ಪ್ರೀತಿಗೆ ವಿರೋಧ ವ್ಯಕ್ತಪಡಿಸಿದ್ದಕ್ಕೆ ಲವರ್ ಜೊತೆ ಸೇರಿ ತಾಯಿಯನ್ನೇ ಕೊಂದ 'SSLC' ಬಾಲಕಿ.!
ಕ್ರೈಮ್ದೇಶ/ವಿದೇಶ


ತೆಲಂಗಾಣ: ಹೈದರಾಬಾದ್ ನಗರದಲ್ಲಿ ತನ್ನ ಪ್ರೀತಿಗೆ ತಾಯಿ ಅಡ್ಡ ಬಂದರೆಂದು ಅಮ್ಮನನ್ನೆ ಮಗಳು ಕೊಲೆ ಮಾಡಿರುವ ಘೋರ ಘಟನೆ ಬೆಳಕಿಗೆ ಬಂದಿದೆ. ಜೀಡಿಮೆಟ್ಲಾದಲ್ಲಿ ಹತ್ತನೇ ತರಗತಿಯ ಬಾಲಕಿಯೊಬ್ಬಳು ತನ್ನ ಗೆಳೆಯನೊಂದಿಗೆ ಸೇರಿ ತನ್ನ ಮಲತಾಯಿಯನ್ನು ಕೊಲೆ ಮಾಡಿದ್ದಾಳೆ.ತಮ್ಮ ಪ್ರೇಮ ಸಂಬಂಧವನ್ನು ವಿರೋಧಿಸಿ ಖಂಡಿಸಿದ್ದಕ್ಕಾಗಿ ತನ್ನ ತಾಯಿಯನ್ನು ಆಕೆ ಬರ್ಬರವಾಗಿ ಹತ್ಯೆಮಾಡಿದ್ದಾಳೆ.
ಹತ್ತನೇ ತರಗತಿಯ ಹುಡುಗಿಯೊಬ್ಬಳು ಸುಮಾರು 8 ತಿಂಗಳ ಹಿಂದೆ ಇನ್ಸ್ಟಾಗ್ರಾಮ್ ಮೂಲಕ ಶಿವ (19) ಎಂಬ ಯುವಕನ ಪರಿಚಯ ಮಾಡಿಕೊಂಡಿದ್ದಳು. ಪರಿಚಯ ಪ್ರೀತಿಗೆ ತಿರುಗಿ ಇಬ್ಬರೂ ಪ್ರೀತಿಸುತ್ತಿದ್ದರು ಎನ್ನಲಾಗಿದೆ.
ನಂತರ ಅವರು ಫೋನ್ ಕರೆ ಮತ್ತು ಮೆಸೇಜ್ ಮಾಡುವ ಮೂಲಕ ಹೊರಗೆ ಭೇಟಿಯಾಗಲು ಪ್ರಾರಂಭಿಸಿದರು. ಹುಡುಗಿಯ ತಾಯಿ ಅಂಜಲಿಗೆ ಈ ವಿಷಯ ತಿಳಿಯಿತು. ಈ ವಯಸ್ಸಿನಲ್ಲಿ ಪ್ರೀತಿ ಪ್ರೇಮ ಎಲ್ಲ ಬೇಡ, ಚೆನ್ನಾಗಿ ಓದು ಎಂದು ಮಗಳಿಗೆ ಬುದ್ಧಿ ಮಾತು ಹೇಳಿದ್ದಳು..
