ಒಂದೇ ದಿನ ಎರಡು ಕಿಡ್ನಿ ಟ್ರಾನ್ಸ್‌ಪ್ಲಾಂಟ್ – ಇಬ್ಬರು ರೋಗಿಗಳಿಗೆ ಜೀವದಾನ.
ಸ್ಥಳೀಯ ಸುದ್ದಿ


ವೈಟ್ ಫೀಲ್ಡ್: ಇತರ ಆಸ್ಪತ್ರೆಗಳು “ಮಾರ್ಜಿನಲ್ ಕಿಡ್ನಿ” ಎಂದು ಪರಿಗಣಿಸಿ ಬಳಸಲು ಹಿಂಜರಿದಿದ್ದ ಕಿಡ್ನಿಗಳನ್ನು ಬಳಸಿಕೊಂಡು ಮೆಡಿಕವರ್ ಆಸ್ಪತ್ರೆಯ ವೈದ್ಯರು ಇಬ್ಬರು ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ರೋಗಿಗಳಿಗೆ ಹೊಸ ಜೀವನ ನೀಡಿದ್ದಾರೆ. ಫೆಬ್ರವರಿ 27 ರಂದು ನಡೆದ ಈ ಶಸ್ತ್ರಚಿಕಿತ್ಸೆಯಲ್ಲಿ ಒಂದೇ ದಿನ ಇಬ್ಬರು ರೋಗಿಗಳಿಗೆ ಯಶಸ್ವಿಯಾಗಿ ಕಿಡ್ನಿ ಟ್ರಾನ್ಸ್‌ಪ್ಲಾಂಟ್ ಮಾಡಲಾಗಿದೆ.
ಕ್ಯಾಡವರ್ ದಾನದ ಮೂಲಕ ಲಭಿಸಿದ್ದ ಎರಡು ಕಿಡ್ನಿಗಳನ್ನು ಇತರ ಆಸ್ಪತ್ರೆಗಳು ಬಳಸಲು ನಿರಾಕರಿಸಿದ್ದವು. ಆದರೆ ಮೆಡಿಕವರ್ ಆಸ್ಪತ್ರೆಯ ಡಾ. ಹರೀಶಾ ಬಾಬು, ಸೀನಿಯರ್ ಕನ್ಸಲ್ಟಂಟ್ ನೆಫ್ರೋಲಾಜಿಸ್ಟ್ ಹಾಗೂ ಕಿಡ್ನಿ ಟ್ರಾನ್ಸ್‌ಪ್ಲಾಂಟ್ ಸ್ಪೆಷಲಿಸ್ಟ್, ತಮ್ಮ ವೈದ್ಯಕೀಯ ಅನುಭವ ಮತ್ತು ದೃಢ ನಂಬಿಕೆಯೊಂದಿಗೆ ಆ ಕಿಡ್ನಿಗಳನ್ನು ಸ್ವೀಕರಿಸಿ ಅಗತ್ಯವಾದ ಕ್ರಾಸ್ ಮ್ಯಾಚಿಂಗ್ ಪರೀಕ್ಷೆ ನಡೆಸಿ ರೋಗಿಗಳಿಗೆ ಬಳಸುವ ನಿರ್ಧಾರ ಕೈಗೊಂಡರು.
ಈ ಮಹತ್ವದ ಶಸ್ತ್ರಚಿಕಿತ್ಸೆಯನ್ನು ಡಾ. ದಿಲೀಪ್, ಕನ್ಸಲ್ಟಂಟ್ ಯೂರೋಲಾಜಿಸ್ಟ್ ಮತ್ತು ಕಿಡ್ನಿ ಟ್ರಾನ್ಸ್‌ಪ್ಲಾಂಟ್ ಸರ್ಜನ್, ಹಾಗೂ ಡಾ. ಪ್ರಮೋದ್, ಕನ್ಸಲ್ಟಂಟ್ ಯೂರೋಲಾಜಿಸ್ಟ್ ಮತ್ತು ಕಿಡ್ನಿ ಟ್ರಾನ್ಸ್‌ಪ್ಲಾಂಟ್ ಸರ್ಜನ್, ಅವರ ನೇತೃತ್ವದ ತಂಡಗಳು ಯಶಸ್ವಿಯಾಗಿ ನಡೆಸಿವೆ. ಇಬ್ಬರು ಸರ್ಜನ್‌ಗಳು ಒಂದೇ ಸಮಯದಲ್ಲಿ ಶಸ್ತ್ರಚಿಕಿತ್ಸೆ ನಡೆಸಿ ಇಬ್ಬರು ರೋಗಿಗಳ ಜೀವ ಉಳಿಸುವಲ್ಲಿ ಯಶಸ್ವಿಯಾದರು.
ಮೊದಲ ರೋಗಿ 62 ವರ್ಷದವರು. ಅವರಿಗೆ ಹೈಪರ್ ಟೆನ್ಷನ್‌ನಿಂದ ಕಿಡ್ನಿ ವೈಫಲ್ಯ ಉಂಟಾಗಿ ಕಳೆದ ಎರಡು ವರ್ಷಗಳಿಂದ ಡಯಾಲಿಸಿಸ್ ಪಡೆಯುತ್ತಿದ್ದರು. ಅವರಿಗೆ ಕಿಡ್ನಿ ಟ್ರಾನ್ಸ್‌ಪ್ಲಾಂಟ್ ಮಾಡಲಾಗಿದ್ದು, ಈಗ ಕಿಡ್ನಿ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿದೆ. ರೋಗಿ ಸಂಪೂರ್ಣ ಚೇತರಿಸಿಕೊಂಡು ಮನೆಗೆ ತೆರಳಿದ್ದಾರೆ.
