ವರ್ತೂರು ವೈಭವದ ಶ್ರೀಭೂನಿಳಾ ಸಮೇತ ಶ್ರೀಚನ್ನರಾಯಸ್ವಾಮಿ ಬ್ರಹ್ಮರಥೋತ್ಸವ

ಸ್ಥಳೀಯ ಸುದ್ದಿ

ಧರ್ಮ ಬಸವನಪುರ.

1/26/20261 min read

ಮಹದೇವಪುರ:- ರಥಸಪ್ತಮಿ ಪ್ರಯುಕ್ತ ವರ್ತೂರಿನಲ್ಲಿ ಶ್ರೀಭೂನಿಳಾ ಸಮೇತ ಶ್ರೀಚನ್ನರಾಯಸ್ವಾಮಿ ಬ್ರಹ್ಮರಥೋತ್ಸವ ವಿಜೃಂಭಣೆಯಿಂದ ನಡೆಯಿತು. ದೇವಾಲಯದಲ್ಲಿ ಶ್ರೀಭೂನಿಳಾ ಸಮೇತ ಶ್ರೀಚನ್ನರಾಯ ಸ್ವಾಮಿಗೆ ಪೂಜೆ ಸಲ್ಲಿಸಿ ನಂತರ ಪ್ರಮುಖ ಬೀದಿಗಳಲ್ಲಿ ಸ್ವಾಮಿಯ ಮೂರ್ತಿಯನ್ನು ಮೆರವಣಿಗೆ ಮಾಡಲಾಯಿತು. ನಂತರ ರಥದಲ್ಲಿ ಕೂರಿಸಿ ಅಲಂಕರಿಸಿ ಪೂಜೆ ಮಾಡಿ ರಥವನ್ನು ಎಳೆದು ಚಾಲನೆ ನೀಡಲಾಯಿತು.

ರಥೋತ್ಸವದ ಅಂಗವಾಗಿ ಶ್ರೀಚನ್ನರಾಯಸ್ವಾಮಿಗೆ ವಿಶೇಷ ಹೂವಿನ ಅಲಂಕಾರ, ಪೂಜಾ ಕೈಂಕರ್ಯಗಳು ನಡೆದವು, ವರ್ತೂರಿನ ಪ್ರಮುಖ ಬೀದಿಗಳಲ್ಲಿ ಬ್ರಹ್ಮರಥೋತ್ಸವ ಸಾಗಿತು. ಈ ಉತ್ಸವದಲ್ಲಿ ತಮಟೆ, ಪೂಜಾಕುಣಿತ, ನಾದಸ್ವರ, ಚಿಂಗಾರಿ ಮೇಳ, ಚಂಡಿ ಮೇಳ, ಚಟ್ಟಿಮೇಳ, ವೀರಗಾಸೆ, ಗಾರುಡಿಗೊಂಬೆ, ಡೊಳ್ಳು ಕುಣಿತವು ನೆರೆದಿದ್ದ ಭಕ್ತರನ್ನು ಗಮನಸೆಳೆಯಿತು.

ಊರಿನ ಪ್ರಮುಖ ಬೀದಿಗಳಲ್ಲಿ ಒಂದು ಸುತ್ತು ರಥ ಸಂಚರಿಸಿತು. ರಥ ಸಾಗಿದ ಮಾರ್ಗದ ಉದ್ದಕ್ಕೂ ಭಕ್ತರು ಹಣ್ಣು, ದವನ ಎಸೆದರು. ದೂಪ ಮತ್ತು ಕರ್ಪೂರದ ಸೇವೆ ಸಲ್ಲಿಸಿದರು. ಹರಕೆ ಹೊತ್ತವರು ದೇವಾಲಯದ ಆಸು ಪಾಸಿನಲ್ಲಿ ಹಣ್ಣು, ಮಜ್ಜಿಗೆ, ಪಾನಕ, ಕೋಸಂಬರಿ ಹಾಗೂ ಅನ್ನದಾನವನ್ನ ವಿತರಿಸಿದರು.

ರಥೋತ್ಸವಕ್ಕೆ ಸುತ್ತಮುತ್ತಲಿನ ಗುಂಜೂರು,ಪಣತೂರು, ವೈಟ್ ಫೀಲ್ಡ್, ಬಳಗೆರೆ, ರಾಮಹೊಂಡಹಳ್ಳಿ, ಸೊರುಹುಣಸೆ, ಸರ್ಜಪುರ,ವಾಲೇಪುರ, ಮಧುರನಗರ, ಸುತ್ತಮುತ್ತಲಿನ ಹತ್ತಾರು ಗ್ರಾಮಗಳ ಸಾವಿರಾರು ಭಕ್ತಾದಿಗಳು ದೇವರ ಕೃಪೆಗೆ ಪಾತ್ರರಾದರು.

ರಥೋತ್ಸವದಲ್ಲಿ ಸಾರಿಗೆ ಸಚಿವರಾದ ರಾಮಲಿಂಗಾರೆಡ್ಡಿ, ಶಾಸಕಿ ಮಂಜುಳಾ ಅರವಿಂದ ಲಿಂಬಾವಳಿ, ಮಾಜಿ ಸಚಿವರಾದ ಅರವಿಂದ ಲಿಂಬಾವಳಿ, ಹೆಚ್.ನಾಗೇಶ್ ಆನೇಕಲ್ ಶಾಸಕ ಶಿವಣ್ಣ ಮುಖಂಡರಾದ ಕುಪ್ಪಿ ಮಂಜುನಾಥ್, ವರ್ತೂರು ಶ್ರೀಧ‌ರ್, ಮಹೇಂದ್ರ ಮೋದಿ, ಮನೋಹರ್ ರೆಡ್ಡಿ, ಎಲ್.ರಾಜೇಶ್, ಕೃಷ್ಣಪ್ಪ, ಸುಬ್ಬಣ್ಣ, ವರ್ತೂರು ಸುರೇಶ್, ಸುನಿಲ್, ದೀಪಕ್ ರಾಜ್ ಪಾಲ್ಗೊಂಡಿದ್ದರು.