ಬಸವನಪುರ ಅಭಯ ಶ್ರೀ ಆಂಜನೇಯಸ್ವಾಮಿಗೆ ವಿಷೇಶ ಪೂಜೆ.15 ಸಾವಿರ ಬಾದುಷ ವಿತರಣೆ.

ಸ್ಥಳೀಯ ಸುದ್ದಿ

ಧರ್ಮ ಬಸವನಪುರ.

12/2/20251 min read

ಕೆ.ಆರ್.ಪುರ:   ಕ್ಷೇತ್ರದಾದ್ಯಂತ ಹನುಮ ಜಯಂತಿ ಪ್ರಯುಕ್ತ ಇಂದು ಬೆಳಗ್ಗೆಯಿಂದಲೇ ಶ್ರೀರಾಮ ಭಕ್ತ ಶ್ರೀ ಹನುಮನಿಗೆ ವಿವಿಧ ದೇಗುಲಗಳಲ್ಲಿ ವಿಶೇಷ ಪೂಜೆ ಭಕ್ತರಿಂದ ಹನುಮಂತನ ನಾಮಜಪ ಮಾಡುತ್ತಾ ಭಕ್ತಿಯಲ್ಲಿ ಮಿಂದೆದ್ದರು.

ಶ್ರೀರಾಮನ ಭಕ್ತ ಹನುಮನ ಜಯಂತಿ ವಿಜೃಂಭಣೆಯಿಂದ ಅಂಗವಾಗಿ ಕೆ.ಆರ್.ಪುರ ಕ್ಷೇತ್ರದ ಬಸವನಪುರ ಗ್ರಾಮದ ಅಭಯ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಹನುಮ ಜಯಂತಿ ವಿಜೃಂಭಣೆಯಿಂದ ಆಚರಣೆಮಾಡಲಾಗಿದ್ದು, ಅನ್ನದಾನ‌ದ ಜೊತೆಗೆ 15 ಸಾವಿರ ಬಾದುಷಾ ವಿತರಣೆ ಮಾಡಲಾಯಿತು.

ಶಾಸಕ ಬೈರತಿ ಬಸವರಾಜ್ ಮತ್ತು ಬಸವನಪುರ ವಾರ್ಡ್ ನ ಮಾಜಿ ಪಾಲಿಕೆ ಸದಸ್ಯ ಜಯಪ್ರಕಾಶ್ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.ಅನ್ನದಾನ ಪ್ರಸಾದ ವಿನಿಯೋಗ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ವಿಶೇಷ ಅಲಂಕಾರ ಮಾಡಿದ್ದ ಅಭಯ ಶ್ರೀ ಆಂಜನೇಯಸ್ವಾಮಿ ದರ್ಶನ ಪಡೆಯಲು ಬಸವನಪುರ ಸುತ್ತಮುತ್ತಲಿನ ಬಡಾವಣೆಗಳಸಹಸ್ರಾರು ಮಂದಿ ಭಕ್ತರು ದರ್ಶನ ಪಡೆದು ಪುನೀತರಾದರು.

ಆಂಜನೇಯ ಸ್ವಾಮಿಗೆ ಬಂಗಾರ ಲೇಪಿತ ವಜ್ರಾಂಗಿ ಕವಚ ಅಲಂಕಾರ,ದಿಂಡು ಹೂವಿನ ಅಲಂಕಾರದಿಂದ ಆಂಜನೇಯ ಸ್ವಾಮಿಯು ಕಂಗೊಳಿಸುತ್ತಿತ್ತು, ಮುಂಜಾನೆಯೇ ಅಭಿಷೇಕ, ಹೋಮ ಹವನ, ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ಶ್ರದ್ಧಾ ಭಕ್ತಿಯಿಂದ ನೆರವೇರಿದವು.

ಬಸವನಪುರ ಸುತ್ತಮುತ್ತಲಿನ ಗ್ರಾಮಗಳಾದ ಗಾಯಿತ್ರಿ ಬಡವಣೆ,ಅಜೀತ್ ಲೇಔಟ್, ವಿಜಯಬ್ಯಾಂಕ್ ಕಾಲೋನಿ, ಸ್ವತಂತ್ರನಗರ,ಅಯ್ಯಪ್ಪ ನಗರ,ಪ್ರಿಯದರ್ಶಿನಿ ಬಡಾವಣೆ ಸಾವಿರಾರು ಭಕ್ತಾದಿಗಳು ದೇವರ ದರ್ಶನ ಪಡೆದರು.

ದೇವಲಾಯಕ್ಕೆ ಬಂದ ಭಕ್ತಾದಿಗಳಿಗೆ ಬೆಳಗ್ಗೆ 9 ಗಂಟೆಗೆ ಆರಂಭವಾದ ಅನ್ನಸಂತರ್ಪಣೆ ರಾತ್ರಿ 10 ರವರೆಗೆ ಮಾಡಲಾಯಿತು. ಅನ್ನದನಕ್ಕೆ ನೂರಾರು ದಾನಿಗಳು ಸಹಾಯ ಮಾಡಿದ್ದು ವಿಷೇಶವಾಗಿತ್ತು.

ದ್ವಿತ್ವ ಚಂಡಮಾರುತದ ಹಿನ್ನೆಲೆಯಲ್ಲಿ ರಾಜ್ಯದ್ಯಂತ ಮೈ ಕೊರೆಯುವ ಚಳಿ ಇದ್ದರೂ ಸಹ ಇಂದು ಮುಂಜಾನೆಯೇ ಭಕ್ತರು ಆಂಜನೇಯ ದೇವಾಲಯಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಶಾಸಕ ಬೈರತಿ ಬಸವರಾಜ್, ಮಾಜಿ ಪಾಲಿಕೆ ಸದಸ್ಯ ಜಯಪ್ರಕಾಶ್, ಉದಯ್ ಕುಮಾರ್‌, ದೇವಸ್ಥಾನದ ಧರ್ಮದರ್ಶಿ ವೆಂಕಟೇಶ್ ಗೋವಿಂದ,ಗಂಗಧರ್,ಕೆ.ವೆಂಕಟೇಶ್,ವಿ ಮಂಜುನಾಥ್, ವಿ.ಸುಭ್ರಮಣಿ,ಗಂಗು, ಪ್ರತಾಪ್,ವಿಜಿ,ಮೋಹನ್, ರಾಜೇಶ್ ವಿ, ಸತ್ಯವೇಲು ಮತ್ತಿತರರು ಇದ್ದರು.