ಸರ್ಕಾರಿ ಯೋಜನೆ ಸದುಪಯೋಗ ಮಾಡಿಕೊಳ್ಳಿ ಅರವಿಂದ ಲಿಂಬಾವಳಿ ಕರೆ.
ಸ್ಥಳೀಯ ಸುದ್ದಿ


ಮಹದೇವಪುರ : ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಿಂದುಳಿದ ವರ್ಗಗಗಳ ಕಲ್ಯಾಣಕ್ಕೆ ನೀಡುವ ಯೋಜನೆಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ಮಾಜಿ ಸಚಿವ ಅರವಿಂದ ಲಿಂಬಾವಳಿ ಅವರು ಕರೆ ನೀಡಿದರು.
ಮಹದೇವಪುರ ಕ್ಷೇತ್ರದ ಮಾತ್ತಹಳ್ಳಿಯ ಖಾಸಗಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದ್ದ ನಗರ ಮಂಡಲ ಹಿಂದುಳಿದ ವರ್ಗಗಳ ಮೋರ್ಚಾ ಸಭೆಗೆ ಚಾಲನೆ ನೀಡಿ ಮಾತನಾಡಿದ ಅವರು, ಹಿಂದುಳಿದ ಜಾತಿಗಳ ಅಭಿವೃದ್ಧಿ ಗೆ ಸರ್ಕಾರಗಳು ಹಲವು ಕಲ್ಯಾಣ ಯೋಜನೆಗಳನ್ನು ಜಾರಿಗೆ ತಂದಿದ್ದು ಹಿಂದುಳಿದ ಸಮುದಾಯ ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ತಿಳಿಸಿದರು. ಪಕ್ಷದ ಮುಖಂಡರು ಅರ್ಹ ಫಲಾನುಭವಿಗಳನ್ನು ಗುರುತಿಸಿ ಸೌಲಭ್ಯಗಳನ್ನು ಒದಗಿಸುವ ಕೆಲಸ ಮಾಡಬೇಕೆಂದರು.
ಮಹದೇವಪುರ ಕ್ಷೇತ್ರದಲ್ಲಿ ಎಲ್ಲಾ ಸಮುದಾಯಗಳನ್ನು ಒಗ್ಗೂಡಿಸಿಕೊಂಡು ಹೋಗುತ್ತಿದ್ದು,ಬಿಜೆಪಿ ಪಕ್ಷ ಸರ್ವಸ್ಪರ್ಶಿ ಸರ್ವವ್ಯಾಪಿಯಾಗಿ ಬೆಳೆಸುವ ಗುರಿಯೊಂದಿಗೆ ಸಂಘಟಿಸುತ್ತಿದ್ದು, ಕ್ಷೇತ್ರದಲ್ಲಿ ಹಿಂದುಳಿದ ಜಾತಿಗಳ ವರ್ಗ ಸಂಘರ್ಷ ಮಾಡಬಾರದು, ಭಾರತದ ಮುಸ್ಲಿಂರು ಈ ದೇಶದ ಭಾಗವಾಗಿದ್ದು, ಸಾಮರಸ್ಯದ ಬದುಕನ್ನು ಕಟ್ಟುವಂತಹ ಕೆಲಸ ಮಾಡಬೇಕು. ಕಳೆದ 15 ವರ್ಷಗಳಿಂದ ಯಾವುದೇ ಜಾತಿ ಧರ್ಮಗಳ ನಡುವೆ ದ್ವೇಷವಿಲ್ಲದೆ ಜೀವನ ಸಾಗಿಸುತ್ತಿದ್ದು. ಜಾತಿ ಕೇಳಿ ರಾಜಕಾರಣ ಮಾಡಬಾರದು ಎಂದರು.
ಪಕ್ಷ ನೀಡುವ ಹುದ್ದೆಗಳನ್ನು ಜವಾಬ್ದಾರಿ ಎಂದು ಪರಿಗಣಿಸಿ ನಿರ್ವಹಣೆ ಮಾಡಬೇಕು ಎಂದು ತಿಳಿಸಿದರು. ಹಿಂದುಳಿದ ಮೋರ್ಚಾಕಾರ್ಯಕರ್ತರು ಪ್ರತಿಯೊಂದು ಹಿಂದುಳಿದ ವರ್ಗದ ಮನೆಗಳಿಗೆ ಭೇಟಿ ನೀಡುವ ಮೂಲಕ ಪಕ್ಷವನ್ನು ಮತ್ತಷ್ಟು ಬಲಪಡಿಸಲು ಶ್ರಮವಹಿಸಬೇಕೆಂದು ತಿಳಿಸಿದರು.
ಕ್ಷೇತ್ರದ ಅಧ್ಯಕ್ಷರಾದ ಎನ್.ಆರ್.ಶ್ರೀಧರ್ ರೆಡ್ಡಿ, ರಾಜ್ಯಪರಿಷತ್ ಸದಸ್ಯ ಎಲ್.ರಾಜೇಶ್, ಹಿಂದುಳಿದ ಮೋರ್ಚಾ ಅಧ್ಯಕ್ಷರಾದ ಮುನಿರಾಜು, ಮೇಲುಸ್ತುವಾರಿ ಲೋಕೇಶ್, ಉಸ್ತುವಾರಿಗಳಾದ ಮುಳ್ಳೂರು ನವೀನ್. ಲೋಕನಾಥ್ ರೆಡ್ಡಿ, ಹಿಂದುಳಿದ ವರ್ಗಗಳ ಮುಖಂಡರಾದ ವಿ.ಪಿ.ರಕ್ಷೀತ್, ಬಿ.ಎಸ್.ಶ್ರೀಧರ್, ಜಿ.ಜಯದೇವರಾಜು, ಚಿಕ್ಕಣ್ಣ, ಅನೆಪ್ಪ, ಬಾಲಕೃಷ್ಣ, ಸೋಮಶೇಖರ್ ರೆಡ್ಡಿ ಇದ್ದರು.