ಚೀಮಸಂದ್ರದಲ್ಲಿ ಸಂಭ್ರಮದ ಶ್ರೀ ಬಸವೇಶ್ವರಸ್ವಾಮಿ ರಥೋತ್ಸವ
ಸ್ಥಳೀಯ ಸುದ್ದಿ


ಮಹದೇವಪುರ: ಕಾರ್ತಿಕ ಮಾಸದ ಕಡೆ ಸೋಮವಾರದ ಪ್ರಯುಕ್ತ ಚೀಮಸಂದ್ರ ಗ್ರಾಮದ ಇತಿಹಾಸ ಪ್ರಸಿದ್ಧ ಶ್ರೀಬಸವೇಶ್ವರಸ್ವಾಮಿಯ ರಥೋತ್ಸವವು ಅದ್ದೂರಿಯಾಗಿ ನಡೆಯಿತು.
ಕಾರ್ತಿಕ ಮಾಸದ ಅಂಗವಾಗಿ ಸ್ವಾಮಿಯವರಿಗೆ ಮುಂಜಾನೆ 4 ಗಂಟೆಯಿಂದಲೇ ರುದ್ರಾಭಿಷೇಕ ಪಂಚಾಮೃತ ಅಭಿಷೇಕ ಉಪಚಾರ ಪೂಜೆ ಸಹಸ್ರ ಬಿಲ್ವಾರ್ಚನೆ, ಇನ್ನೂ ಅನೇಕ ಧಾರ್ಮಿಕ ವಿಧಿ ವಿಧಾನಗಳನ್ನು ನಡೆಸಲಾಯಿತು. ವಿವಿಧ ಹೂ ಮತ್ತು ವಸ್ತ್ರಗಳಿಂದ ಅಲಂಕರಿಸಿದ ರಥದಲ್ಲಿ ಸ್ವಾಮಿಯವರ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಿದರು.
ಉತ್ಸವದಲ್ಲಿ ದೇವರಿಗೆ ವಿಶೇಷ ಪೂಜೆ, ಅಭಿಷೇಕ ಹಾಗೂ ಮಹಾಮಂಗಳಾರತಿ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಗಳು ನೆರವೇರಿದವು.
ಇದೇ ವೇಳೆ ಶ್ರೀವಳ್ಳಿ,ದೇವಸೇನಾ ಶ್ರೀಸುಬ್ರಮಣ್ಯಸ್ವಾಮಿ ಶ್ರೀಅಯ್ಯಪ್ಪಸ್ವಾಮಿ ಶ್ರೀಆಂಜನೇಯಸ್ವಾಮಿಯ ಪಲ್ಲಕ್ಕಿ ಮೆರವಣಿಗೆ ಜರುಗಿತು. ಹಾಗೂ ಹೂವಿನ ರಥೋತ್ಸವಕ್ಕೆ ಮಾಜಿ ಸಚಿವ ಅರವಿಂದ ಲಿಂಬಾವಳಿ ಚಾಲನೆ ನೀಡಿದರು.
ಚೀಮಸಂದ್ರ ಆವಲಹಳ್ಳಿ, ಬಿದರಹಳ್ಳಿ , ಕೋನದಾಸಪುರ ಮೇಡಹಳ್ಳಿ ಸುತ್ತಮುತ್ತಲಿನ ಬಡಾವಣೆಗಳ ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾದರು.
ಈ ಸಂದರ್ಭದಲ್ಲಿ ಮಹದೇವಪುರ ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಹೂಡಿ ಪಿಳ್ಳಪ್ಪ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಿಲ್ಪ ನಾಗರಾಜ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕೆಂಪರಾಜ್, ಗ್ರಾಮ ಪಂಚಾಯಿಒತಿ ಸದಸ್ಯರಾದ ರಾಜಣ್ಣ, ಮಂಜುನಾಥ್, ಶ್ರೀನಿವಾಸ್, ನಂಜಪ್ಪ, ಮುಖಂಡರಾದ ಸಿ.ಎಸ್ ಜಯರಾಮಯ್ಯ, ಚೇತನ್, ಅರ್ಚಕ ಚೇತನ್ ಆರಾಧ್ಯ ಮತ್ತಿತರರು ಉಪಸ್ಥಿತರಿದ್ದರು.