ದೊಡ್ಡಬಳ್ಳಾಪುರ ಚೌಡೇಶ್ವರಿ ದೇವಾಲಯದಲ್ಲಿ ಕಳ್ಳತನ, ಹುಂಡಿ ಕಾಸು ಕದ್ದೊಯ್ದ ಕಳ್ಳ
ಸ್ಥಳೀಯ ಸುದ್ದಿಕ್ರೈಮ್


ದೊಡ್ಡಬಳ್ಳಾಪುರ: ತಾಲೂಕಿನ ಹಾಡೋನಹಳ್ಳಿ ಚೌಡೇಶ್ವರಿ ದೇವಸ್ಥಾನದಲ್ಲಿ ಭಾನುವಾರ ರಾತ್ರಿ ಸುಮಾರು 10:32ರಲ್ಲಿ ಕಳ್ಳತನ ಪ್ರಕರಣ ನಡೆದಿದೆ. ಇಂದು ಬೆಳಗ್ಗೆ ಚೌಡೇಶ್ವರಿ ದೇವಸ್ಥಾನದ ಬಳಿ ಪೂಜಾರಿ, ಗ್ರಾಮಸ್ಥರು ತೆರಳಿದಾಗ ಕಳ್ಳತನ ನಡೆದಿರುವುದು ಕಂಡುಬಂದಿದೆ.
ಅಪರಿಚಿತ ಕಳ್ಳನೋರ್ವ ಚೌಡೇಶ್ವರಿ ದೇವಸ್ಥಾನದ ಬಾಗಿಲಿಗೆ ಅಳವಡಿಸಿದ್ದ ಚಿಲಕಗಳನ್ನು ಸ್ಕ್ರೂ ಡ್ರೈವರ್ ನಿಂದ ತೆಗೆದು, ಹಾರೆ ಕೋಲು ಬಳಸಿ, ಡೋರ್ ಲಾಕ್ ಮುರಿದು ದೇವಾಲಯವನ್ನು ಪ್ರವೇಶಿಸಿ, ಕಾಣಿಕೆ ಹುಂಡಿಯ ಬಾಗಿಲು ಮುರಿದು ಕಾಣಿಕೆ ಹಣ ಕದ್ದು ಪರಾರಿಯಾಗಿದ್ದಾನೆ. ಈ ದೇವಾಲಯದಲ್ಲಿ ಇದು ಎರಡನೇ ಭಾರಿ ಕಳ್ಳತನ ನಡೆದಿರುವ ದೃಶ್ಯಾವಳಿಗಳು ಸಿಸಿ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ.
ಸ್ಥಳಕ್ಕೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.