ದೇವಾಲಯಕ್ಕೆ ಹೊರಟವರು ಮಸಣಕ್ಕೆ, ಕರೇನಹಳ್ಳಿಯ ನಾಲ್ವರು ದುರ್ಮರಣ

ಕ್ರೈಮ್ಸ್ಥಳೀಯ ಸುದ್ದಿ

ರಾಘವೇಂದ್ರ ಹೆಚ್.ಎ

7/1/20251 min read

ದೊಡ್ಡಬಳ್ಳಾಪುರ: ಹೆದ್ದಾರಿಯಲ್ಲಿ ಇನ್ನೋವಾ ಕಾರು ಪಲ್ಟಿ ಹೊಡೆದ ಪರಿಣಾಮ ಭೀಕರ ಅಪಘಾತದಲ್ಲಿ ನಾಲ್ವರು ಸಾವನ್ನಪ್ಪಿದ್ದು, ಮತ್ತೆ ನಾಲ್ವರು ಗಾಯಗೊಂಡಿದ್ದಾರೆ, ದೇವಸ್ಥಾನಕ್ಕೆ ಹೊರಟ್ಟಿದ್ದವರು ಮಸಣಕ್ಕೆ ಹೊರಟ ದುರಂತ ಘಟನೆ ಸಂಭವಿಸಿದೆ.

ದೊಡ್ಡಬಳ್ಳಾಪುರ ತಾಲೂಕಿನ ಮಾಕಳಿ ಬಳಿ ಇಂದು  ಬೆಳಗ್ಗೆ 10:30 ರ ಸಮಯದಲ್ಲಿ ಘಟನೆ ನಡೆದಿದ್ದು, ಘಟನೆಯಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ, ಮೃತರು ದೊಡ್ಡಬಳ್ಳಾಪುರ ನಗರದ ಕರೇನಹಳ್ಳಿ ನಿವಾಸಿಗಳು, ಕಾಳಪ್ಪ, ಪುರುಷೋತ್ತಮ, ನಾರಾಯಣಪ್ಪ, ಈಶ್ವರಪ್ಪ ಮೃತ ದುರ್ದೈವಿಗಳು, ನಾಲ್ಕು ಮಂದಿ ಗಾಯಗೊಂಡಿದ್ದು, ಆಸ್ಪತ್ರೆಗೆ ಕಳಿಸಲಾಗಿದೆ.

ಮೃತರು ಇಂದು ಬೆಳಗ್ಗೆ ಮಂಚೇನಹಳ್ಳಿಯ ಭೀಮೇಶ್ವರ ಬೆಟ್ಟದ ಮಹೇಶ್ವರಮ್ಮನ ದರ್ಶನಕ್ಕೆ ಹೊರಟ್ಟಿದ್ದರು, ದೊಡ್ಡಬಳ್ಳಾಪುರ-ಗೌರಿಬಿದನೂರು ರಸ್ತೆಯ ಮಾಕಳಿ ಬಳಿ ಓವರ್ ಟೇಕ್ ಮಾಡುವ ವೇಳೆ ಎದುರಿಗೆ ಕೆಎಸ್ ಆರ್ ಟಿಸಿ ಬಸ್ ಬಂದಿದೆ, ಈ ವೇಳೆ ಎಡಕ್ಕೆ ಕಾರನ್ನು ಚಲಿಸುವಾಗ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದಿದೆ. 

ಸ್ಥಳಕ್ಕೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ, ಸ್ಥಳದಲ್ಲಿ ಮೃತರ ಸಂಬಂಧಿಕರ ಅಕ್ರಂಧನ ಮುಗಿಲು ಮುಟ್ಟಿತು.