2026 ರ ಚುನಾವಣೆಗಳಲ್ಲಿ ಯಾರ ಜೊತೆಯಲ್ಲಿ ಮೈತ್ರಿ ಇಲ್ಲ. ಏಕಾಂಗಿಯಾಗಿ ಅಖಾಡಕ್ಕೆ ಇಳಿದ ದಳಪತಿ ವಿಜಯ್!
ದೇಶ/ವಿದೇಶ


ತಮಿಳುನಾಡು: ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸುವುದಾಗಿ, ಟಿವಿಕೆ ಪಕ್ಷದ ಸಂಸ್ಥಾಪಕ, ನಟ ದಳಪತಿ ವಿಜಯ್ ಘೋಷಿಸಿದ್ದಾರೆ. ಮುಂದಿನ ವರ್ಷ ನಡೆಯಲಿರುವ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ 234 ಕ್ಷೇತ್ರಗಳಲ್ಲಿ, ಡಿಎಂಕೆ, ಎಡಿಎಂಕೆ ವಿರುದ್ಧ ವಿಜಯ್ ಪಕ್ಷ ಸ್ಪರ್ಧಿಸಲಿದೆ ಎಂದು ತಿಳಿಸಿದ್ದಾರೆ.
ವಿಜಯ್ ಅವರು ಮಧುರೈನಲ್ಲಿ 2ನೇ ದೊಡ್ಡ ಮಟ್ಟದ ಸಮಾವೇಶ ಆಯೋಜಿಸಿದ್ದರು.ಸಮಾವೇಶಕ್ಕೆ ನಿರೀಕ್ಷಿ ಮೀರಿದಷ್ಟು ಲಕ್ಷಾಂತರ ಸಂಖ್ಯೆಯಲ್ಲಿ ಜನರು ಹರಿದು ಬಂದಿದ್ದರು.ಜನಸಾಗರವನ್ನ ನೋಡಿ ವೇದಿಕೆ ಮೇಲೆ ವಿಜಯ್ ಅವರು ಭಾವುಕರಾದರಾದರು.
ತಮಿಳುನಾಡಿನಲ್ಲಿ 234 ವಿಧಾನಸಭಾ ಕ್ಷೇತ್ರಗಳು ಇವೆ. ಎಲ್ಲಾ ಕ್ಷೇತ್ರಗಳಲ್ಲಿ ಇವರ ಪಕ್ಷ ಸ್ಪರ್ಧೆ ಮಾಡೋದಾಗಿ ಘೋಷಣೆ ಮಾಡಿದ್ದಾರೆ. 'ನಾವು ಎಲ್ಲಾ 234 ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದ್ದೇವೆ. ನಿಮ್ಮ ಮನೆಯಿಂದ ಸ್ಪರ್ಧಿಸುವ ಅಭ್ಯರ್ಥಿ ಮತ್ತು ನಾನು ಇಬ್ಬರೂ ಒಂದೇ ಎಂದುಕೊಳ್ಳಿ. ಅವರಿಗೆ ಮತ ಹಾಕುವುದು ನನಗೆ ಮತ ಹಾಕಿದಂತೆ' ಎಂದು ದಳಪತಿ ವಿಜಯ್ ಹೇಳಿದ್ದಾರೆ. ಮಧುರೈನ ಪೂರ್ವ ಕ್ಷೇತ್ರದಿಂದ ವಿಜಯ್ ಸ್ಪರ್ಧೆ ಮಾಡೋದಾಗಿ ಹೇಳಿದ್ದಾರೆ. ಅಲ್ಲದೆ ಯಾವುದೇ ಪಕ್ಷದ ಜೊತೆ ಮೈತ್ರಿ ಕೂಡ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಡಿಎಂಕೆ ಮತ್ತು ಬಿಜೆಪಿ ವಿರುದ್ಧ ವಾಗ್ದಾಳಿ:
ಆಡಳಿತ ಪಕ್ಷ ಡಿಎಂಕೆ ವಿರುದ್ಧ ವಾಗ್ದಾಳಿ ನಡೆಸುತ್ತಲೇ ತಮ್ಮ ಮುಂದಿನ ನಡೆ ಬಗ್ಗೆ ದಳಪತಿ ವಿಜಯ್ ಹೇಳಿದ್ದಾರೆ. ಬಿಜೆಪಿ ಜೊತೆ ಸೇರುವ ಮಾತೇಯಿಲ್ಲ ಎಂದು ಪುನರುಚ್ಚರಿಸಿದ್ದಾರೆ. ಮುಂದಿನ ಚುನಾವಣೆ ಏನಿದ್ದರೂ ಟಿವಿಕೆ ಹಾಗೂ ಡಿಎಂಕೆ ನಡುವೆ ಮಾತ್ರ. ಬೇರೆ ಯಾವುದೇ ಪಕ್ಷದ ಬಗ್ಗೆ ನಾವು ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ವಿಜಯ್ ಹೇಳಿದ್ದರು.
ಪ್ರಧಾನಿ ನರೇಂದ್ರ ಮೋದಿಯವರನ್ನು ನೇರವಾಗಿ ಗುರಿಯಾಗಿಸಿಕೊಂಡು, ತಮಿಳುನಾಡಿನ ಅಗತ್ಯಗಳನ್ನು ಬಿಜೆಪಿ ನಿರ್ಲಕ್ಷಿಸಿದೆ ಎಂದು ವಿಜಯ್ ಆರೋಪಿಸಿದರು.
ನಮಗೆ ಮುಖ್ಯವಾದದ್ದನ್ನು ನೀವು ಮಾಡುತ್ತಿಲ್ಲ. ನೀವು ತುಷ್ಠೀಕರಣಕ್ಕಾಗಿ ಆರ್‌ಎಸ್‌ಎಸ್ ಅನ್ನು ಬಳಸಿಕೊಳ್ಳುತ್ತಿದ್ದೀರಿ. 2029ರವರೆಗೆ ನಿಮ್ಮ ಪ್ರಯಾಣ ಸುಗಮವಾಗಿರಬಹುದು ಎಂದು ಭಾವಿಸಿದ್ದೀರಿ. ಆದರೆ, ಕಮಲದ ದಳಗಳ ಮೇಲೆ ನೀರಿನ ಹನಿಗಳು ಅಂಟಿಕೊಳ್ಳುವುದಿಲ್ಲ ಎಂಬುದನ್ನು ನಾನು ನಿಮಗೆ ಸ್ಪಷ್ಟಪಡಿಸುತ್ತೇನೆ ಎನ್ನುವ ಮೂಲಕ ತಮಿಳರು ಬಿಜೆಪಿಗೆ ಅಂಟಿಕೊಳ್ಳುವುದಿಲ್ಲ ಎಂಬುದನ್ನು ಮಾರ್ಮಿಕವಾಗಿ ಹೇಳಿದರು
ನಾನು ನಮ್ಮ ಪಕ್ಷ ಅಭ್ಯರ್ಥಿಗಳ ಹೆಸರುಗಳು ಹೇಳಿದ ವಿಜಯ್, ಮಧುರೈ ಪೂರ್ವ ಕ್ಷೇತ್ರದ ಅಭ್ಯರ್ಥಿ ವಿಜಯ್.. ಮಧುರೈ ಪಶ್ಚಿಮ ಕ್ಷೇತ್ರದ ಅಭ್ಯರ್ಥಿ ವಿಜಯ್.. ಮಧುರೈ ಕೇಂದ್ರ ಕ್ಷೇತ್ರದ ಅಭ್ಯರ್ಥಿ ವಿಜಯ್.. ಏನಪ್ಪಾ ಎಲ್ಲಾ 234 ಕ್ಷೇತ್ರಗಳಲ್ಲಿ ವಿಜಯ್ ಸ್ಪರ್ಧಿನಾ ಅಂದುಕೊಂಡ್ರಾ?" ಎಂದು ಹೇಳಿದ್ದಾರೆ. ಇದನ್ನು ಕೇಳಿ ನೆರೆದವರು ಶಾಕ್ ಆಗಿದ್ದಾರೆ. ಬಳಿಕ ಮಾತು ಮುಂದುವರೆಸಿ "ಎಲ್ಲಾ ಕ್ಷೇತ್ರಗಳಲ್ಲಿ ಈ ನಿಮ್ಮ ವಿಜಯ್ ಸ್ಪರ್ಧಿಸುತ್ತಾರೆ ಎಂದುಕೊಳ್ಳಿ. ನಿಮ್ಮ ಮನೆಯಲ್ಲಿರುವ ಅಭ್ಯರ್ಥಿಯೇ ಚುನಾವಣೆಗೆ ಇಳಿಯುತ್ತಾರೆ. ಆ ಅಭ್ಯರ್ಥಿ, ನಾನು ಬೇರೆ ಬೇರೆ ಅಲ್ಲ, ಆತನಿಗೆ ಮತ ಹಾಕಿದರೆ ನನಗೆ ಹಾಕಿದಂತೆ, ನನ್ನ ಮುಖ ನೋಡಿ ಮತ ಹಾಕಿ. ನಾನು ಹಾಗೂ ನಿಮ್ಮ ಕ್ಷೇತ್ರದ ಅಭ್ಯರ್ಥಿ ಬೇರೆ ಬೇರೆ ಅಲ್ಲ. ನೀವು ಅವರಿಗೆ ಮತ ಹಾಕಿದ್ರೆ ನನಗೆ ಹಾಕಿದಂತೆ, ಅವ್ರು ಗೆದ್ದರೆ ನಾನು ಗೆದ್ದಂತೆ" ಎಂದು ವಿಜಯ್ ಮನವಿ ಮಾಡಿದ್ದಾರೆ.
