ಉಪನ್ಯಾಸಕಿಗೆ ಚಪ್ಪಲಿಯಿಂದ ಹೊಡೆದ ವಿದ್ಯಾರ್ಥಿನಿ, ವೀಡಿಯೋ ವೈರಲ್
ದೇಶ/ವಿದೇಶ


ಪೋನ್ ಕೊಡುವಂತೆ ಉಪನ್ಯಾಸಕಿಯನು ಒತಾಯಿಸಿದ ವಿದ್ಯಾರ್ಥಿನಿ, ಬಾಯಿಗೆ ಬಂದಂತೆ ನಿಂದಿಸಿ, ಏಕಾಏಕಿ ಚಪ್ಪಲಿಯಿಂದ ಹಲ್ಲೆ ಮಾಡಿರುವ ಘಟನೆ ನಡೆದಿದೆ. ಈ ಘಟನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಆಂಧ್ರಪ್ರದೇಶದ ವಿಜಯನಗರದ ಇಂಜಿನೀಯರಿಂಗ್ ಕಾಲೇಜಿನಲ್ಲಿ ಈ ಘಟನೆ ನಡೆದಿದೆ. ಕಾಲೇಜು ಆವರಣದಲ್ಲಿ ವಿದ್ಯಾರ್ಥೀನಿ ಮೊಬೈಲ್ ಬಳಸುತ್ತಿದ್ದುದ್ದನ್ನು ಗಮನಿಸಿದ ಉಪನ್ಯಾಸಕಿ ಮೊಬೈಲ್ ಕಿತ್ತುಕೊಂಡಿದ್ದಾರೆ. ಬಳಿಕ ಮೊಬೈಲ್ ವಿಚಾರಕ್ಕೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಯಾವಾಗ ಉಪನ್ಯಾಸಕಿ ಫೋನ್ ಕೊಡಲು ನಿರಾಕರಿಸಿದರು ತನ್ನ ಕಾಲಿನಲಿದ್ದ ಚಪ್ಪಲಿಯೊಂದನು ಕಳಚಿದ ವಿದ್ಯಾರ್ಥಿನಿ, ಉಪನಾಸಕಿಯ ಮೇಲೆ ಹಲ್ಲೆ ಮಾಡಿದಳು. ಈ ವೇಳೆ ಉಪನ್ಯಾಸಕಿ ಕೂಡ ಆಕೆಯ ವಿರುದ್ದ ಪ್ರತಿದಾಳಿ ನಡೆಸಿದರು. ಸಹ ವಿದ್ಯಾರ್ಥಿಗಳು ಮತ್ತು ಇನ್ನೊಬ್ಬ ವ್ಯಕ್ತಿ ಮಧ್ಯ ಪ್ರವೇಶಿಸಿ ಜಗಳವನ್ನು ತಡೆದರು.
ಈ ವೇಳೆ ಅಲ್ಲೇ ಇದ್ದ ಮತ್ತೊಬ್ಬ ವಿದಾರ್ಥಿ ಈ ಘಟನೆಯನ್ನು ರೆಕಾರ್ಡ್ ಮಾಡಿದ್ದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ, ಸದ್ಯ ಈ ವೀಡಿಯೋ ಸಾಮಾಜಿಕ ಜಾಲತಾಣದಲಿ ವೈರಲ್ ಆಗಿದೆ. ಈ ಬಗ್ಗೆ ಕಾಲೇಜು ಆಡಳಿತ ಮಂಡಳಿ ಇನ್ನೂ ಪ್ರತಿಕಿಯಿಸಿಲ್ಲ. ಆದರೆ, ನೆಟ್ಟಿಗರು ಮಾತ್ರ ವಿದ್ಯಾರ್ಥಿನಿಯ ನಡೆಯನ್ನು ಠೀಕಿಸುತಿದಾರೆ.
