ಸಮೀಕ್ಷೆಗೆ ಅಡ್ಡಿ ಪಡಿಸಿದರೆ ಕಠಿಣ ಕ್ರಮ :ಜಿಲ್ಲಾಧಿಕಾರಿ ಜಗದೀಶ್

ಸ್ಥಳೀಯ ಸುದ್ದಿ

ಧರ್ಮ ಬಸವನಪುರ.

10/4/20251 min read

ಮಹದೇವಪುರ: ಅಪಾರ್ಟ್ಮೆಂಟ್ ನಿವಾಸಿಗಳು ಸಾಮಾಜಿಕ,ಆರ್ಧಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಅಡ್ಡಿ ಪಡಿಸಿದರೆ ಅಂತವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಬೆಂಗಳೂರು ನಗರ ಡಿಸಿ ಜಗದೀಶ್ ಎಚ್ಚರಿಕೆ ನೀಡಿದ್ದಾರೆ..

ಬೆಂಗಳೂರು ಪೂರ್ವ ತಾಲೂಕಿನ ಮಂಡೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಪಾರ್ಟ್ಮೆಂಟ್ ಗಳಿಗೆ ಭೇಟಿ ನೀಡಿದ ಅವರು ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆ ಆದ ಸಮೀಕ್ಷೆಯನ್ನು ಪರಿಶೀಲನೆ ನಡೆಸಿ,ಅಧಿಕಾರಿಗಳಿಗೆ ಸಮೀಕ್ಷೆ ವೇಳೆ ಸಹಕರಿಸುವಂತೆ ಮನವಿ ಮಾಡಿದರು.

ಬೆಂಗಳೂರು ನಗರದಲ್ಲಿ ಪ್ರತಿನಿತ್ಯ ಮೂವತೈದು ಸಾವಿರಕ್ಕೂ ಅಧಿಕ ಮನೆಗಳನ್ನು ಸಮೀಕ್ಷೆ ನಡೆಸಲಾಗುತ್ತಿದ್ದು, ಸಾರ್ವಜನಿಕರು ಇವೊಂದು ಮಹತ್ವಾಕಾಂಕ್ಷೆ ಸಮೀಕ್ಷೆಗೆ ಸಹಕಾರಿಸುತ್ತಿದ್ದಾರೆ ಎಂದರು.

ಕರ್ನಾಟಕದ ಪ್ರಗತಿಗೆ ಸಮೀಕ್ಷೆಯು ಅವಶ್ಯವಾಗಿದೆ. ಕೆಲವೊಂದು ಅಪಾರ್ಟ್ಮೆಂಟ್ ಗಳಲ್ಲಿ ಸಮೀಕ್ಷೆಗೆ ಸಹಕಾರಿಸುತ್ತಿಲ್ಲ ಎಂದು ದೂರುಗಳ ಬಂದ ಹಿನ್ನೆಲೆಯಲ್ಲಿ ಇಂದು ಮಂಡೂರು ವ್ಯಾಪ್ತಿಯ ಅಪಾರ್ಟ್ಮೆಂಟ್ ಗಳಿಗೆ ಭೇಟಿ ನೀಡಿ ಅಸೋಸಿಯೇಷನ್ ಗಳೊಂದಿಗೆ ಮಾತನಾಡಿದ್ದು, ಅವರು ಸಹಕಾರ ನೀಡುವುದಾಗಿ ಒಪ್ಪಿಕೊಂಡಿದ್ದಾರೆ ಎಂದರು.

ಯಾವುದೇ ಅಪಾರ್ಟ್ಮೆಂಟ್ ಗಳಲ್ಲಿ ಸಮೀಕ್ಷೆ ಮಾಡಲು ಯಾವುದಾದರೂ ಅಸೋಸಿಯೇಷನ್ ಗಳು ಅಡ್ಡಿಪಡಿಸಿದಲ್ಲಿ ಅವರ ವಿರುದ್ದ ಕಠಿಣ ಕ್ರಮ ಮತ್ತು ಅಸೋಸಿಯೇಷನ್ ವಿರುದ್ಧ ದೂರು ದಾಖಲಿಸಲಾಗುತ್ತದೆ ಎಂದು ಕಡಖ್ ಎಚ್ಚರಿಕೆ ನೀಡಿದರು. ಸಮೀಕ್ಷೆ ಸಮಯದಲ್ಲಿ ಯಾರದರೂ ಮಾಹಿತಿ ನೀಡಲ್ಲ ಎಂದು ವೈಯುಕ್ತಿಕವಾಗಿ ಹೇಳಿದರೆ ಒತ್ತಾಯ ಮಾಡಬೇಡಿ ಎಂದು ಅಧಿಕಾರಿಗಳಿಗೆ ತಿಳಿಸಿದರು.

ಕೆಲವರು ಸಾಮಾಜಿಕ ಮತ್ತು ಶೈಕ್ಷಣಿಕ,ಆರ್ಥಿಕ ಸಮೀಕ್ಷೆಯಿಂದ ರೇಷನ್ ಕಾರ್ಡ್ ರದ್ದು ಆಗುತ್ತವೆ ಎಂಬ ಭಯಬೇಡ. ಯಾವುದೇ ತರದ ಕಾರ್ಡಗಳನ್ನು ಸರ್ಕಾರ ರದ್ದು ಮಾಡಲ್ಲ ಹಾಗೂ ಸರ್ಕಾರದ ಯಾವುದೇ ಸೌಲಭ್ಯಗಳಿಗೆ ಸಮೀಕ್ಷೆಯಿಂದ ಸಮಸ್ಯೆ ಆಗಲ್ಲ ಎಂದು ತಿಳಿಸಿದರು.                                                                                                                                                                                  ಈಸಂದರ್ಭಗಳಲ್ಲಿ ಬೆಂ.ಪೂರ್ವ ತಾಲ್ಲೂಕು ತಹಶಿಲ್ದಾರ್ ರಾಜೀವ್,ಬೆಂ.ಪೂರ್ವ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿವಸಂತ ಕುಮಾರ್,ತಾಲೂಕು ಶಿಕ್ಷಣಾಧಿಕಾರಿ ಗೋವಿಂದಪ್ಪ,ಮಂಡೂರು ಪಿಡಿಓ ಮತ್ತು ಅಧಿಕಾರಿಗಳು ಇದ್ದರು