ಟ್ರಸ್ಟ್ ಇನ್ ಆಸ್ಪತ್ರೆ ವತಿಯಿಂದ ಸ್ತನದ ಕ್ಯಾನ್ಸರ್ ಜಾಗೃತಿ ಬಗ್ಗೆ 10K ಮ್ಯಾರಥಾನ್.ನೂರಾರು ಮಹಿಳೆಯರು ಭಾಗಿ.
ಸ್ಥಳೀಯ ಸುದ್ದಿ


ಕೆ.ಆರ್. ಪುರ: ಕ್ಷೇತ್ರದ ಹೊರಮಾವಿನಲ್ಲಿ ಟ್ರಸ್ಟ್ ಇನ್ ಆಸ್ಪತ್ರೆ ವತಿಯಿಂದ 5 ನೇ ವರ್ಷದ ಸ್ತನದ ಕ್ಯಾನ್ಸರ್ ಜಾಗೃತಿ ವಾಕಥಾನ್ ಗೆ ಐಎಎಸ್ ಅಧಿಕಾರಿ ರಣದೀಪ್ ಅವರು ಚಾಲನೆ ನೀಡಿದರು.
ಚಾಲನೆ ನೀಡಿ ಮಾತನಾಡಿದ ಅವರು ಒತ್ತಡ ಜೀವನ ಶೈಲಿಯ ನಡುವೆಯೂ ಆರೋಗ್ಯ ಬಗ್ಗೆ ಕಾಳಜಿ ವಹಿಸಬೇಕು ಹೇಳಿದರು.
ಸ್ತನದ ಜೀವಕೋಶಗಳಲ್ಲಿ ಆರಂಭವಾಗುವ ಇದು, ಬಳಿಕ ದೇಹದ ಬೇರೆ ಬೇರೆ ಅಂಗಾಂಶಗಳನ್ನು ಹಾಳುಮಾಡುತ್ತದೆ. ಇತ್ತೀಚಿನ ದಿನಗಳಲ್ಲಿ ಸ್ತನ ಕ್ಯಾನ್ಸರ್ ಸಾಮಾನ್ಯ ಎನ್ನುವಂತಾಗಿದೆ. ಇದರ ಬಗ್ಗೆ ಅರಿವು ಅಗತ್ಯ ಎಂದು ವಿವರಿಸಿದರು.
ಸಾರ್ವಜನಿಕರಲ್ಲಿ ಟ್ರಸ್ಟ್ ಇನ್ ಆಸ್ಪತ್ರೆ ಸ್ತನದ ಕ್ಯಾನ್ಸರ್ ಬಗ್ಗಅರಿವು ಮೂಡಿಸುತ್ತಿರುವ ಕಾರ್ಯ ಶ್ಲಾಘನೀಯವಾಗಿದೆ. ಸಾರ್ವಜನಿಕರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಜಾಗೃತಿ ಕಾರ್ಯಕ್ರಮಗಳು ಹೆಚ್ಚು ಪೂರವಾಗಿದೆ ಎಂದು ಹೇಳಿದರು.
ಪ್ರತಿಯೊಬ್ಬರು ಆರೋಗ್ಯದ ದೃಷ್ಟಿಯಿಂದ ವಾಕಿಂಗ್ ಮತ್ತು ವ್ಯಾಯಾಮವನ್ನು ತಪ್ಪದೇ ಮಾಡಬೇಕೆಂದು ತಿಳಿಸಿದರು.
ಜಾಥದಲ್ಲಿ ಭಾಗವಹಿಸಿ ಮಾತನಾಡಿದ ಸುಮಿತ್ರಾ ಅವರು ಸಾರ್ವಜನಿಕರಲ್ಲಿ ಟ್ರಸ್ಟ್ ಇನ್ ಆಸ್ಪತ್ರೆ ಅರಿವು ಮೂಡಿಸುತ್ತಿರುವ ಕಾರ್ಯ ಶ್ಲಾಘನೀಯವಾಗಿದೆ. ಇದರಿಂದ ಮಹಿಳೆಯರಲ್ಲಿ ಹೆಚ್ಚಿನ ಜಾಗೃತಿ ಮೂಡುತ್ತದೆ ಎಂದರು. ಸಾರ್ವಜನಿಕರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಜಾಗೃತಿ ಕಾರ್ಯಕ್ರಮಗಳು ಹೆಚ್ಚು ಪೂರಕವಾಗಿದೆ ಎಂದು ಹೇಳಿದರು.
ಹತ್ತು ಕಿಲೋಮೀಟರ್ ನಡೆದ ಕ್ಯಾನ್ಸರ್ ಜಾಥದಲ್ಲಿ ಒತ್ತಡ ಜೀವನ ಶೈಲಿಯ ನಡುವೆಯೂ ಆರೋಗ್ಯ ಬಗ್ಗೆ ಕಾಳಜಿ ವಹಿಸುವ ಉದ್ದೇಶದಿಂದ ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿರುವುದು ಪ್ರಮುಖವಾಯಿತು ಎಂದರು.
ಈ ಸಂಧರ್ಭದಲ್ಲಿ ಡಾ.ಕೇಶವ್,ಶಿವಯೋಗಿ, ಟ್ರಸ್ಟ್ ಇನ್ ಆಸ್ಪತ್ರೆಯ ವ್ಯವಸ್ಥಾಪಕ ಡಾ.ಕೆ.ಎಚ್. ಬಸವರಾಜ್, ಡಾ. ಶಿವಕುಮಾರ್, ಡಾ.ಬಿ.ಎಸ್.ಶಂಕರ್ ಇದ್ದರು.