ಕೆಆರ್ ಪುರ : ಎಸ್ ಕೆ ಫೌಂಡೇಶನ್ ವತಿಯಿಂದ ಕ್ರೀಡಾಕೂಟ: ಶಾಸಕ ಭೈರತಿ ಬಸವರಾಜ್ ಚಾಲನೆ.

ಸ್ಥಳೀಯ ಸುದ್ದಿ

ಧರ್ಮ ಬಸವನಪುರ

6/15/20251 min read

ಕೆಆರ್ ಪುರ : ಯುವಜನತೆಯಲ್ಲಿ ಕ್ರೀಡಾ ಆಸಕ್ತಿ ಹೆಚ್ಚಿಸುವ ಸಲುವಾಗಿ ಪ್ರತಿ ವರ್ಷದಂತೆ ಈ ವರ್ಷವೂ ಎಸ್ ಕೆ ಫೌಂಡೇಶನ್ ವತಿಯಿಂದ ಬೃಹತ್ ಕ್ರೀಡಾ ಉತ್ಸವ ಆಯೋಜನೆ ಮಾಡಲಾಗಿದೆ ಎಂದು ಸಂಸ್ಥಾಪಕಿ ಶಾಂತಾಕೃಷ್ಣಮೂರ್ತಿಯವರು ತಿಳಿಸಿದರು.

ಕ್ಷೇತ್ರದ ರಾಂಪುರ ಸಮೀಪದ ಕಾಡು ಅಗ್ರಹಾರ ಮುಖ್ಯರಸ್ತೆಯ ಎಸ್ ಎಲ್ ಎಸ್ ಕ್ರೀಡಾಂಗಣದಲ್ಲಿ ಆಯೋಜನೆ ಮಾಡಿದ್ದ ಕ್ರೀಡಾ ಉತ್ಸವವನ್ನು ಸ್ಥಳೀಯ ಶಾಸಕ ಭೈರತಿ ಬಸವರಾಜ್ ಅವರ ಅಧ್ಯಕ್ಷತೆಯಲ್ಲಿ ಉದ್ಘಾಟಿಸಿ ಬಳಿಕ ಕಾರ್ಯಕ್ರಮಯನ್ನು ಉದ್ದೇಶಿಸಿ ಮಾತನಾಡಿದ ಅವರು

ಈಗಿನ ಯುವಜನತೆ ಆಟ ಪಾಠಕ್ಕಿಂತ ಹೆಚ್ಚಾಗಿ ಟಿವಿ , ಮೊಬೈಲ್ ಗಳಿಗೆ ಯುವ ಜನತೆ ಆಕರ್ಷಿತರಾಗಿದ್ದಾರೆ .ಕ್ರೀಡೆ ದೇಹಕ್ಕೆ ವ್ಯಾಯಾಮದ ಜೊತೆಗೆ ಮನಸ್ಸಿಗೂ ಉತ್ಸಾಹ ನೀಡುತ್ತದೆ ಹಾಗಾಗಿ ಕ್ರೀಡಾ ಉತ್ಸವಗಳು ನಮ್ಮ ಫೌಂಡೇಶನ್ ವತಿಯಿಂದ ಪ್ರತಿ ವರ್ಷವೂ ಆಯೋಜನೆ ಮಾಡಿ ಸುತ್ತಮುತ್ತಲಿನ ನೂರಾರು ಬಡಾವಣೆಗಳ ನಾಗರಿಕರನ್ನು ಆಹ್ವಾನಿಸಿ ಹತ್ತು ಹಲವು ಕ್ರೀಡೆಗಳನ್ನು ಏರ್ಪಡಿಸಿರುತ್ತೇವೆ ಎಂದು ವಿವರಿಸಿದರು .

