ಮಠಾಧೀಶರಿಂದ ಸನತಾನ ಧರ್ಮ ಉಳಿಸುವ ಕಾರ್ಯ ನಿರಂತರ: ಬೈರತಿ ಬಸವರಾಜ್
ಸ್ಥಳೀಯ ಸುದ್ದಿ


ಕೆ.ಆರ್.ಪುರ: ನಾಡಿನ ಮಠಾಧೀಶರು ಸನಾತನ ಧರ್ಮ ಉಳಿಸುವ ಕಾರ್ಯ ನಿರಂತರವಾಗಿ ಮಾಡುತ್ತ ಬರುತ್ತಿದ್ದಾರೆ. ಅವರಿಗೆ ಬೆಂಬಲವಾಗಿ ನಿಲ್ಲುವ ಮೂಲಕ ಧರ್ಮ ರಕ್ಷಣೆ ಕಟೀಬದ್ಧರಾಗಬೇಕು. ವಿಭೂತಿಪುರ ಮಠವು ಐತಿಹಾಸಿಕ ಹಿನ್ನೆಲೆಯುಳ್ಳ ಮಠವಾಗಿದ್ದು ಸಾವಿರಾರು ಮಕ್ಕಳಿಗೆ ವಿದ್ಯಾದಾನ, ಅನ್ನದಾನದ ಜೊತೆಗೆ ಮುಖ್ಯವಾಗಿ ಸಂಸ್ಕಾರ ಕಲಿಸುತ್ತಿದ್ದಾರೆ. ಮಕ್ಕಳು ತಮ್ಮ ಉಜ್ವಲವಾದ ಭವಿಷ್ಯ ರೂಪಿಸಿಕೊಳ್ಳಬೇಕು. ಮಠಗಳು ಬಡವರಿಗೆ ಸಮಾಜಪರ ಕಾರ್ಯಗಳನ್ನು ಮಾಡುವ ಮೂಲಕ ಮಠದ ಯಾವುದೇ ಕಾರ್ಯಗಳಿಗೆ ಸದಾ ನಿಲ್ಲುತ್ತೇನೆ ಎಂದು ಶಾಸಕ ಬೈರತಿ ಬಸವರಾಜ್ ಹೇಳಿದರು.
ಹೆಚ್‌ಎಎಲ್ ಬಳಿಯ ಶ್ರೀಮದ್ ವಿಭೂತಿಪುರ ವೀರ ಸಿಂಹಾಸನ ಮಠದಲ್ಲಿ ಹಮ್ಮಿಕೊಂಡಿದ್ದ ಕ್ಷೇತ್ರನಾಥ ಶ್ರೀವೀರಭದ್ರಸ್ವಾಮಿ ಜಾತ್ರಾ ಮಹೋತ್ಸವ ಹಾಗೂ ಜನಪದ ವಿಭೂತಿ ರಾಷ್ಟ್ರೀಯ ಪ್ರಶಸ್ತಿ ಮತ್ತು ಸುವರ್ಣಶ್ರೀ ರಾಷ್ಟ್ರೀಯ ಪ್ರಶಸ್ತಿ ಸಮಾರಂಭವನ್ನು ಶಾಸಕ ಬೈರತಿ ಬಸವರಾಜ್ ಹಾಗೂ ವಿಭೂತಿಪುರ ಮಠದ ಮಹಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಉದ್ಘಾಟಿಸಿ ಮಾತನಾಡಿದರು.
ವಿಭೂತಿಪುರ ಮಠದ ಶ್ರೀ ಮಹಂತಲಿಂಗ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಮಠದಲ್ಲಿ ನಡೆಯುವ ಎಲ್ಲಾ ಕಾರ್ಯಕ್ರಮಗಳಿಗೂ ಶಾಸಕರಾದ ಬೈರತಿ ಬಸವರಾಜ ರವರು ಸಹಕಾರ ನೀಡುತ್ತಿದ್ದಾರೆ. ಪ್ರತೀ ವರ್ಷವೂ ಮಠದಲ್ಲಿ ರಾಷ್ಟ್ರೀಯ ಪ್ರಶಸ್ತಿ ನೀಡಲಾಗುತ್ತಿದೆ ಎಂದರು.
ಸಮಾರಂಭದಲ್ಲಿ ಪ್ರಸಿದ್ಧ ಜೋಗತಿ ನೃತ್ಯ ಕಲಾವಿದ ಶ್ರೀ ರಾಚಯ್ಯ ವೀರಭದ್ರಯ್ಯ ಮುಧೋಳ ಅವರಿಗೆ ಜಾನಪದವಿಭೂತಿ ರಾಷ್ಟ್ರೀಯ ಪ್ರಶಸ್ತಿ ಹಾಗೂ ಶಿಕ್ಷಣ ತಜ್ಞ ಮತ್ತು ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ನಾಡೋಜ ಡಾ.ವೂಡೇ ಪಿ.ಕೃಷ್ಣ ಅವರಿಗೆ ಸುವರ್ಣ ಶ್ರೀ ರಾಷ್ಟ್ರೀಯ ಪ್ರಶಸ್ತಿ ಪ್ರಧಾನ ಮಾಡಲಾಯಿತು.
ಈ ಸಂದರ್ಭದಲ್ಲಿ ನೊಣವಿನಕೆರೆ ಮಠದ ದೇಶೀ ಕೇಂದ್ರ ಶಿವಯೋಗಿಶ್ವರ ಮಹಾ ಸ್ವಾಮಿ, ಡಾ.ಸಿದ್ಧಲಿಂಗ ಶಿವಾಚಾರ್ಯ, ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ, ಮಹದೇವಪುರ ವಿಧಾನಸಭಾ ಕ್ಷೇತ್ರದ ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ, ಮಹೇಂದ್ರ ಮೋದಿ ಮುಖಂಡರಾದ ಗೀತಾ ವಿವೇಕಾನಂದ, ಮುನೇಗೌಡ, ಮಾರ್ಕೆಟ್ ರಮೇಶ್, ಸಿದ್ದಲಿಂಗಯ್ಯ, ಕೃಷ್ಣಪ್ಪ ಮತ್ತಿತರರಿದ್ದರು.