ಭಾರತ-ಇಂಗ್ಲೆಂಡ್ ಟೆಸ್ಟ್ ಸರಣಿಗೆ ತೆಂಡೂಲ್ಕರ್-ಅ್ಯಂಡರ್ಸನ್ ಹೆಸರು
ಕ್ರೀಡೆ


ಭಾರತ-ಇಂಗ್ಲೆಂಡ್ ಟೆಸ್ಟ್ ಸರಣಿ ಗೆದ್ದ ತಂಡದ ನಾಯಕನಿಗೆ ಪಟೌಡಿ ಹೆಸರಿನಲ್ಲಿ ಪದಕ ಸ್ವೀಕರಿಸಲಿದ್ದಾರೆ. ಐದು ಪಂದ್ಯಗಳ ಸರಣಿ ಟೆಸ್ಟ್ ಸರಣಿಗೆ ಪಟೌಡಿ ಟ್ರೋಫಿ ಹೆಸರು ಕೈಬಿಟ್ಟು,ತೆಂಡೂಲ್ಕರ್-ಅ್ಯಂಡರ್ಸನ್ ಎಂದು ಹೆಸರಿಡಲು ಅಂತಿಮ ನಿರ್ಧಾರ ತೆಗೆದುಕೊಂಡ ಬಳಿಕ ಈ ಬೆಳವಣಿಗೆಯಾಗಿದೆ.
ಶ್ರೇಷ್ಟ ಟೆಸ್ಟ್ ಕ್ರಿಕೆಟಿಗರಾದ ತೆಂಡೂಲ್ಕರ್-ಅ್ಯಂಡರ್ಸನ್ ಅವರ ಗೌರವಾರ್ಥವಾಗಿ ಈ ಸರಣಿಗೆ ಅವರ ಹೆಸರಿಡಲು ಇಂಗ್ಲೆಂಡ್ ಮತ್ತು ವೆಲ್ಸ್ ಕ್ರಿಕೆಟ್ ಮಂಡಳಿ ನಿರ್ಧರಿಸಿದೆ.
ಆದರೆ ಪಟೌಡಿ ಹೆಸರನ್ನು ತೆಗೆದು ಹಾಕುವುದಕ್ಕೆ ವಿರೋಧ ವ್ಯಕ್ತವಾದ ನಂತರ ವೈಯಕ್ತಿಕವಾಗಿ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಭೇಟಿಯಾದ ಸಚಿನ್ ತೆಂಡೊಲ್ಕರ್ , ಪಟೌಡಿ ಪರಂಪರೆಯನ್ನು ಮುಂದುವರೆಸುವಂತೆ ಮನವಿ ಮಾಡಿದ್ದಾರೆ. ಇದಕ್ಕೆ ಐಸಿಸಿ ಮುಖ್ಯಸ್ಥ ಜಯ್ ಶಾ ಬೆಂಬಲ ವ್ಯಕ್ತಪಡಿಸಿದ್ದಾರೆ.
ಪಟೌಡಿ ಕುಟುಂಬ ಮತ್ತು ಎರಡು ಕ್ರಿಕೆಟ್ ಮಂಡಳಿಯೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ಪದಕವನ್ನು ಸೇರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಭಾರತ- ಇಂಗ್ಲೆಂಡ್ ಸರಣಿಯಲ್ಲಿ ಪಟೌಡಿ ಹೆಸರನ್ನು ಮುಂದುವರೆಸುವಂತೆ ಸಚಿನ್ ತೆಂಡೊಲ್ಕರ್ ಮನವಿಯನ್ನು ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಒಪ್ಪಿದ್ದು, ಟ್ರೋಫಿ ಗೆದ್ದ ನಾಯಕನಿಗೆ ಪಟೌಡಿ ಹೆಸರಿನಲ್ಲಿ ಪದಕ ವಿತರಿಸಲು ನಿರ್ಧರಿಸಿದೆ ಎಂದು ಬಿಸಿಸಿಐ ಮೂಲಗಳು ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿವೆ.