ದಳಪತಿ ವಿಜಯ್ ರ‍್ಯಾಲಿಯಲ್ಲಿ ಕಾಲ್ತುಳಿತ: 20ಕ್ಕೂ ಹೆಚ್ಚು ಸಾವು

ರಾಜಕೀಯದೇಶ/ವಿದೇಶ

ಧರ್ಮ ಬಸವನಪುರ.

9/27/20251 min read

ತಮಿಳುನಾಡು: ತಮಿಳು ನಟ ವಿಜಯ್ ಜೊಸೆಫ್ ಕಟ್ಟಿದ ಟಿವಿಕೆ ಪಕ್ಷ ಅತೀ ಹೆಚ್ಚಿನ ಜನ ಸೇರಿಸಿ ರ‍್ಯಾಲಿ ಆಯೋಜನೆ ಮಾಡಿ ಇದೀಗ ಸಂಕಷ್ಟಕ್ಕೆ ಸಿಲುಕಿದೆ. ತಮಿಳುನಾಡಿನ ಕರೂರ್‌ನಲ್ಲಿ ಆಯೋಜಿಸಿದ ಟಿವಿಕೆ ಪಕ್ಷದ ರ‍್ಯಾಲಿಯಲ್ಲಿ ಕಾಲ್ತುಳಿತ ಸಂಭವಿಸಿದೆ. ಮಕ್ಕಳು ಸೇರಿದಂತೆ 20ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

ಪಕ್ಷದ ಕಾರ್ಯಕರ್ತರು, ಮಕ್ಕಳು ಜನಸಂದಣಿ ಹೆಚ್ಚುತ್ತಾ ಹೋದಂತೆ ಒತ್ತಡದಿಂದಾಗಿ ಮೂರ್ಛೆ ಹೋದರು ಎಂದು ವರದಿಯಾಗಿದೆ, ಇದರಿಂದಾಗಿವಿಜಯ್ ತಮ್ಮ ಭಾಷಣವನ್ನು ನಿಲ್ಲಿಸಿ ಶಾಂತವಾಗಿರಲು ಕರೆ ನೀಡಿದರು. ಅಗತ್ಯವಿರುವವರನ್ನುತಲುಪಲು ತುರ್ತು ಆಂಬ್ಯುಲೆನ್ಸ್‌ಗಳಿಗೆ ದಾರಿ ಮಾಡಿಕೊಡುವಂತೆ ತಮ್ಮ ಬೆಂಬಲಿಗರನ್ನು ಒತ್ತಾಯಿಸಿದರು. ಅಸ್ವಸ್ಥರಾದವರಿಗೆ ನೀರಿನ ಬಾಟಲಿಗಳನ್ನು ವಿತರಿಸಲಾಗಿದ್ದು ವೈದ್ಯಕೀಯ ತಂಡಗಳನ್ನು ತತ್ ಕ್ಷಣವೇ ನಿಯೋಜಿಸಲಾಗಿದೆ.

ಹಲವರನ್ನು ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗಳಿಗೆ ಸಾಗಿಸಲಾಗಿದ್ದು, ಮೂವರು ಮಕ್ಕಳು ಸೇರಿದಂತೆ ಕನಿಷ್ಠ 20 ಜನರು ಪ್ರಾಣ ಕಳೆದುಕೊಂಡಿರುವ ಬಗ್ಗೆ ವರದಿಯಾಗಿದೆ.

ನಿಗದಿತ ಸಮಯಕ್ಕಿಂತ 6 ಗಂಟೆ ತಡವಾಗಿ ವಿಜಯ್ ಸ್ಥಳಕ್ಕೆ ಬಂದಿದ್ದರು. ಇನ್ನು ವಿಜಯ್ ಬರುತ್ತಿದ್ದಂತೆ ವೇದಿಕೆಯತ್ತ ಸಾವಿರಾರೂ ಸಂಖ್ಯೆಯಲ್ಲಿ ಜನ ನುಗ್ಗಲು ಪ್ರಾರಂಭಿಸಿದರು. ಈ ವೇಳೆ ಜನಸಂದಣಿ ಹೆಚ್ಚಾಗಿದ್ದರಿಂದ ಕಾಲ್ತುಳಿತ ಸಂಭವಿಸಿದೆ.

ಕಾಲ್ತುಳಿತದ ವೇಳೆ ಹಲವರು ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ಹಲವು ಮಕ್ಕಳು ಕಾಣೆಯಾಗಿವೆ ಎಂದು ವರದಿಯಾಗಿದೆ. ಘಟನೆ ನಡೆಯುತ್ತಿದ್ದಂತೆ ಸ್ಥಳದಲ್ಲಿದ್ದ ವಿಜಯ್ ತಕ್ಷಣ ತಮ್ಮ ಭಾಷಣವನ್ನು ನಿಲ್ಲಿಸಿ ಕಾರ್ಯಕರ್ತರಿಗೆ ಶಾಂತಿ ಕಾಪಾಡುವಂತೆ ಮನವಿ ಮಾಡಿದರು. ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ಯಲು ಆಂಬ್ಯುಲೆನ್ಸ್‌ಗೆ ದಾರಿ ಮಾಡಿಕೊಡುವಂತೆ ಕೇಳಿಕೊಂಡರು.