ಬಾಶೆಟ್ಟಿಹಳ್ಳಿ ಚರಂಡಿಯಲ್ಲಿ ಕೊಳೆತ ಸ್ಥಿತಿಯಲ್ಲಿ ಅಪರಿಚಿತ ಶವ ಪತ್ತೆ, ಕೊಲೆ ಶಂಕೆ
ಕ್ರೈಮ್


ದೊಡ್ಡಬಳ್ಳಾಪುರ : ಮೋರಿ ಪಕ್ಕದಲ್ಲಿ ಕೊಳೆತು ನಾರುತ್ತಿದ್ದ ಗೋಣಿ ಚೀಲ ಪತ್ತೆಯಾಗಿದ್ದು, ಚೀಲದೊಳಗೆ ಪುರುಷನ ಶವ ಪತ್ತೆಯಾಗಿದೆ, ದುಶ್ಕರ್ಮಿಗಳು ವ್ಯಕ್ತಿಯನ್ನ ಕೊಲೆಗೈದು ಶವವನ್ನ ಎಸೆದು ಪರಾರಿಯಾಗಿರುವ ಸಂಶಯವನ್ನ ಪೊಲೀಸರು ವ್ಯಕ್ತಪಡಿಸಿದ್ದಾರೆ.
ದೊಡ್ಡಬಳ್ಳಾಪುರ ತಾಲೂಕಿನ ಬಾಶೆಟ್ಟಿಹಳ್ಳಿ ಪೆಟ್ರೋಲ್ ಬಂಕ್ ಹಿಂಭಾಗದಲ್ಲಿ ನಿರ್ಜನ ಪ್ರದೇಶದಲ್ಲಿ ಅಪರಿಚಿತ ಪುರುಷನ ಶವ ಪತ್ತೆಯಾಗಿದೆ, ಸ್ಥಳಕ್ಕೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ, ಡಿವೈಎಸ್ಪಿ ರವಿಯವರು ಸ್ಥಳಕ್ಕೆ ಭೇಟಿ ನೀಡಿ ಮಾಹಿತ ಪಡೆದರು.
ಶ್ವಾನ ದಳ ಮತ್ತು ಪೋರೆನ್ಸಿಕ್ ತಂಡ ಸ್ಥಳಕ್ಕೆ ಭೇಟಿ ನೀಡಿ ಸಾಕ್ಷ್ಯಗಳನ್ನ ಕಲೆ ಹಾಕಿದ್ದಾರೆ, ಸುಮಾರು 40 ವರ್ಷದ ಪುರುಷನ ಶವವಾಗಿದ್ದು, ದೇಹದಲ್ಲಿ ಜನಿವಾರ ಮತ್ತು ರುದ್ರಾಕ್ಷಿ ಮಾಲೆ ಪತ್ತೆಯಾಗಿದೆ ಎಂದು ಪೊಲೀಸರಿಂದ ಮಾಹಿತಿ ತಿಳಿದು ಬಂದಿದೆ, ಯಾರೋ ದುಶ್ಕರ್ಮಿಗಳು ಬೇರೆಡೆ ಕೊಲೆ ಮಾಡಿ ಶವವನ್ನ ಎಸೆದು ಪರಾರಿಯಾಗಿರುವ ಸಂಶಯ ವ್ಯಕ್ತವಾಗಿದೆ. ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ತನಿಖೆ ಆರಂಭಿಸಿದ್ದಾರೆ.