ಇನ್ನೊಬ್ಬ ರೋಗಿ 41 ವರ್ಷದವರು. ಅವರು ಕಳೆದ ಆರು ವರ್ಷಗಳಿಂದ ಡಯಾಲಿಸಿಸ್‌ನಲ್ಲಿ ಇದ್ದರು. ಯಶಸ್ವಿ ಕಿಡ್ನಿ ಟ್ರಾನ್ಸ್‌ಪ್ಲಾಂಟ್ ಬಳಿಕ ಅವರು ಕೂಡ ಉತ್ತಮವಾಗಿ ಚೇತರಿಸಿಕೊಂಡಿದ್ದಾರೆ.
ಡಾ. ಹರೀಶಾ ಬಾಬು, ಸೀನಿಯರ್ ಕನ್ಸಲ್ಟಂಟ್ ನೆಫ್ರೋಲಾಜಿಸ್ಟ್ ಮತ್ತು ಕಿಡ್ನಿ ಟ್ರಾನ್ಸ್‌ಪ್ಲಾಂಟ್ ಸ್ಪೆಷಲಿಸ್ಟ್, ಮಾತನಾಡಿ,“ಸಾಮಾನ್ಯವಾಗಿ ಮಾರ್ಜಿನಲ್ ಕಿಡ್ನಿಗಳನ್ನು ಬಳಸಲು ಅನೇಕ ಆಸ್ಪತ್ರೆಗಳು ಹಿಂಜರಿಯುತ್ತವೆ. ಆದರೆ ಸರಿಯಾದ ವೈದ್ಯಕೀಯ ಪರಿಶೀಲನೆ ಮತ್ತು ಅನುಭವದಿಂದ ಅವುಗಳನ್ನು ಬಳಸಿದರೆ ಅನೇಕ ಜೀವಗಳನ್ನು ಉಳಿಸಬಹುದು. ವೇಸ್ಟ್ ಆಗಬಹುದಾಗಿದ್ದ ಕಿಡ್ನಿಗಳನ್ನು ಬಳಸಿಕೊಂಡು ಇಬ್ಬರು ರೋಗಿಗಳಿಗೆ ಹೊಸ ಜೀವನ ನೀಡಲು ಸಾಧ್ಯವಾದುದು ನಮ್ಮಿಗೆ ಸಂತೋಷದ ಸಂಗತಿ” ಎಂದು ಹೇಳಿದರು.
“ಈ ಶಸ್ತ್ರಚಿಕಿತ್ಸೆ ವೈದ್ಯಕೀಯವಾಗಿ ಸವಾಲಿನದ್ದಾಗಿತ್ತು. ಆದರೆ ತಂಡದ ಸಮನ್ವಯ ಮತ್ತು ಸೂಕ್ತ ಯೋಜನೆಯಿಂದ ಎರಡೂ ಟ್ರಾನ್ಸ್‌ಪ್ಲಾಂಟ್‌ಗಳನ್ನು ಯಶಸ್ವಿಯಾಗಿ ನಡೆಸಲು ಸಾಧ್ಯವಾಯಿತು. ಇಬ್ಬರು ರೋಗಿಗಳೂ ಈಗ ಉತ್ತಮವಾಗಿ ಚೇತರಿಸಿಕೊಂಡಿದ್ದಾರೆ.” ಎಂದು ಡಾ. ದಿಲೀಪ್, ಕನ್ಸಲ್ಟಂಟ್ ಯೂರೋಲಾಜಿಸ್ಟ್ ಮತ್ತು ಕಿಡ್ನಿ ಟ್ರಾನ್ಸ್‌ಪ್ಲಾಂಟ್ ಸರ್ಜನ್, ಹೇಳಿದರು,
ಪ್ರತಿ ಅಂಗದಾನ ಅಮೂಲ್ಯ. ಕೆಲವೊಮ್ಮೆ ಬಳಸಲಾಗದಂತಿದೆ ಎಂದು ಕಾಣುವ ಅಂಗವೂ ಸರಿಯಾದ ವೈದ್ಯಕೀಯ ನಿರ್ಧಾರಗಳಿಂದ ಯಾರಿಗಾದರೂ ಜೀವದಾನವಾಗಬಹುದು. ಈ ಯಶಸ್ಸು ಅಂಗದಾನದ ಮಹತ್ವವನ್ನು ಮತ್ತೊಮ್ಮೆ ನೆನಪಿಸುತ್ತದೆ.”ಎಂದು ಡಾ. ಪ್ರಮೋದ್, ಕನ್ಸಲ್ಟಂಟ್ ಯೂರೋಲಾಜಿಸ್ಟ್ ಮತ್ತು ಕಿಡ್ನಿ ಟ್ರಾನ್ಸ್‌ಪ್ಲಾಂಟ್ ಸರ್ಜನ್, ಹೇಳಿದರು,“