ಕಂಬದಿಂದ ವಿದ್ಯುತ್ ತಂತಿ ಬಿದ್ದು ಇಬ್ಬರು ಕಾರ್ಮಿಕರ ಸ್ಥಿತಿ ಗಂಭೀರ

ಸ್ಥಳೀಯ ಸುದ್ದಿ

ರಾಘವೇಂದ್ರ ಹೆಚ್.ಎ

7/1/20251 min read

ದೊಡ್ಡಬಳ್ಳಾಪುರ: ಕಂಬದಿಂದ ವಿದ್ಯುತ್​​ ತಂತಿಬಿದ್ದು ಇಬ್ಬರು ಯುವಕರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ತಾಲ್ಲೂಕಿನ ಕರೇನಹಳ್ಳಿ ಗುಮ್ಮಘಟ್ಟ ರಾಮಯ್ಯನ ತೋಟದ ಮುಂದೆ ಇಂದು ಮದ್ಯಾಹ್ನ 12 ಗಂಟೆ ಸುಮಾರಿಗೆ ನಡೆದಿದೆ.

ಇಬ್ಬರು ಗಾಯಾಳುಗಳನ್ನು ಉತ್ತರಭಾರತ ಮೂಲದ ಮಗ್ಗದ ಕಾರ್ಮಿಕರು ಎಂದು ಹೇಳಲಾಗುತ್ತಿದೆ. ಗಾಯಾಳುಗಳನ್ನು ದೊಡ್ಡಬಳ್ಳಾಪುರ ನಗರದ ಇಸ್ಲಾಂಪುರದಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ವಿಷಯ ತಿಳಿದು ಘಟನಾ ಸ್ಥಳಕ್ಕೆ ಬೆಸ್ಕಾಂ ಅಧಿಕಾರಿಗಳು ದೌಡಾಯಿಸಿದ್ದು ಅಧಿಕಾರಿಗಳನ್ನು ಸ್ಥಳೀಯರಾದ ಜಯರಾಂ ಹಾಗು ಇತರರು ತರಾಟೆಗೆ ತೆಗೆದುಕೊಂಡಿದ್ದು ಗಾಯಾಳುಗಳಿಗೆ ಹಾಗು ಅವರ ಕುಟುಂಬಸ್ಥರಿಗೆ ಬೆಸ್ಕಾಂ ಅಧಿಕಾರಿಗಳು ಪರಿಹಾರ ನೀಡುವಂತೆ ಒತ್ತಾಯಿಸಿದ್ದಾರೆ.