ಟಿಎಪಿಎಂಸಿಎಸ್ ಮತದಾನದಲ್ಲಿ ಏರುಪೇರು: ಮತದಾನ ಏರುಪೇರಿಗೆ ಪ್ರತಿಸ್ಪರ್ಧಿ ಏಜೆಂಟ್ ಗಳೇ ಕಾರಣ: ಮರು ಮತದಾನಕ್ಕೆ ಪರಾಜಿತ ಅಭ್ಯರ್ಥಿ ನರಸಿಂಹ ಮೂರ್ತಿ ಒತ್ತಾಯ

ಸ್ಥಳೀಯ ಸುದ್ದಿ

RAGHAVENDRA H A

11/4/20251 min read

ಟಿಎಪಿಎಂಸಿಎಸ್ ಮತದಾನದಲ್ಲಿ ಏರುಪೇರು: ಮತದಾನ ಏರುಪೇರಿಗೆ ಪ್ರತಿಸ್ಪರ್ಧಿ ಏಜೆಂಟ್ ಗಳೇ ಕಾರಣ: ಮರು ಮತದಾನಕ್ಕೆ ಪರಾಜಿತ ಅಭ್ಯರ್ಥಿ ನರಸಿಂಹ ಮೂರ್ತಿ ಒತ್ತಾಯ

ದೊಡ್ಡಬಳ್ಳಾಪುರ ತಾಲೂಕಿನ ವ್ಯವಸಾಯ ಉತ್ಪನ್ನ ಮಾರಾಟ ಸಹಕಾರ ಸಂಘ ನ.2ರಂದು ನಡೆಯಿತು. ಈ ಚುನಾವಣೆಯಲ್ಲಿ ಕೆಲವೊಂದು ಬೂತ್ ಗಳಲ್ಲಿ ನಮ್ಮ ಏಜೆಂಟ್ ಗಳು ಇರಲಿಲ್ಲ. ವಯೋವೃದ್ಧರು ಮತದಾನ ಮಾಡುವಾಗ ಗೊಂದಲದಲ್ಲಿದ್ದಾಗ ಬೇರೆ ಏಜೆಂಟರ್ ಗಳು ಬಂದು ಮತದಾನ ಮಾಡಿಸಿದ್ದಾರೆ. ಆಗ ಮತದಾನದಲ್ಲಿ ಏರುಪೇರಾಗಿ ನಾನು ಸೋತಿದ್ದೇನೆ ಎಂದು ಎಚ್ ನರಸಿಂಹ ಮೂರ್ತಿ ಆರೋಪ ಮಾಡಿದ್ದಾರೆ.