ತಮಿಳುನಾಡಿನ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಡಿಎಂಕೆ ಸರ್ಕಾರವನ್ನು TVK ಪಕ್ಷದ ಸ್ಥಾಪಕ ವಿಜಯ್ ತರಾಟೆಗೆ ತೆಗೆದುಕೊಂಡಿದ್ದಾರೆ. ಕೇಂದ್ರ ಸಂಸ್ಥೆಗಳ ತನಿಖೆಯಿಂದ ತನ್ನ ನಾಯಕರನ್ನು ರಕ್ಷಿಸಲು ಡಿಎಂಕೆ ಬಿಜೆಪಿಯೊಂದಿಗೆ ರಹಸ್ಯ ಮೈತ್ರಿ ಮಾಡಿಕೊಂಡಿದೆ ಎಂದು ವಿಜಯ್ ಆರೋಪಿಸಿದ್ದಾರೆ. ತಮಿಳುನಾಡು ಸಿಎಂ ಸ್ಟಾಲಿನ್ ಅವರನ್ನು 'ಸ್ಟಾಲಿನ್ ಅಂಕಲ್' ಎಂದು ವ್ಯಂಗ್ಯವಾಗಿ ಕರೆದಿದ್ದಾರೆ. ಸ್ಟಾಲಿನ್ ಅಂಕಲ್, ಏನು ಅಂಕಲ್? ನೀವು ಮಹಿಳೆಯರಿಗೆ ₹1,000 ನೀಡಿದರೆ ಸಾಕೇ? ಮಹಿಳೆಯರ ಅಳು ನಿಮಗೆ ಕೇಳಿಸುತ್ತದೆಯೇ? ತುಂಬಾ ತಪ್ಪು ಅಂಕಲ್, ತುಂಬಾ ತಪ್ಪು. ನೀವು ಮಹಿಳೆಯರಿಗೆ ಮೋಸ ಮಾಡುತ್ತಿದ್ದೀರಿ'ಎಂದಿದ್ದಾರೆ
ಅಭಿಮಾನಿಗನ್ನು ನೋಡಿ ಭಾವುಕರಾದ ದಳಪತಿ ವಿಜಯ್.
ಕಾರ್ಯಕ್ರಮದ ವೀಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ವಿಜಯ್ ನೋಡಲು ಜನಸಾಗರವೇ ಹರಿದು ಬಂದಿತ್ತು. ಕೆಲವು ಅಭಿಮಾನಿಗಳು ಭದ್ರತಾ ತಡೆಗೋಡೆಗಳನ್ನು ದಾಟಿ ವಿಜಯ್ ಅವರನ್ನು ಸ್ವಾಗತಿಸಲು ಮತ್ತು ಅವರ ಮೇಲೆ ಹೂಮಾಲೆ ಹಾಕಲು ಪ್ರಯತ್ನಿಸಿದ ಘಟನೆ ಸಹ ನಡೆದಿದೆ.
ವಿಶೇಷವಾಗಿ ವೈರಲ್ ಆದ ಒಂದು ಕ್ಷಣದಲ್ಲಿ ವಿಜಯ್ ತಮ್ಮ ಅಭಿಮಾನಿಗಳನ್ನು ನೋಡುತ್ತಿದ್ದಂತೆ ಭಾವುಕರಾದ ಘಟನೆ ಸಹ ನಡೆದಿದೆ. ಅನೇಕರು ಅವರ ನಮ್ರತೆ ಮತ್ತು ಸಾರ್ವಜನಿಕರೊಂದಿಗಿನ ನಿಜವಾದ ಸಂಪರ್ಕಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಪ್ರಜಾ ಭಾರತ್ ನ್ಯೂಸ್ ವೆಬ್ ಪೋರ್ಟಲ್ ವಾಟ್ಸಪ್ ಗ್ರೂಪ್ ಸೇರಲು 👇👇Follow this link to join my WhatsApp group: https://chat.whatsapp.com/Fj6L4Eak7N994zl2QHSpHK