಎಂದು ಹೇಳಿದರು.

ಪ್ರತಿ ವರ್ಷ ಲಕ್ಷಾಂತರ ಜನರಿಗೆ ಊಟ ಹಾಕುವ ಏಕೈಕ ಶಾಸಕ ಇವರಾಗಿದ್ದು,ಇವರಿಗೆ ಮತ್ತಷ್ಟು ಬಲ ತುಂಬುವ ಕಾರ್ಯವನ್ನು ಕಾರ್ಯಕರ್ತರಾದ ನಾವು ಮಾಡುತ್ತೆವೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಆಟೋ ಅಪ್ಪಾಜಿ, ಮುನಿರಾಜು, ಯುವರಾಜು,ಹೊಯ್ಸಳ ನಗರ ದೀಪು, ರಮೇಶ್, ನಾಗರಾಜ್, ಆರ್ .ಎಕ್ಸ್ ರೆಡ್ಡಿ, ಗಿರೀಶ್ ಇದ್ದರು.