ನ.2ರಂದು ನಡೆದ ದೊಡ್ಡಬಳ್ಳಾಪುರ ಟಿಎಪಿಎಂಸಿಎಸ್ ಚುನಾವಣೆಯಲ್ಲಿ‌ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದ ಅಭ್ಯರ್ಥಿಯಾಗಿ ನೇರಳೇಘಟ್ಟ ನರಸಿಂಹಮೂರ್ತಿ ಸ್ಪರ್ಧಿಸಿದ್ದರು. ಮತ ಎಣಿಕೆಯಲ್ಲಿ ನರಸಿಂಹ‌ಮೂರ್ತಿ ಪ್ರತಿ ಸ್ಪರ್ಧಿ ಆನಂದ್ ಎಂ ಅವರು 2338 ಮತ ಪಡೆದಿದ್ದರು, ನರಸಿಂಹ ಮೂರ್ತಿ ಅವರು 2065 ಮತಗಳನ್ನು ಪಡೆದು ಸೋಲುಕಂಡಿದ್ದರು. ಚುನಾವಣಾ ಫಲಿತಾಂಶ ನಂತರ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಫಲಿತಾಂಶದ ಬಗ್ಗೆ ಬೇಸರ ವ್ಯಕ್ತಪಡಿಸಿದರು. ಇದೇ ವೇಳೆ ಚುನಾವಣೆ ಪ್ರಕ್ರಿಯೆಗಳ ಬಗ್ಗೆ ಆರೋಪಿಸಿದ ಅವರು, ಇದು ಸಹಕಾರ ಕ್ಷೇತ್ರದಲ್ಲಿ ನನಗೆ ಮೊದಲ ಚುನಾವಣೆ ಆಗಿದ್ದರಿಂದ ಚುನಾವಣೆ ಪ್ರಕ್ರಿಯೆ ಮೇಲೆ ನಿಗಾವಹಿಸಲು ಸಾಧ್ಯವಾಗಿರಲಿಲ್ಲ. ಅದು ನನ್ನ ಗಮನಕ್ಕೆ ಬಂದಂತೆ 11 ಬೂತ್ ಗಳಲ್ಲಿ‌ ಕೇವಲ 4 ಬೂತ್ ಗಳಲ್ಲಿ ಮಾತ್ರ ನಮ್ಮ ಏಜೆಂಟ್ ಗಳು ಕೆಲಸ ಮಾಡುತ್ತಿದ್ದರು. ಈ ಅವಕಾಶ ಪಡೆದ ಪ್ರತಿ ಸ್ಪರ್ಧಿ ಏಜೆಂಟ್ ಗಳು ವಯಸ್ಸಾದವರಿಗೆ ನೆರವಾಗುವ ನೆಪದಲ್ಲಿ ಮತದಾನವನ್ನು ಏರುಪೇರು ಮಾಡಿದ್ದಾರೆ. 8 ಬ್ಯಾಲೆಟ್ ಗಳು ಇತ್ತು, ಇದು ವಯಸ್ಸಾದವರಿಗೆ ಗೊಂದಲ ಉಂಟುಮಾಡಿತ್ತು. ಕೆಲವರು ಮತದಾನ ಮಾಡದೇ ಖಾಲಿ ಹಾಳೆ ಬಿಟ್ಟಿದ್ದಾರೆ. ಈ ಖಾಲಿ ಪೇಪರ್ ಗಳಲ್ಲಿ ಅಭ್ಯರ್ಥಿಗೆ ಮತ ಹಾಕಿದ್ದಾರೆ. ಇದು ನನ್ನ ಸೋಲಿಗೆ ಕಾರಣವಾಯಿತು ಎಂದು ಬೇಸರ ವ್ಯಕ್ತಪಡಿಸಿದರು.

ಇದರ ಜೊತೆಯಲ್ಲಿ 825 ತಿರಸ್ಕೃತ ಮತಗಳು ಕಂಡುಬಂದಿದ್ದು, ಇಷ್ಟೊಂದು ಮತಗಳು ತಿರಸ್ಕೃತಗೊಂಡಿರುವುದು ನನ್ನ ಸಂಶಯಕ್ಕೆ ಕಾರಣವಾಗಿದೆ. ಪ್ರತಿ ಸ್ಪರ್ಧಿಯ ಷಡ್ಯಂತ್ರದಂತೆ ಕೆಲವು ಮತದಾರರು ಯಾವುದೇ ಚಿಹ್ನೆಗೆ ಮತ ಹಾಕದೇ ಖಾಲಿ ಬ್ಯಾಲೆಟ್ ಪೇಪರ್ ಬಿಟ್ಟಿರುತ್ತಾರೆ. ಮತ ತಿರಸ್ಕೃತವಾಗಲು ಖಾಲಿ ಬ್ಯಾಲೆಟ್ ಪೇಪರ್ ಗಳೇ ಕಾರಣ. ಪ್ರತಿ ಸ್ಪರ್ಧಿಗೆ ಇದು ಮೂರನೇ ಚುನಾವಣೆಯಾಗಿದ್ದು, ಈ ಹಿಂದೆ ಮಾಜಿ ಅಧ್ಯಕ್ಷರು ಸಹ ಆಗಿದ್ದರು. ತಮ್ಮ ಪ್ರಭಾವ ಬಳಿಸಿಕೊಂಡು ಪ್ರಭಾವ ಬೀರುವ ಸಾಧ್ಯತೆ ಇದೆ ಎಂದು ಆರೋಪಿಸಿದ್ದಾರೆ.ಪಾರದರ್ಶಕವಾಗಿ ಚುನಾವಣೆ ನಡೆದೇ ಇರುವುದರಿಂದ ಮರು ಮತದಾನಕ್ಕೆ ಅವಕಾಶ ಮಾಡಿಕೊಡುವಂತೆ‌ ಒತ್ತಾಯಿಸಿದರು.