Chikkamagaluru: ಗೂಗಲ್ ಲೋಕೇಶನ್ ನಂಬಿಕೊಂಡು ದಾರಿ ತಪ್ಪಿ ಗದ್ದೆಗೆ ನುಗ್ಗಿದ್ದ ಟಿಟಿ.ತಬ್ಬಿಬ್ಬಾದ ಪ್ರವಾಸಿಗರು.
ಜಿಲ್ಲಾ ಸುದ್ದಿ


ಚಿಕ್ಕಮಗಳೂರು: ಇತ್ತೀಚಿನ ದಿನಗಳಲ್ಲಿ ಗೂಗಲ್ ಮ್ಯಾಪ್ ನ ಲೋಕೇಶನ್ ನಂಬಿ ಹೋಗುವವರ ಸಂಖ್ಯೆ ಹೆಚ್ಚಾಗುತ್ತಿದೆ. ಅದರಲ್ಲೂ ಗೂಗಲ್ ಲೋಕೇಶನ್ ನಂಬಿ ದಾರಿ ತಪ್ಪುವವರೇ ಜಾಸ್ತಿ. ಅಂತದ್ದೇ ಘಟನೆಯೊಂದು ಚಿಕ್ಕಮಗಳೂರಿನಲ್ಲಿ ನಡೆದಿದೆ.
ಗೂಗಲ್ ಮ್ಯಾಪ್ ನ ಯಡವಟ್ಟಿನಿಂದ ಟಿಟಿಯೊಂದು ಗದ್ದೆ ಬಳಿ ಹೋಗಿ ನಿಂತ ಘಟನೆ ಚಿಕ್ಕಮಗಳೂರು ತಾಲೂಕಿನ ಆಲ್ದೂರು ಬಳಿ ಮೇ 21ರ ಬುಧವಾರ ಘಟನೆ ನಡೆದಿದೆ.
ಹೌದು ಗೂಗಲ್ ಮ್ಯಾಪ್ ನಂಬಿ ಬಂದಿದ್ದ ಪ್ರವಾಸಿಗರು, ವಾಹನವನ್ನು ಗದ್ದೆಗೆ ಇಳಿಸಿಕೊಂಡು ಪರದಾಡಿದ ಘಟನೆ ಆಲ್ದೂರು ಬಳಿ ನಡೆದಿದೆ. ಬೆಂಗಳೂರು ಮೂಲದ ಪ್ರವಾಸಿಗರು ಬಾಳೆಹೊನ್ನೂರು ಕಡೆಯಿಂದ ಮೂಡಿಗೆರೆಗೆ ತೆರಳುತ್ತಿದ್ದರು. ಈ ವೇಳೆ, ಗೂಗಲ್ ಮ್ಯಾಪ್ ಕೈ ಕೊಟ್ಟಿದ್ದು, ವಾಹನ ಗದ್ದೆ ಬಳಿ ಹೋಗಿ ಸಿಕ್ಕಿ ಹಾಕಿಕೊಂಡಿದೆ. ಇದರಿಂದ ವಾಹನ ವಾಪಸ್ ತೆಗೆಯಲಾಗದೆ ಪ್ರವಾಸಿಗರು ಕೆಲವು ಕಾಲ ಅಲ್ಲೇ ಪರದಾಡಿದ್ದಾರೆ.
ತಕ್ಷಣವೇ ಸ್ಥಳೀಯರು ಪ್ರವಾಸಿಗರ ನೆರವಿಗೆ ಧಾವಿಸಿದ್ದಾರೆ ಕೂಡಲೇ ಟ್ರ್ಯಾಕ್ಟರ್ ಒಂದನ್ನು ತಂದು ಅದಕ್ಕೆ ಹಗ್ಗ ಕಟ್ಟಿ ಗದ್ದೆಯಿಂದ ಟಿಟಿಯನ್ನು ರಸ್ತೆಗೆ ಎಳೆದು ತಂದಿದ್ದಾರೆ ಬಳಿಕ ಸ್ಥಳೀಯ ಮಾಹಿತಿ ಪಡೆದುಕೊಂಡು ಪ್ರವಾಸಿಗರು ಅಲ್ಲಿಂದ ತೆರಳಿದ್ದಾರೆ.
ಈ ಹಿಂದೆ ಗೂಗಲ್ ಮ್ಯಾಪ್ ನ ಯಡವಟ್ಟಿನಿಂದ ಉತ್ತರ ಕೇರಳದ ನಿಲಂಬೂರಿನಲ್ಲಿ ಐದು ಮಂದಿ ಯುವಕರು ದಾರಿ ತಿಳಿಯದ ಕಾರಣ ದಟ್ಟ ಕಾಡಿನ ಮೂಲಕ ಪ್ರಯಾಣಿಸಲು ನ್ಯಾವಿಗೇಷನ್ ಅಪ್ಲಿಕೇಶನ್ ಅನ್ನು ಬಳಸಿ ಜಡಿ ಮಳೆಯ ನಡುವೆ ಮಧ್ಯರಾತ್ರಿ ದಟ್ಟ ಕಾಡಿನಲ್ಲಿ ಸಿಕ್ಕಿಕೊಂಡಿದ್ದರು.ಅದೃಷ್ಟವಶಾತ್, ಅಗ್ನಿಶಾಮಕ ಮತ್ತು ಪಾರುಗಾಣಿಕಾ ಸೇವಾ ಸಿಬ್ಬಂದಿ ಅವರನ್ನು ಕಾಡಿನಿಂದ ರಕ್ಷಿಸಿದ್ದರು.