ಏಕಾಗ್ರತೆಯಿಂದ ಓದಿದಾಗ ಹೇಗೆ ಜ್ಞಾನ ಹೆಚ್ಚಾಗುತ್ತದೋ ಹಾಗೆ ದೇಹವನ್ನು ದಂಡಿಸಿ ಕ್ರೀಡೆಯಲ್ಲಿ ಪಾಲ್ಗೊಂಡರೆ ಆರೋಗ್ಯಕರವಾಗಿರಲು ಸಾಧ್ಯ , ಆ ಹಾದಿಯಲ್ಲಿ ನಮ್ಮ ಫೌಂಡೇಶನ್ ಮುನ್ನುಗ್ಗಿ ಈ ಕ್ರೀಡಾ ಉತ್ಸವವನ್ನು ಆಯೋಜನೆ ಮಾಡಿದ್ದೆ ಇದಕ್ಕೆ ಸಹಕರಿಸಿದ ಸ್ಥಳೀಯ ಶಾಸಕ ಭೈರತಿ ಬಸವರಾಜ್ ಅವರಿಗೂ ಅನಂತ ನಮಸ್ಕಾರಗಳು ಎಂದು ತಿಳಿಸಿದರು .

ಶಕ್ತಿಯುತ ವಾತಾವರಣ ಮತ್ತು ಏಕತೆಯ ಮನೋಭಾವದೊಂದಿಗೆ, ಎಸ್ ಕೆ ಫೌಂಡೇಶನ್ ಕ್ರೀಡಾಕೂಟ 2025 ತನ್ನ ಯುವ ಕ್ರೀಡಾಪಟುಗಳ ಅಥ್ಲೆಟಿಕ್ ಸಾಮರ್ಥ್ಯ ಮತ್ತು ದೃಢಸಂಕಲ್ಪವನ್ನು ಆಚರಿಸಲು ಸಜ್ಜಾಗಿದೆ. ಈ ಕ್ರೀಡಾಕೂಟವು ಕ್ರೀಡಾಪಟುಗಳಿಗೆ ಕ್ರೀಡಾ ಸ್ಫೂರ್ತಿಯನ್ನು ಉತ್ತೇಜಿಸುವ ಜೊತೆಗೆ, ಪ್ರತಿಭೆಯನ್ನು ಪ್ರದರ್ಶಿಸಲು ಒಂದು ಅದ್ಭುತ ವೇದಿಕೆಯಾಗಿದೆ ಎಂದು ತಿಳಿಸಿದರು.

ಈ ಕ್ರೀಡಾಕೂಟದಲ್ಲಿ ಮೊದಲಿಗೆ ಪುರುಷರಿಗೆ ವಾಲಿಬಾಲ್, ಮಹಿಳೆಯರಿಗೆ ಥ್ರೋಬಾಲ್ ಯುವಕರಿಗೆ ಕ್ರಿಕೆಟ್,ಮತ್ತು ಫುಟ್ಬಾಲ್, ರನ್ನಿಂಗ್ ರೇಸ್, ಬ್ಯಾಡ್ಮಿಂಟನ್,ಶೆಟಲ್ ಕಾಕ್ ಕ್ರೀಡೆಗಳನ್ನ ಆಯೋಜನೆ ಮಾಡಲಾಗಿತ್ತು ಎರಡು ದಿನಗಳ ಕಾಲ ನಡೆಯುವ ಈ ಕ್ರೀಡಾಕೂಟದಲ್ಲಿ ಕ್ಷೇತ್ರದ ರಾಮಮೂರ್ತಿನಗರ ವಾರ್ಡ್ ನ ಆಧ್ಯತೆ ನೀಡಲಾಯಿತು. ನೂರಾರು ಕ್ರೀಡಾಪಟುಗಳು ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಎಸ್ ಕೆ ಎಫ್ ಫೌಂಡೇಶನ್ ಅಧ್ಯಕ್ಷ ಕೃಷ್ಣಮೂರ್ತಿ, ಮುಖಂಡರಾದ ಗೋವಿಂದಪ್ಪ ಸೇರಿದಂತೆ ಇತರರು ಇದ್ದರು .