ತನ್ನ ಲವ್ ಅನ್ನು ತಾಯಿ ವಿರೋಧಿಸಿದ ನಂತರ ಹುಡುಗಿ ತನ್ನ ತಾಯಿಯ ಮೇಲೆ ದ್ವೇಷ ಸಾಧಿಸಿದಳು. ತಮ್ಮ ಪ್ರೀತಿಗೆ ಅಡ್ಡಿಯಾಗಿದ್ದ ತಾಯಿಯನ್ನು ಕೊಲ್ಲಲು ನಿರ್ಧರಿಸಿದಳು. ಮತ್ತು ಈ ಬಗ್ಗೆ ತನ್ನ ಗೆಳೆಯ ಶಿವನಿಗೆ ಹೇಳಿದಳು.ಒಂದು ವಾರದ ಹಿಂದೆ, ಹುಡುಗಿ ಶಿವನೊಂದಿಗೆ ಓಡಿಹೋದಳು. ಆಕೆಯ ತಾಯಿ ಪೊಲೀಸರಿಗೆ ದೂರು ನೀಡಿದಾಗ, ಜೀಡಿಮೆಟ್ಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಮೂರು ದಿನಗಳ ನಂತರ ಅವಳು ಮನೆಗೆ ವಾಪಸ್ ಬಂದಳು. ನಮ್ಮ ಪ್ರೀತಿಗೆ ಅಡ್ಡಿಯಾದ ತಾಯಿಯನ್ನು ಹೇಗಾದರೂ ಮಾಡಿ ಸಾಯಿಸಬೇಕೆಂದು ನಿರ್ಧರಿಸಿದ ಬಾಲಕಿ ಸ್ಕೆಚ್ ಹಾಕಿದ್ದಳು.
ಸೋಮವಾರ ಸಂಜೆ (ಜೂನ್ 23) ನಲ್ಗೊಂಡದಿಂದ ಬಂದಿದ್ದ ಶಿವ ತನ್ನ ಗೆಳೆಯ ಮತ್ತು ತಮ್ಮ ಯಶವಂತ್ ಜೊತೆ ಹುಡುಗಿಯ ಮನೆಗೆ ತಲುಪಿದ್ದ. ಅಂಜಲಿ ಮನೆಯಲ್ಲಿ ಪೂಜೆ ಮಾಡುತ್ತಿದ್ದಾಗ ಶಿವ ಹಿಂದಿನಿಂದ ಆಕೆಯ ಮೇಲೆ ಹಲ್ಲೆ ನಡೆಸಿದ್ದಾನೆ. ನಂತರ ಶಿವ ಅಂಜಲಿಯ ಮುಖವನ್ನು ಬೆಡ್ಶೀಟ್ನಿಂದ ಮುಚ್ಚಿದ್ದಾನೆ ಮತ್ತು ಹುಡುಗಿ ಸುತ್ತಿಗೆಯಿಂದ ತನ್ನ ತಾಯಿಯ ತಲೆಗೆ ಹೊಡೆದಿದ್ದಾಳೆ. ನಂತರ ಶಿವನ ಕಿರಿಯ ಸಹೋದರ ಯಶವಂತ್ ಅಂಜಲಿಯ ತಲೆಯನ್ನು ಚಾಕುವಿನಿಂದ ಕತ್ತರಿಸಿದ್ದಾನೆ. ಸುತ್ತಿಗೆಯಿಂದ ಹೊಡೆದು, ತಲೆಗೆ ಚಾಕುವಿನಿಂದ ಹೊಡೆದು ಕ್ರೂರವಾಗಿ ಕೊಲೆ ಮಾಡಿದ ನಂತರ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.
ಅಂಜಲಿ ಸಾವಿನಿಂದ ಕುಟುಂಬಸ್ಥರು ದುಃಖತಪ್ತರಾಗಿದ್ದಾರೆ. ತೇಜಶ್ರೀ ಐದು ದಿನಗಳ ಹಿಂದೆ ತನ್ನ ಗೆಳೆಯನೊಂದಿಗೆ ಮನೆ ಬಿಟ್ಟು ಹೋಗಿದ್ದರು ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ. ಈ ಬಗ್ಗೆ ಪೊಲೀಸರಿಗೆ ದೂರು ಕೂಡ ನೀಡಿದ್ದಾರೆ.
ಪ್ರಸ್ತುತ, ಮೂವರು ಆರೋಪಿಗಳು ಪೊಲೀಸ್ ವಶದಲ್ಲಿದ್ದಾರೆ. ಜೀಡಿಮೆಟ್ಲಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಘಟನೆಯ ತನಿಖೆ ನಡೆಸುತ್ತಿದ್ದಾರೆ.