ಮನೆ ಮೇಲೆ ಗುಡ್ಡ ಕುಸಿದ ದುರಂತ : ಫಲಿಸದ ತಾಯಿಯ ಹೋರಾಟ, ಇಬ್ಬರು ಮಕ್ಕಳು ಸೇರಿ ಮೂವರ ಸಾವು.
ಜಿಲ್ಲಾ ಸುದ್ದಿ


ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲದಲ್ಲಿ ಮನೆ ಮೇಲೆ ಗುಡ್ದ ಕುಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಕ್ಷಿಸಲ್ಪಟ್ಟಿದ್ದ ಮಗು ಆರುಷ್ ಆಸ್ಪತ್ರೆಗೆ ಸಾಗಿಸುವ ವೇಳೆ ಸಾವನ್ನಪ್ಪಿದ್ದಾನೆ.
ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ತಾಲೂಕಿನ ಉರುಮನೆ ಕೋಡಿ ಎಂಬಲ್ಲಿ ಕಾಂತಪ್ಪ ಪೂಜಾರಿ ಎಂಬುವವರ ಮನೆ ಮೇಲೆ ಗುಡ್ಡ ಕುಸಿದು ಬಿದ್ದು, ಐದು ಜನರು ಮಣ್ಣಿನ ಅವಶೇಷಗಳ ಅಡಿಯಲ್ಲಿ ಸಿಲುಕಿದ್ದರು.
ಕಾಂತಪ್ಪ ಪೂಜಾರಿ ಅವಶೇಷಗಳಡಿಯಿಂದ ಹೊರಬಂದು ಬಚಾವಾಗ್ ಆಗಿದ್ದರು. ಮಣ್ಣಿನಡಿ ಸಿಲುಕಿದ್ದ ಅವರ ಪತ್ನಿ ಪ್ರೇಮಾ ಪೂಜಾರಿ (58) ಹಾಗೂ ಮೊಮ್ಮಗ ಆರ್ಯನ್ ಇಬ್ಬರು ಸಾವನ್ನಪ್ಪಿದ್ದರು. ಸೊಸೆ ಅಶ್ವಿನಿ ಹಾಗೂ ಅವರ ಮಗು ಆರುಷ್ ರಕ್ಷಣೆಗಾಗಿ ನಿರಂತರ 10 ಗಂಟೆಗಳ ಕಾಲ ಎಸ್.ಡಿ.ಆರ್.ಎಫ್ ಹಾಗೂ ಎನ್.ಡಿ.ಆರ್ಫ್. ತಂಡ ಕಾರ್ಯಾಚರಣೆ ನಡೆಸಿತ್ತು. ಸತತ ಕಾರ್ಯಾಚರಣೆ ಬಳಿಕ ಮಗು ಆರುಷ್ ನನ್ನು ಹಾಗೂ ಅಶ್ವಿನಿ ಅವರನ್ನು ಸುರಕ್ಷಿತವಾಗಿ ಹೊರತಲರಾಗಿತ್ತು. ಆದರೆ ರಕ್ಷಿಸಿದ್ದ ಮಗು ಕೂಡ ಸಾವನ್ನಪ್ಪಿದೆ.
ಅವಶೇಷಗಳ ಅಡಿಯಿಂದ ರಕ್ಷಿಸಲ್ಪಟ್ಟ ಮಗು ಆರುಷ್ ನನ್ನು ಆಸ್ಪತ್ರೆಗೆ ಕರೆದೊಯ್ಯುವಾಗ ಆಂಬುಲೆನ್ಸ್ ನಲ್ಲಿ ಮಾರ್ಗ ಮಧ್ಯೆಯೇ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ. ತಾಯಿ ಅಶ್ವಿನಿ ತನ್ನ ಇಬ್ಬರು ಮಕ್ಕಳಾದ ಆರ್ಯನ್ ಹಾಗೂ ಆರುಷ್ ನನ್ನು ಕಳೆದುಕೊಂಡಿದ್ದಾರೆ. ಅಶ್ವಿನಿ ಸ್ಥಿತಿಯೂ ಗಂಭೀರವಾಗಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಇದೀಗ ತಾಯಿ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಎಚ್ಚರ ಬಂದ ತಕ್ಷಣವೇ ತನ್ನ ಮಕ್ಕಳೆಲ್ಲಿ, ಹೇಗಿದ್ದಾರೆ? ಎಂದು ಕೇಳಿದ್ದಾರೆ. ಆದರೆ, ತಾಯಿ ಅಶ್ವಿನಿ ಸ್ಥಿತಿ ಗಂಭೀರವಾಗಿರುವುದರಿಂದ ಮಕ್ಕಳ ಸಾವಿನ ವಿಚಾರವನ್ನು ಮುಚ್ಚಿಟ್ಟಿದ್ದಾರೆ.
ತಾಯಿ ಅಶ್ವಿನಿ ಸ್ಥಿತಿ ಗಂಭೀರವಾಗಿದ್ದರಿಂದ ಮಕ್ಕಳು ಸಾವನ್ನಪ್ಪೊದ ವಿಚಾರವನ್ನು ಆಸ್ಪತ್ರೆ ಸಿಬ್ಬಂದಿ ತಿಳಿಸಿಲ್ಲ. ಇನ್ನು ಅವರ ಗಂಡ ಸೀತಾರಾಮ ಮತ್ತು ಅವರ ಮಾವ ಕಾಂತಪ್ಪ ಪೂಜಾರಿಗೂ ಗಂಭೀರ ಗಾಯವಾಗಿದೆ. ಅವರೂ ಕೂಡ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.