ಸಿಕ್ಕ ಸಿಕ್ಕ ವಾಹನಗಳ ಗ್ಲಾಸ್ ಪುಡಿ ಪುಡಿ ಮಾಡಿ ಪುಂಡಾಟ ಮೆರೆದ ಕುಡುಕ! ಕೆ.ಆರ್.ಪುರ ಮಾರ್ಕೆಟ್ ಒಂದು ಕ್ಷಣ ಶಾಕ್, ಗಾಬಾರಿಯಿಂದ ಓಡಿದ ಜನ!
ಸ್ಥಳೀಯ ಸುದ್ದಿಕ್ರೈಮ್


ಕೆ.ಆರ್.ಪುರ: ಕೈಯಲ್ಲಿ ಲಾಂಗ್ ಹಿಡಿದುಕೊಂಡು ಸಿನಿಮಾದಲ್ಲಿ ಬರುವ ವಿಲನ್ ಹಾಗೆ ರಸ್ತೆಯಲ್ಲಿ ನಿಲ್ಲಿಸಿದ ವಾಹನಗಳ ಗ್ಲಾಸ್ ನ್ನ ಪುಡಿ ಪುಡಿ ಮಾಡಿ ಒಂದು ಕ್ಷಣ ಮಾರ್ಕೆಟ್ ನಲ್ಲಿದ್ದ ಜನ ಫುಲ್ ಶಾಕ್ ಆಗುವಂತೆ ಮಾಡಿದ ಕುಡುಕನ ಅವಾಂತರ ಕಂಡು ಭಯಭೀತರಾದ ಘಟನೆ ಕೆಆರ್ ಪುರಂ ಸಂತೆಯಲ್ಲಿ ನಡೆದಿದೆ.
ಇಂದು ಬೆಳಗ್ಗೆ ಸುಮಾರು 5.30 ರ ಸಮಯದಲ್ಲಿ ಕೆ ಆರ್ ಪುರಂ ನ ಮಾರ್ಕೆಟ್ ನಲ್ಲಿ ಇದ್ದಕ್ಕಿದ್ದಂತೆ ನಶೆಯಲ್ಲಿ ತೇಲಾಡುತ್ತಿದ್ದ ಯಜವಕನೊಬ್ಬ ಕೈಯಲ್ಲಿ ಲಾಂಗು ಹಿಡಿದು ಕೊಂಡು ಆವಜ್ ಹಾಕಿಕೊಂಡು ಸುಮಾರು ಏಳೆಂಟು ವಾಹನಗಳ ಟಾಟಾ ಏಸ್ ಮಾರುತಿ ಓಮಿನಿ ಗೂಡ್ಸ್, ಆಟೋ ಸೇರಿದಂತೆ ಹಲವು ವಾಹನಗಳ ಗಾಜುಗಳನ್ನ ಪುಡಿ ಪುಡಿ ಮಾಡಿದ್ದಾನೆ ಇದನ್ನು ನೋಡಿದ ಮಾರ್ಕೆಟ್ ನ ವ್ಯಾಪಾರಸ್ಥರು ಶಾಕ್ ಆಗಿದ್ರು .ಆತನನ್ನು ಅಟ್ಟಾಡಿಸಿ ಹಿಡಿದು ಚನ್ನಾಗಿ ಥಳಿಸಿ ಪೋಲಿಸರ ವಶಕ್ಕೆ ಒಪ್ಪಿಸಿದ್ದಾರೆ.
ಇನ್ನು ಇವನ ಅವಾಂತರ ಕಂಡು ಯಾರೊ ಒಬ್ಬ ವ್ಯಕ್ತಿ ವಿಡಿಯೋ ಮಾಡಿದ್ರು.ಪೋಲಿಸರಿಗೆ ಮಾಹಿತಿ ನೀಡಿ ದೂರು ಕೂಡ ನೀಡಿದ್ರು ಪ್ರಕರಣ ದಾಖಲಿಸಿ ಕೊಂಡ ಕೆಆರ್ ಪುರಂ ಪೋಲಿಸರು. ದೇವಸಂದ್ರದ ಮೆಕ್ಕಾ ಮಸೀದಿ ಬಳಿ ವಾಸವಾಗಿರೋ ಸೂಫಿಯಾನ್ ಎಂದು ತಿಳಿದು ಬಂದಿದೆ, ಈತನನ್ನು ಮಾಡಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ.