ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ಯುವಕನಿಗೆ ಹೊಸ ಬದುಕು ನೀಡಿದ ಸೂಪರ್ ಮೈಕ್ರೋ ಶಸ್ತ್ರಚಿಕಿತ್ಸೆ.

ಸ್ಥಳೀಯ ಸುದ್ದಿ

ಧರ್ಮ ಬಸವನಪುರ.

8/13/20251 min read

ಬೆಂಗಳೂರು, (ವೈಟ್‌ಫೀಲ್ಡ್‌): ಬೈಕ್ ಅಪಘಾತದಲ್ಲಿ ಭಾರೀ ಗಾಯಗೊಂಡು, ಕೈ ಹಾಗೂ ಭುಜ ಭಾಗ ಸಂಪೂರ್ಣವಾಗಿ ಸ್ವಾಧೀನ ಕಳೆದುಕೊಂಡ ಸ್ಥಿತಿಗೆ ತಲುಪಿದ್ದ 23 ವರ್ಷದ ದೇಬ್‌ ರಂಜನ್‌ ಎಂಬ ಯುವಕನಿಗೆ, ಮೆಡಿಕವರ್ ಆಸ್ಪತ್ರೆಯಲ್ಲಿ ನಡೆದ ಅಪರೂಪದ ಹಾಗೂ ಯಶಸ್ವಿ ಶಸ್ತ್ರಚಿಕಿತ್ಸೆಯು ನವಜೀವನ ನೀಡಿದೆ.

ಕೊಲ್ಕತ್ತ ಮೂಲದ ದೇಬ್‌ ರಂಜನ್‌ ಬೈಕ್‌ನಿಂದ ಬಿದ್ದು ಭುಜ ಮತ್ತು ಕತ್ತಿನ ನರಗಳು ಸಂಪೂರ್ಣವಾಗಿ ತೀವ್ರವಾಗಿ ಕೆಲಸ ಮಾಡೋಕೆ ಆಗದ ಸ್ಥಿತಿಯಲ್ಲಿತ್ತು. ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರೂ ಫಲಿತಾಂಶ ಇಲ್ಲದ ಕಾರಣ, ಅವರು ಬೆಂಗಳೂರಿನ ಮೆಡಿಕವರ್ ಆಸ್ಪತ್ರೆಯ ಪ್ಲಾಸ್ಟಿಕ್ ಸರ್ಜನ್ ಡಾ. ಸುರೇಶ್ ಕೆ ಅವರನ್ನು ಸಂಪರ್ಕಿಸಿದರು.

ಸಂದರ್ಶನ ಮತ್ತು ಸ್ಕ್ಯಾನ್ ಪರೀಕ್ಷೆಗಳಿಂದ ಭುಜದ ಹಾಗೂ ಕತ್ತಿನ ಬ್ರಾಚಿಯಲ್ ಪ್ಲೆಕ್ಸಸ್ ನರಗಳು ಸಂಪೂರ್ಣವಾಗಿ ಕಟ್ ಆಗಿರುವುದು ಪತ್ತೆಯಾಯಿತು. ತಕ್ಷಣವೇ ಡಾ. ಸುರೇಶ್ ಅವರು ಸೂಪರ್ ಮೈಕ್ರೋ ಶಸ್ತ್ರಚಿಕಿತ್ಸೆ ನಡೆಸಿದರು. ಈ ಶಸ್ತ್ರಚಿಕಿತ್ಸೆ ಅತ್ಯಂತ ಸೂಕ್ಷ್ಮವಾದ ಕಾರ್ಯವಿಧಾನವಾಗಿದ್ದು, ಭುಜದ ನಡು ನರಗಳನ್ನು ಪುನರ್‌ಜೋಡಿಸುವಲ್ಲಿ ಯಶಸ್ವಿಯಾಯಿತು.

ಇದಕ್ಕು ಮೇಲೆ ಅರ್ಥೋಪೆಡಿಕ್ ಸರ್ಜನ್ ಡಾ. ಕೃಷ್ಣಕುಮಾರ್ ಅವರ ಸಹಕಾರದಿಂದ ಭುಜದ ಕೊಲ್ಲೇಬೋನು ಮುರಿತಕ್ಕೂ ಶಸ್ತ್ರಚಿಕಿತ್ಸೆ ನಡೆಯಿತು.

ಇಂದು, ದೇಬ್‌ ರಂಜನ್ ಸಂಪೂರ್ಣವಾಗಿ ಆರೋಗ್ಯ ಲಾಭಿಸಿ, ಯಾವ ಸಮಸ್ಯೆಯೂ ಇಲ್ಲದೆ ದೈನಂದಿನ ಜೀವನಕ್ಕೆ ಮರಳಿದ್ದಾರೆ. “ರೋಗಿಯ ಆರೋಗ್ಯದಲ್ಲಿ ಬಂದ ಸುಧಾರಣೆಯಿಂದ ನಾವು ಸಂತೋಷಪಡುವೆವು. ಇಂತಹ ಯಶಸ್ಸುಗಳು ನಮ್ಮ ತಂಡದ ಕಾರ್ಯಪಟುತ್ವದ ಪ್ರತಿಬಿಂಬವಾಗಿವೆ ಎಂದು ಡಾ. ಸುರೇಶ್ ಕೆ ಹೇಳಿದರು.